ನಗರದ ಮಾರ್ಕೆಟ್ ಫ್ಲೈಒವರ್ ಬಳಿ  2.7 ಕೆಜಿ ಚಿನ್ನ ಕಳ್ಳತನ ಪ್ರಕರಣದಲ್ಲಿ ದೂರು ಕೊಟ್ಟಿದ್ದ ಜ್ಯುವೆಲ್ಲರಿ ಮಾಲೀಕನನ್ನೇ ಬಂಧಿಸಿದ ಘಟನೆ ನಡೆದಿದೆ. ಕೈಲಾಶ್ ಜ್ಯುವೆಲ್ಲರಿ ಮಾಲೀಕ ರಾಜೇಶ್ ಜೈನ್ ಬಂಧಿತ ಆರೋಪಿ. ನಗರತ್ ಪೇಟೆಯಲ್ಲಿ ಜ್ಯುವೆಲರಿ ಶಾಪ್ ಹೊಂದಿರುವ ಮಾಲೀಕ ಇನ್ಶುರೆನ್ಸ್ ಕ್ಲೈಂಗಾಗಿ ಕಳ್ಳಾಟ  ಆಡಿದ್ದು ಪೊಲೀಸ್ ತನಿಖೆ ವೇಳೆ ಬಯಲಿಗೆ. 

ಬೆಂಗಳೂರು (ಜು.31) : ನಗರದ ಮಾರ್ಕೆಟ್ ಫ್ಲೈಒವರ್ ಬಳಿ 2.7 ಕೆಜಿ ಚಿನ್ನ ಕಳ್ಳತನ ಪ್ರಕರಣದಲ್ಲಿ ದೂರು ಕೊಟ್ಟಿದ್ದ ಜ್ಯುವೆಲ್ಲರಿ ಮಾಲೀಕನನ್ನೇ ಬಂಧಿಸಿದ ಘಟನೆ ನಡೆದಿದೆ.

ಕೈಲಾಶ್ ಜ್ಯುವೆಲ್ಲರಿ ಮಾಲೀಕ ರಾಜೇಶ್ ಜೈನ್ ಬಂಧಿತ ಆರೋಪಿ. ನಗರತ್ ಪೇಟೆಯಲ್ಲಿ ಜ್ಯುವೆಲರಿ ಶಾಪ್ ಹೊಂದಿರುವ ಮಾಲೀಕ ಇನ್ಶುರೆನ್ಸ್ ಕ್ಲೈಂಗಾಗಿ ಕಳ್ಳಾಟ ಆಡಿದ್ದು ಪೊಲೀಸ್ ತನಿಖೆ ವೇಳೆ ಬಯಲಿಗೆ. 

ಅಂದು ರಾಜ್ ಜೈನ್ ಮಾರ್ಕೆಟ್ ಫ್ಲೈಒವರ್‌ ಮೇಲೆ ಹೊಂಡಾ ಆಕ್ಟಿವ್ ದಲ್ಲಿ ಹೋಗುವಾಗ ಸಿನಿಮೀಯ ರೀತಿಯಲ್ಲಿ ಚಿನ್ನ ಕದ್ದಿದ್ದ ದುಷ್ಕರ್ಮಿಗಳು. ಈ ಬಗ್ಗೆ ಕಾಟನ್‌ಪೇಟೆಯಲ್ಲಿ ದೂರು ದಾಖಲಿಸಿದ್ದ ರಾಜ್ ಜೈನ್. ತನಿಖೆ ನಡೆಸಿದ್ದ ಪೊಲೀಸರು. ಇಬ್ಬರು ಸಿಬ್ಬಂದಿ ಬಳಸಿಕೊಂಡು ತಾನೇ ಕೃತ್ಯ ಎಸಗಿರೋದು ಪತ್ತೆ ಹಚ್ಚಿದ ಪೊಲೀಸರು. ಇನ್ಶುರೆನ್ಸ್ ಕ್ಲೈಂ ಗಾಗಿ ಸಿಬ್ಬಂದಿ ಬಳಸಿಕೊಂಡು ತಾನೇ ಕಳ್ಳತನ ಮಾಡಿಸಿ ನಾಟಕ ಆಡಿದ್ದ ರಾಜ್‌ಜೈನ್. ಈ ಬಗ್ಗೆ ಅನುಮಾನಗೊಂಡು ಜ್ಯುವೆಲ್ಲರಿ ಮಾಲೀಕನನ್ನು ವಿಚಾರಣೆಗೆ ಕರೆದ ಪೊಲೀಸರು.

ಮೊಬೈಲ್ ಖರೀದಿಸಲು 7 ಗ್ರಾಂ ಬಂಗಾರ ಕದ್ದ ಪ್ರಕರಣ; ಕಿರುಕುಳ ತಾಳದೆ ವಿದ್ಯಾರ್ಥಿ ಆತ್ಮಹತ್ಯೆ

ಈ ಪ್ರಕರಣ ತನ್ನ ಬುಡಕ್ಕೆ ಬಂದ ಬಳಿಕ ರಾಜ್‌ ಜೈನ್ ನಡುಕ ಶುರುವಾಗಿದೆ. ಪೊಲೀಸರ ತಮ್ಮ ರೀತಿಯಲ್ಲೇ ವಿಚಾರಣೆ ಮುಂದುವರಿಸಿದಾಗ ತಾನೇ ಕೃತ್ಯವೆಸಗಿರೋದಾಗಿ ಬಾಯಿಬಿಟ್ಟ ಮಾಲೀಕ. ಇನ್ಸ್ಯೂರೆನ್ಸ್ ಕ್ಲೈಂ ಗಾಗಿ ಈ ಕೃತ್ಯ ಮಾಡಿದ್ದಾಗಿ ಒಪ್ಪಿಕೊಂಡಿರೋ ಮಾಲೀಕ. ಸದ್ಯ ಅಂಗಡಿ ಮಾಲೀಕ ಹಾಗೂ ಇಬ್ಬರು ಬಾಲಾಪರಾಧಿಗಳ ಬಂಧಿಸಿದ ಕಾಟನ್ ಪೇಟೆ ಪೊಲೀಸರು ಬಂಧಿತರಿಂದ ೨.೭ ಕೆಜಿ ಚಿನ್ನಾಭರಣ ವಶಕ್ಕೆ.

ಬಸ್‌ ಹತ್ತುವ ವೇಳೆ ಚಿನ್ನದ ಸರ ಕಳವು

ಮಳವಳ್ಳಿ: ಪಟ್ಟಣದಲ್ಲಿ ಸಾರಿಗೆ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುವ ನೂಕುನುಗ್ಗಲಿನಲ್ಲಿ ಮಹಿಳೆಯ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಎಗರಿಸಿರುವ ಘಟನೆ ನಡೆದಿದೆ. ತಾಲೂಕಿನ ಪಂಡಿತಹಳ್ಳಿ ವಿಜಯ…ಕುಮಾರ್‌ ಪತ್ನಿ ಸೌಮ್ಯಾ ಚಿನ್ನದ ಸರ ಕಳೆದುಕೊಂಡ ಮಹಿಳೆ. ಸಂಬಂಧಿಕರೊಂದಿಗೆ ಪಟ್ಟಣಕ್ಕೆ ಬಂದಿದ್ದ 60 ಸೌಮ್ಯಾ ಸ್ವಗ್ರಾಮಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ ಹತ್ತುವ ವೇಳೆ ಸಾಕಷ್ಟುನೂಕುನುಗ್ಗಲು ಉಂಟಾಗಿತ್ತು ಎನ್ನಲಾಗಿದೆ. ಈ ವೇಳೆ ಕತ್ತಿನಲ್ಲಿದ್ದ ಸುಮಾರು 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಎಗರಿಸಿ ಪರಾರಿಯಾಗಿದ್ದಾರೆ. ಬಸ್‌ ಹತ್ತಿದ ನಂತರ ಸರ ಕಳವಾಗಿರುವುದನ್ನು ಗಮನಿಸಿದ ಮಹಿಳೆ ಪಟ್ಟಣದ ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪಟ್ಟಣದ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.