Asianet Suvarna News Asianet Suvarna News

Murugashreeಗೆ ಮತ್ತೆ ಜೈಲೇ ಗತಿ: ನ್ಯಾಯಾಂಗ ಬಂಧನ ಅವಧಿ 14 ದಿನಗಳ ಕಾಲ ವಿಸ್ತರಣೆ

ಚಿತ್ರದುರ್ಗದ ಮುರುಘಾ ಶ್ರೀಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ. ಅಲ್ಲದೆ, ಎರಡನೇ ಆರೋಪಿ ರಶ್ಮಿಗೂ ಬಂಧನ ಅವಧಿ ವಿಸ್ತರಣೆಯಾಗಿದ್ದು, ಇಬ್ಬರನ್ನೂ ಜೈಲಿಗೆ ಕರೆದೊಯ್ಯಲಾಗಿದೆ. 

murugashree judicial custody extended by 14 more days ash
Author
First Published Sep 27, 2022, 3:36 PM IST

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಮತ್ತಷ್ಟು ದಿನಗಳ ಕಾಲ ಮುರುಘಾಶ್ರೀ ಅವರಿಗೆ ಜೈಲೇ ಗತಿ ಎನ್ನುವಂತಾಗಿದೆ. ಮುರುಘಾಶ್ರೀ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಅವಧಿ ಅಕ್ಟೋಬರ್ 10 ರವರೆಗೆ ವಿಸ್ತರಣೆಯಾಗಿದೆ. ಪ್ರಕರಣದ 2ನೇ ಆರೋಪಿ ಲೇಡಿ ವಾರ್ಡನ್ ಅವರ ನ್ಯಾಯಾಂಗ ಬಂಧನ ಅವಧಿ ಸಹ ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಇಂದು ಮುರುಘಾಶ್ರೀ ನ್ಯಾಯಾಂಗ ಬಂಧನ ಅವಧಿ ಅಂತ್ಯ ಹಿನ್ನೆಲೆ ಅವರನ್ನು ಕಾರಾಗೃಹದಿಮದ ಕೋರ್ಟ್‌ಗೆ ಪೊಲೀಸರು ಕರೆದೊಯ್ದಿದ್ದರು. ಮುರುಘಾ ಶ್ರೀಯನ್ನು ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು. ಅಲ್ಲದೆ, ಪ್ರಕರಣದ 2ನೇ ಆರೋಪಿ ಲೇಡಿ ವಾರ್ಡನ್ ಸಹ ಕೋರ್ಟ್‌ಗೆ ಹಾಜರಾಗಿದ್ದರು. ಶಿವಮೊಗ್ಗದ ಜೈಲಿನಿಂದ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದುಕೊಂಡು ಬಂದು ನ್ಯಾಯಾಲಯದ ಎದುರು ಹಾಜರುಪಡಿಸಲಾಯ್ತು.

ನಂತರ, ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಇಬ್ಬರೂ ಆರೋಪಿಗಳ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿತು. ಈ ಹಿನ್ನೆಲೆ ಮತ್ತೆ ಅವರನ್ನು ಜೈಲಿಗೆ ಕರೆದೊಯ್ಯಲಾಗಿದೆ. ಮುರುಘಾಶ್ರೀಗೆ ಮತ್ತೆ 14 ದಿನಗಳ ಕಾಲ ಜೈಲೇ ಗತಿಯಾಗಿದ್ದು, ಈ ಹಿನ್ನೆಲೆ ಪೊಲೀಸರು ಜೈಲಿಗೆ ಕರೆದುಕೊಂಡು ಹೋದರು. 

ಇದನ್ನು ಓದಿ: ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!

ಹಾಗೆ, ಎರಡನೇ ಆರೋಪಿ ರಶ್ಮಿಗೂ ಮತ್ತೆ 14 ದಿನ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದ್ದು, ಈ ಹಿನ್ನೆಲೆ ಶಿವಮೊಗ್ಗ ಕಾರಾಗೃಹಕ್ಕೆ ಪೊಲೀಸರು ಕರೆದೊಯ್ದಿದ್ದಾರೆ. 

ಚಿತ್ರದುರ್ಗದ ಮುರುಘಾ ಮಠದಲ್ಲಿ (Murugha Mutt) ಮಕ್ಕಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ (Sexual Assault) ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀಗಳನ್ನು ಸೆಪ್ಟೆಂಬರ್ 1ರಂದು ಬಂಧಿಸಲಾಗಿತ್ತು. ಪೋಕ್ಸೋ ಕೇಸ್‌ನಲ್ಲಿ (POCSO Case) ದೂರು ದಾಖಲಾದ 6 ದಿನಗಳ ನಂತರ ಬಂಧನವಾಗಿತ್ತು. ಚಿತ್ರದುರ್ಗದ ಮಠದಲ್ಲೇ ರಾತ್ರಿ 7.45 ರಿಂದ ವಿಚಾರಣೆ ನಡೆಸಿ ನಂತರ ಪೊಲೀಸರು ಮುರುಘಾ ಶ್ರೀಗಳನ್ನು ಬಂಧಿಸಿಸಲಾಗಿತ್ತು.
.ಇದನ್ನೂ ಓದಿ: ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿದ ಕೋರ್ಟ್

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮೈಸೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುರುಘಾ ಶರಣರು ಸೇರಿದಂತೆ ವಸತಿ ನಿಲಯದ ವಾರ್ಡನ್‌ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಪರಮಶಿವಯ್ಯ, ವಕೀಲ ಗಂಗಾಧರಯ್ಯ ವಿರುದ್ಧ ಪೋಕ್ಸೊ ಹಾಗೂ ಪರಿಶಿಷ್ಟಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದಯಡಿ ಪ್ರಕರಣ ದಾಖಲಾಗಿದೆ. ಮುರುಘಾ ಶರಣರು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುತ್ತಿದ್ದರು. ಉಳಿದ ಆರೋಪಿಗಳು ಈ ಕೃತ್ಯಕ್ಕೆ ಸಹಕಾರ ನೀಡಿದ್ದರು ಎಂಬ ಆರೋಪವೂ ಇದೆ.

Follow Us:
Download App:
  • android
  • ios