ಪ್ರೈವೇಟ್ ಪಾರ್ಟೂ ಬಿಡದೇ ಟ್ಯಾಟೂ, ಅಡ್ಡಿ ಎಂದು ಶಿಶ್ನ ಕತ್ತರಿಸಿಕೊಂಡನ್ನೊಬ್ಬ!
ಕೆಲವರಿಗೆ ವಿಚಿತ್ರ ಹವ್ಯಾಸಗಳಿರುತ್ತವೆ. ಅವುಗಳಿಂದಲೇ ಏನೋ ದಾಖಲೆಗಳನ್ನು ಸೃಷ್ಟಿಸುವ ಹಂಬಲ. ಇದರಿಂದ ಹಲವರ ಪ್ರತಿಭೆ ಅನಾವರಣಗೊಳ್ಳುವುದು ಸುಳ್ಳಲ್ಲ. ಪಾಲ್ ಎಂಬ ಟ್ಯಾಟೂ ಕಲಾವಿದನ ದೇಹದ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ. ದೇಹದ ಪೂರ್ತಿ ಟ್ಯಾಟೂ ಹಾಕ್ಕೊಂಡ ಇವನು, ಬಟ್ಟೆಗಿಂತಲೂ ಅಚ್ಚೆಯಿಂದಲೇ ದೇಹವನ್ನು ಮುಚ್ಚಿಕೊಳ್ಳುವುದು ಒಳ್ಳೆಯದೆಂದು ನಂಬಿದಂತಿದೆ. ಪ್ರೈವೇಟ್ ಪಾರ್ಟನ್ನೂ ಬಿಡದೇ ಅಚ್ಚೆ ಚುಚ್ಚಿಕೊಂಡು ಪಾಲ್ ಹಾಗೂ ದೇಹ ಸುಂದರವಾಗಿಲ್ಲವೆಂಬ ಕಾರಣಕ್ಕೆ ಕಪ್ಪು ಬಣ್ಣದ ಟ್ಯಾಟೂ ಹಾಕಿಸಿಕೊಂಡು, ತಮ್ಮ ಶಿಶ್ನವನ್ನೇ ಕತ್ತರಿಸಿಕೊಂಡ ರಷ್ಯಾದ Adam Curlykale ಎಂಬುವರ ಫೋಟೋಸ್ ನೋಡಿ....
ಬರ್ಲಿಲ್‌ನಲ್ಲಿ ವಾಸಿಸುತ್ತಿರುವ ಪಾಲ್ ಎಂಬ ಅಚ್ಚೆ ಕಲಾವಿದನ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದೆ. ಇವನ ಕ್ರೇಜಿಗೆ ಜನರು ಮೂಕ ವಿಸ್ಮಿತರಾಗಿದ್ದಾರೆ.
ಪಾಲ್ ಬರ್ಲಿನ್‌ನ ಅಂಗಡಿಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಬ್‌ವೊಂದರಲ್ಲಿ ಡಿಜೆ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಾಡಿ ಆರ್ಟ್‌ನಲ್ಲಿ ನಿರತರಾಗಿದ್ದಾರೆ.
ಇಡೀ ದೇಹವನ್ನೇ ಕಪ್ಪು ಇಂಕಿನಿಂದ ಮುಚ್ಚಿಕೊಂಡಿರು ಪಾಲ್, ಮುಖವನ್ನು ಮಾತ್ರ ಹಾಗೇ ಬಿಟ್ಟು ಕೊಂಡಿರುವುದು ವಿಶೇಷ.
ಈ 33 ವರ್ಷದ ಸೃಜನಶೀಲ ಪೌಲ್ ಫೋಟೋಗಳನ್ನು ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಇವರು ತಮ್ಮ ದೇಹವನ್ನು ಕಲಾ ಅಂಗಡಿ ಎಂದೇ ಹೆಸರಿಸಿಕೊಂಡಿದ್ದಾರೆ. ಇವರ ಚಿತ್ರಗಳನ್ನು ಅವರ ಸ್ನೇಹಿತ ಆಂಡ್ರೆಗಲಾಡ್ ಕ್ಲಿಕ್ ಮಾಡಿದ್ದಾರೆ.
ಮೊದ ಮೊದಲು ಅಚ್ಚೆ ಹಾಕಿಸಿಕೊಳ್ಳುವುದೆಂದರೆ ಇವರಿಗೆ ಎಲ್ಲಿಲ್ಲದ ಭಯವಿತ್ತಂತೆ. ನಿಧಾನಕ್ಕೆ ಅದಕ್ಕೆ ಅಭ್ಯಾಸವಾಗಿದ್ದು ಮಾತ್ರವಲ್ಲ, ಅದರದ್ದೇ ಗೀಳು ಹಚ್ಚಿಸಿಕೊಂಡು, ಅಚ್ಚೆ ಲೋಕದಲ್ಲಿ ಇದೀಗ ಹೀಗೆ ತೇಲುತ್ತಿದ್ದಾರೆ.
ಮೂರು ವಾರಗಳಿಗೊಮ್ಮೆ ನಿರಂತರ 6 ಗಂಟೆಗಳ ಕಾಲ ಅಚ್ಚೆ ಹಾಕಿಸಿಕೊಂಡು, ಇದೀಗ ಇಡೀ ಪೂರ್ತಿ ದೇಹವನ್ನು ಕವರ್ ಮಾಡಿಕೊಂಡಿದ್ದಾರೆ.
ಅಚ್ಚೆ ಹಾಕಿಸಿಕೊಳ್ಳುವ ಎಷ್ಟೇ ಕ್ರೆಜ್ ಇದ್ದರೂ ಯಾರೂ, ಕಂಕುಳಿನ ಕೆಳಗೆ ಹಾಗೂ ಪ್ರೈವೇಟ್ ಪಾರ್ಟಿನ ಸುದ್ದಿಗೆ ಹೋಗುವುದಿಲ್ಲ. ಅದಕ್ಕೆ ಅಪವಾದವೆಂಬಂತೆ ಈ ಪಾಲ್ ಮುಖ ಹೊರತು ಪಡಿಸಿ, ದೇಹದ ಯಾವ ಭಾಗವನ್ನೂ ಬಿಡದೇ ಅಚ್ಚೆ ಹಾಕಿಸಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಪಾಲ್ ಅನೇಕ ಫೋಟೋಗಳನ್ನು ಹಂಚಿಕೊಂಡು, ತಮ್ಮ ಕಲೆಗೆ ತಾವೇ ರಾಯಭಾರಿಯಾಗಿದ್ದಾರೆ. ಅನೇಕ ಕಿರುಚಿತ್ರಗಳಲ್ಲಿಯೂ ಕಾಣಿಸಿಕೊಂಡಿರುವ ಪೌಲ್ ಬಹುತೇಕ ದೃಶ್ಯಗಳಲ್ಲಿ ಯಾವುದೇ ಬಟ್ಟೆಯನ್ನೂ ಧರಿಸಿರುವುದಿಲ್ಲ. ಬಟ್ಟೆಯ ಬದಲು ಹಚ್ಚೆಯಿಂದಲೇ ತಮ್ಮ ದೇಹವನ್ನು ಮುಚ್ಚಿ ಕೊಂಡಿರುವುದು ಇವರ ವಿಶೇಷ.
ಇದು ಮತ್ತೊಬ್ಬ ಟ್ಯಾಟೂ ಪ್ರೇಮಿಯ ಮತ್ತೊಂದು ಕಥೆ. ರಷ್ಯಾದ ಕಲಿನಿಗ್ರಾಡ್‌ನ 34 ವರ್ಷದ ಅಡಮ್ ಕರ್ಲಿಕೇಲ್ ಎಂಬಾತ ಇದೇ ಟ್ಯಾಟೂ ಪ್ರೇಮದಿಂದ ಇಡೀ ದೇಹಕ್ಕೆ ಕಪ್ಪು ಬಣ್ಣ ಬಳಿದುಕೊಂಡಿದ್ದು. ಪೌಲ್ ಮುಖವನ್ನಾದರೂ ಬಿಟ್ಟುಕೊಂಡಿದ್ದರೆ, ಈತ ಅದನ್ನೂ ಬಿಡಲಿಲ್ಲ. ಬಿಳಿ ತೊನ್ನಿನಿಂದ ಬಳಲುತ್ತಿದ್ದ ಈತನಿಗೆ ಕಪ್ಪಿನ ಮೇಲೆ ಸದಾ ಆಕರ್ಷಣೆ ಅಂತೆ. ತನ್ನ ರೋಗದಿಂದ ಖಿನ್ನತೆಗೂ ತುತ್ತಾಗಿದ್ದನಂತೆ. ಅದರಿಂದ ಹೊರ ಬರಲು ಟ್ಯಾಟು ಮೊರೆ ಹೋಗಿದ್ದಾನೆ.
ದೇಹದ ಸುಮಾರು ಶೇ.90ರಷ್ಟು ಭಾಗವನ್ನು ಟ್ಯಾಟೂವಿನಿಂದ ಮರೆ ಮಾಚಿಕೊಂಡ ಮೇಲೆ, ಆಡಮ್‌ಗೆ ಯಾಕೋ ತನ್ನ ಶಿಶ್ನವೇ ತನ್ನ ಸೌಂದರ್ಯಕ್ಕೆ ತೊಡಕಾಗುತ್ತಿದೆ ಎಂದೆನಿಸಲು ಶುರುವಾಗಿದೆ. ಅತ್ಯಂತ ಸೂಕ್ಷ್ಮಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು, ಕಡೆಗೆ ಅದನ್ನೂ ತೆಗೆದು ಹಾಕಿ ಕೊಂಡಿದ್ದ.
ಕ್ಯಾನ್ಸರ್ ಸಹ ಈತನನ್ನ ಕಾಡಿತ್ತು. ಎಲ್ಲ ನೋವನ್ನೂ ತೊಡೆದು ಹಾಕಲು ಹೋಗಿದ್ದು ಅಚ್ಚೆಯ ಮೊರೆಗೆ. ಜೀವನ ತುಂಬಾ ಸಣ್ಣದಾಗಿದೆ. ನಾಳೆ ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ಬದುಕನ್ನು ಖುಷಿಯಾಗಿ ಅನುಭವಿಸಬೇಕೆಂದು ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎನ್ನುವುದು ಆಡಮ್ ವಾದ.