ಲಕ್ನೋ ( ಡಿ. 06 )  ಘನಘೋರ ಸುದ್ದಿಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಹಣಕಾಸಿನ ಜಟಾಪಟಿಗಾಗಿ ಯುವಕನೊಬ್ಬ ತನ್ನ ಪುರುಷತ್ವವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಬಂದಿದೆ.

ಮದುವೆಗೆ ಮೂರು ದಿನವಿರುವಾಗಲೇ  ಆತನ ಒಂದು ಕಾಲದ ಸ್ನೇಹಿತರು ಮರ್ಮಾಂಗ  ಕತ್ತಿರಿಸಿದ್ದಾರೆ.  ಉತ್ತರ ಪ್ರದೇಶದ ಕೊಟ್ಟಾಲಿ ನಗರದ ಇದಗ್ ಪ್ರದೇಶದಲ್ಲಿ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಟ್ಯಾಟೂ ಹುಚ್ಚು.. ಹಾಕಿಸಿಕೊಳ್ಳಲು ಅಡ್ಡಿ ಎಂದು ಶಿಶ್ನಕ್ಕೆ ಕತ್ತರಿ

ಸಮೀರ್ ಮದುವೆಗೆ ಮೂರು ದಿನಗಳ ಬಾಕಿ ಇತ್ತು. ಫರ್ವೇಜ್ ಬಳಿ ಸಮೀರ್ ಒಂದು ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಅದೇ ವಿಚಾರವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳ ನಡೆದಿತ್ತು. ಹಣಕಾಸಿನ ಸಂಬಂಧ ಸಮೀರ್ ಮತ್ತು ಫರ್ವೇಜ್ ಮಧ್ಯೆ ಗಲಾಟೆ ನಡೆಯುತ್ತಿತ್ತು.

ಈ ಮಧ್ಯೆ ಯುವಕನಿಗೆ ಮದುವೆ ನಿಶ್ಚಯವಾಗಿದೆ  ಹಣ ಕೊಡದ ಹಿನ್ನೆಲೆ ಕೋಪಗೊಂಡಿದ್ದ ಸಮೀರ್ ತನ್ನಿಬ್ಬರು ಗೆಳೆಯರನ್ನ ಸಮೀರ್ ಬಳಿ ಕಳುಹಿಸಿದ್ದಾರೆ. ಇಬ್ಬರು  ಸಮೀರ್ ನನ್ನು ಗ್ರಾಮದ ಹೊರವಲಯಕ್ಕೆ ಕರೆ ತಂದಿದ್ದಾರೆ. ಇಲ್ಲಿ ಮಾತಿಗೆ ಮಾತು ಬೆಳೆದಿದೆ. ಮೂವರು ಆರೋಪಿಗಳು ಯುವಕನ ಮರ್ಮಾಂಗ ಕತ್ತರಿಸಿ ಎಸ್ಕೇಪ್ ಆಗಿದ್ದಾರೆ.

ಗಾಯಗೊಂಡು ಬಿದ್ದಿದ್ದ ಸಮೀರ್ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಕೂಗಾಟ ಕೇಳಿದ ದಾರಿಹೋಕರು ಯುವಕನನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ದಾರೆ.