ಮುರುಘಾಶ್ರೀ ಪ್ರಕರಣ: ಎಸ್.ಕೆ‌ ಬಸವರಾಜನ್ ದಂಪತಿ ವಿರುದ್ದ Atrocity Case ದಾಖಲಿಸಲು ದಲಿತ ಸಂಘಟನೆ ಆಗ್ರಹ

  • ಮುರುಘಾ ಶ್ರೀ ವಿರುದ್ದದ ಪೊಕ್ಸೋ ಪ್ರಕರಣದಲ್ಲಿ ದಲಿತ ಬಾಲಕಿ ದುರ್ಬಳಕೆ ಆರೋಪ.
  • ಎಸ್.ಕೆ‌ ಬಸವರಾಜನ್ ದಂಪತಿ ವಿರುದ್ದ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಗಂಭೀರ ಆರೋಪ.
  • ಬಸವರಾಜನ್ ವಿರುದ್ದ ಪೋಕ್ಸೋ, ಅಟ್ರಾಸಿಟಿ ಕೇಸ್ ದಾಖಲಿಸಿ ಬಂಧಿಸುವಂತೆ ಆಗ್ರಹ.
misuse  of dalit girls in Murughashree case Dalit organizations are outraged chitradurga

ವರದಿ: ಕಿರಣ್ ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.8) : ಮುರುಘಾ ಶ್ರೀ ವಿರುದ್ದದ ಪೋಕ್ಸೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಈಗಾಗಲೇ ಕಳೆದ ಒಂದು ತಿಂಗಳಿಂದಲೂ ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆದ್ರೆ ಇತ್ತ ದಲಿತ ಸಮುದಾಯದ ಒಕ್ಕೂಟ ಒಂದೆಡೆ ಸೇರಿ ನಮ್ಮ ಸಮುದಾಯದ ಬಾಲಕಿಗೆ ಅನ್ಯಾಯ ಆಗ್ತಿದೆ. ಈ ಕೇಸ್ ನಲ್ಲಿ ಅವರನ್ನು ದುರ್ಬಳಕೆ ಮಾಡಿಕೊಂಡು ಇಂದು ಅವರನ್ನು ಬೀದಿಗೆ ಬಿಟ್ಟಿದ್ದಾರೆ ಎಂದು ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ದಂಪತಿ ವಿರುದ್ದ ದಲಿತ ಮುಖಂಡರು ಕಿಡಿಕಾರಿದ್ದಾರೆ. 

Murugashreeಗೆ ಮತ್ತೆ ಜೈಲೇ ಗತಿ: ನ್ಯಾಯಾಂಗ ಬಂಧನ ಅವಧಿ 14 ದಿನಗಳ ಕಾಲ ವಿಸ್ತರಣೆ

ಈ ಪ್ರಕರಣವು ಮೇಲ್ನೋಟಕ್ಕೆ ಷಡ್ಯಂತ್ರ ಎಂದು ಕಂಡು ಬರ್ತಿರೋದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಆದ್ರೆ ನಮ್ಮ ಸಮುದಾಯದ ಬಾಲಕಿಯನ್ನು ದುರ್ಬಳಕೆ ‌ಮಾಡಿಕೊಂಡಿದ್ದು ಅಕ್ಷಮ್ಯ ಅಪರಾದ. ಕೂಡಲೇ ಅವರ ವಿರುದ್ದ ಪೋಕ್ಸೋ(Pocso) ಅಟ್ರಾಸಿಟಿ ಕೇಸ್(Atrocity Case) ದಾಖಲಿಸಿ ಬಂಧನ ಮಾಡಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗ(Chitradurga) ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದಲಿತ ಮುಖಂಡರುಗಳಾದ ಹನುಮಂತಪ್ಪ ದುರ್ಗದ್, ಬಾಳೆಕಾಯಿ ಶ್ರೀನಿವಾಸ್, ಕುಂಚಿಗನಾಳ್‌ ಮಹಾಲಿಂಗಪ್ಪ ಅವರು,‌ ದಲಿತ ಮತ್ತು ಹಿಂದುಳಿದ ವರ್ಗಗಳ ಜನಾಂಗದ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಬಳಸಿಕೊಂಡು CD ಮಾಡಲಾಗಿದೆ ಎಂದು ಪ್ರಚಾರ ಮಾಡಿದ್ದು, CD ಮಾಡಲು ದಲಿತ ಬಾಲಕಿಯನ್ನು ಬಳಸಿಕೊಂಡಿರುವ ಮಾಜಿ ಆಡಳಿತಾಧಿಕಾರಿ ಮತ್ತು ಇತರರ ಮೇಲೆ ಪೋಕ್ಸೊ ಕಾಯ್ದೆ(Pocso act) ಮತ್ತು ಅಟ್ರಾಸಿಟಿ ಕಾಯ್ದೆಯನ್ವಯ ಕೇಸು ದಾಖಲಿಸಲು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದರು.

ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆ(Cottonpet Police Station)ಗೆ ದಲಿತ ಜನಾಂಗದ ಅಪ್ರಾಪ್ತ ಬಾಲಕಿಯರು ದೂರು ದಾಖಲಿಸಲು ಹೋದ ಸಂದರ್ಭದಲ್ಲಿ ಯಾರ ವಿರುದ್ಧವೂ ಕೇಸು ದಾಖಲಿಸಿರಲಿಲ್ಲ. ಆದರೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಿಂದ ಬಾಲಕಿಯರಿಬ್ಬರನ್ನು ಕರೆದುಕೊಂಡು ಬರಲು ಹೋಗಿದ್ದ ಮಠದ ಆಡಳಿತಾಧಿಕಾರಿ ಮತ್ತು ಅವರ ಜೊತೆಯಲ್ಲಿದ್ದ ಇತರರು ಬಾಲಕಿಯರನ್ನು ಕರೆದುಕೊಂಡು ಬಂದು ಮಠದ ಹಾಸ್ಟೆಲ್‌ನಲ್ಲಿ ಬಿಡುವ ಬದಲಾಗಿ ಅವರ ಸ್ವಂತ ಮನೆಯಲ್ಲಿರಿಸಿಕೊಂಡು ಮತ್ತು ಅವರಿಗೆ ಬೇಕಾದವರ ತೋಟದಲ್ಲಿ ಕೆಲ ದಿನಗಳ ಕಾಲ ಇರಿಸಿ ಬಾಲಕಿಯರಿಬ್ಬರಿಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದು, ಬಹಳ ಸ್ಪಷ್ಟವಾಗಿ ಪೋಕ್ಸೊ ಮತ್ತು ಅಟ್ರಾಸಿಟಿ ಕಾಯ್ದೆಗಳು ಉಲ್ಲಂಘನೆಯಾಗಿದ್ದು ಮೇಲ್ನೋಟಕ್ಕೆ ಕಾಣುತ್ತದೆ. 

ದಲಿತ ಬಾಲಕಿಯನ್ನು ಬಳಸಿಕೊಂಡು CD ಮಾಡಿದ್ದೇವೆಂದು ಬಾಲಕಿಯರನ್ನು ಬಳಸಿಕೊಂಡು ಕೆಲವರಿಗೆ ಬ್ಲಾಕ್‌ಮೇಲ್(Blackmail) ಮಾಡಿದ್ದು, ಮತ್ತೆ ಕೆಲವರ ವಿರುದ್ಧ ಕೇಸು ದಾಖಲಿಸಿದ್ದು, ಇದೊಂದು ರಾಜಕೀಯ ಷಡ್ಯಂತರವಾಗಿದೆ. ಇಂಥ ಹೀನ ಕೃತ್ಯಕ್ಕೆ ಕೈಹಾಕಿದ್ದಾರೆ. ಮೈಸೂರಿನ 'ಒಡನಾಡಿ' ಸಂಸ್ಥೆಯ ಸ್ಟ್ಯಾನ್ಲಿ ಪರುಶು ರವರ ಮುಖಾಂತರ ಕೇಸು ದಾಖಲಿಸುವ ಹುನ್ನಾರ ನಡೆಸಿದ್ದಾರೆ. ಈ ಇಡೀ ಪ್ರಕರಣಕ್ಕೆ ದಲಿತ ಬಾಲಕಿಯರನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ಮಾಜಿ ಆಡಳಿತಾಧಿಕಾರಿ ಮತ್ತು ಇತರರ ವಿರುದ್ಧ ಪೋಕ್ಸೊ ಮತ್ತು ಅಟ್ರಾಸಿಟಿ ಕಾಯ್ದೆಗಳನ್ವಯ ಕೇಸು ದಾಖಲಿಸಿ ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

POCSO Case: ಮುರುಘಾಶ್ರೀ ವಿರುದ್ಧ ಪ್ರಕರಣ ದಾಖಲು, ಮೊದಲ ಬಾರಿಗೆ ಸಿಎಂ ಪ್ರತಿಕ್ರಿಯೆ

ಸಂತ್ರಸ್ತ ದಲಿತ ಅಪ್ರಾಪ್ತ ಬಾಲಕಿಯರ ಪೋಷಕರು ಕಳೆದೆರಡು ತಿಂಗಳಿನಿಂದ ಎಲ್ಲಿದ್ದಾರೆಯೇ ಎನ್ನುವುದು ಮಾಹಿತಿ ಲಭ್ಯವಾಗುತ್ತಿಲ್ಲ. ಅವರ ಕಣ್ಮರೆ ಹಿಂದೆ ಆಡಳಿತಾಧಿಕಾರಿ ಮತ್ತು ಇತರರ ಕೈವಾಡ ಇರುವುದು ಕಂಡು ಬರುತ್ತಿದ್ದು, ಇವರ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬೀಳುತ್ತದೆ. ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಿಂದ ಬಾಲಕಿಯರನ್ನು ಕರೆದುಕೊಂಡು ಬಂದ ಮಾಜಿ ಆಡಳಿತಾಧಿಕಾರಿ ಮತ್ತು ಇತರರು ಅವರ ಮನೆಯಲ್ಲಿಯೇ ಒಂದುವರೆ ತಿಂಗಳು ಹಾಗೆಯೇ ಆ ಅವಧಿಯಲ್ಲಿ ಬಾಲಕಿಯರ ತಲೆಗೆ ಇಟ್ಟುಕೊಂಡಿದ್ದು ಏಕೆ?  ಇವುಗಳೆಲ್ಲವೂ ಕೂಡ ತನಿಖೆ ಆಗಬೇಕಾದ ಅಗತ್ಯವಿದ್ದು, 21ನೇ ಶತಮಾನದಲ್ಲೂ ಸಹ ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ಮತ್ತೆ ಮತ್ತೆ ಶೋಷಣೆ ಮಾಡುತ್ತಿರುವುದು ಈ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.  

Latest Videos
Follow Us:
Download App:
  • android
  • ios