ಒಂದೇ ಬಸ್‌ನಲ್ಲಿ ಸಿನಿಮೀಯ ರೀತಿ ಪ್ರಯಾಣಿಕರ ಮೊಬೈಲ್‌, ಹಣಕ್ಕೆ ಕನ್ನ!

ತಾಲೂಕಿನಲ್ಲಿ ಕಳ್ಳರ ಚಳಕ ಮುಂದುವರಿದಿದೆ. ತಾಲೂಕಿನ ವಿವಿಧೆಡೆ 3 ಬೈಕ್‌ ಕಳ್ಳತನದ ಆತಂಕದ ಘಟನೆ ಮಾಸುವ ಮುನ್ನವೆ ಬಸ್‌ ನಿಲ್ದಾಣದಲ್ಲಿ ಬಸ್‌ ಏರಲು ನಿಂತಿದ್ದ ಇಬ್ಬರ ಬ್ಯಾಗ್‌ನಿಂದ ಮೊಬೈಲ್‌ ಹಾಗೂ ಹಣ ಎಗರಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

Mobile and money theft in the same bus at uttara kannada rav

ಅಂಕೋಲಾ (ಆ.3) :  ತಾಲೂಕಿನಲ್ಲಿ ಕಳ್ಳರ ಚಳಕ ಮುಂದುವರಿದಿದೆ. ತಾಲೂಕಿನ ವಿವಿಧೆಡೆ 3 ಬೈಕ್‌ ಕಳ್ಳತನದ ಆತಂಕದ ಘಟನೆ ಮಾಸುವ ಮುನ್ನವೆ ಬಸ್‌ ನಿಲ್ದಾಣದಲ್ಲಿ ಬಸ್‌ ಏರಲು ನಿಂತಿದ್ದ ಇಬ್ಬರ ಬ್ಯಾಗ್‌ನಿಂದ ಮೊಬೈಲ್‌ ಹಾಗೂ ಹಣ ಎಗರಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ತಾಲೂಕಿನಿಂದ ದುಗ್ಗನಮನೆಗೆ ಹೋಗುವ ಬಸ್‌ ಹತ್ತುವ ವೇಳೆ ಈ ಘಟನೆ ನಡೆದಿದೆ. ಯುವತಿಯೋರ್ವಳು ಮೊಬೈಲ್‌ನಲ್ಲಿ ಮಾತಾಡಿ ಬ್ಯಾಗ್‌ನಲ್ಲಿ ಇಟ್ಟಿದ್ದಳು. ಬಸ್‌ ಏರುತ್ತಿದ್ದಂತೆ ಮೊಬೈಲ್‌ ಕಾಣೆಯಾದ ಕುರಿತು ತಿಳಿದಿದೆ. ಇದೇ ಬಸ್‌ ಏರಲು ಹೆಗ್ಗರಣಿ ಗ್ರಾಮದ ಲಿಂಗಣ್ಣ ಗೌಡ ನಿಂತಿದ್ದರು. ಅವರ ಬ್ಯಾಗ್‌ನಲ್ಲಿದ್ದ . 2 ಸಾವಿರ ಎಗರಿಸಲಾಗಿದೆ. ಈ ಕೃತ್ಯವನ್ನು ನೋಡಿದರೆ ಇದು ಪರಿಣಿತ ಕಳ್ಳರ ಕೈ ಚಳಕ ಎನ್ನುವುದು ತಿಳಿದುಬಂದಿದೆ. ಇದೇ ವೇಳೆ ಮತ್ತೊಬ್ಬರ ಪರ್ಸ್‌ ಕೂಡ ಕಳ್ಳತನವಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರೀಶೀಲನೆ ನಡೆಸಿದ್ದಾರೆ.

ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !

 

ಸಿನಿಮೀಯ ರೀತಿಯಲ್ಲಿ ಕಳ್ಳತನ ನಡೆದಿದ್ದು ಬಸ್‌ನಲ್ಲಿ 80ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದು ಅವರಿಗೆ 15 ನಿಮಿಷವಾದರೂ ಈ ದುಷ್ಕೃತ್ಯದ ಬಗ್ಗೆ ತಿಳಿದೆ ಇರಲಿಲ್ಲ.

ಸಿಸಿ ಕ್ಯಾಮೆರಾ ಇರಲಿಲ್ಲ:

ಈ ಬಸ್‌ ನಿಲ್ದಾಣದ ಮೂಲಕ ಕನಿಷ್ಠ 25 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲೆ ಸಂಚರಿಸುತ್ತಾರೆ. ಆದರೆ ಬಸ್‌ ನಿಲ್ದಾಣದ ಚಲನವಲನದ ಬಗ್ಗೆ ನಿಗಾ ಇಡಬೇಕಾಗಿದ್ದ ಸಿಸಿ ಕ್ಯಾಮೆರಾ ಅಳವಡಿಸದೆ ಇರುವುದು ಕಳ್ಳರ ನಿರಾಂತಕ ಕೈಚಳಕಕ್ಕೆ ದಾರಿಯಾಗಿದೆ. ಅಂಕೋಲಾದಲ್ಲಿ ಹೆಚ್ಚುತ್ತಿರುವ ಕಳ್ಳತನದ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸುವ ಈ ಬೃಹತ್‌ ಜಾಲದ ಪತ್ತೆ ಮಾತ್ರ ಇನ್ನು ಆಗಿಲ್ಲ.

ಇನ್ಶುರೆನ್ಸ್ ಕ್ಲೈಂಗಾಗಿ ಜ್ಯುವೆಲೆರಿ ಶಾಪ್ ಮಾಲೀಕನ ಕಳ್ಳಾಟ ಬಯಲು!

ಪೊಲೀಸರು ನಾಗರಿಕರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಬೇಕಿದೆ. ಸಾರಿಗೆ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸುವಲ್ಲಿ ತಮ್ಮ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಬೇಕಿದೆ ಎನ್ನುವುದು ನಾಗರಿಕರ ಆಗ್ರಹದ ಕೂಗಾಗಿದೆ.

ಪಿಎಸೈ ಉದಪ್ಪ ಅವರು ಬಸ್‌ ನಿಲ್ದಾಣಕ್ಕೆ ಆಗಮಿಸಿ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios