Bengaluru crime: ಉದ್ಯಮಿ ಮನೆಯಿಂದ 1 ಕೇಜಿ ಚಿನ್ನ ಕದ್ದೊಯ್ದ ದುಷ್ಕರ್ಮಿಗಳು!
ಸಾಫ್ಟ್‌ವೇರ್ ಕಂಪನಿ ಮಾಲಿಕರೊಬ್ಬರ ಮನೆ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿರುವ ದುಷ್ಕರ್ಮಿಗಳು ನಗದು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಆ.22) : ಸಾಫ್ಟ್‌ವೇರ್ ಕಂಪನಿ ಮಾಲಿಕರೊಬ್ಬರ ಮನೆ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿರುವ ದುಷ್ಕರ್ಮಿಗಳು ನಗದು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಲ್ತ್ ಲೇಔಟ್(Health layout) ನಿವಾಸಿ ಕೆ.ಎ.ಪ್ರಸನ್ನ ಕುಮಾರ್(K Prasanna kumar) ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು .5.50 ಲಕ್ಷ ನಗದು ಹಾಗೂ ಬರೋಬ್ಬರಿ .55 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳತನ ಆರೋಪ ಹೊರಿಸಿದ್ದ ಮಾಲಿಕ: ಮನ ನೊಂದು ಕಾರು ಚಾಲಕ ನೇಣಿಗೆ ಶರಣು!
ಸಾಫ್ಟ್‌ವೇರ್ ಕಂಪನಿ ಮಾಲಿಕ ಪ್ರಸನ್ನ ಕುಮಾರ್ ಹೊಸ ಮನೆ ಕಟ್ಟಿಸುತ್ತಿದ್ದಾರೆ. ಹೀಗಾಗಿ ಆ.19ರ ಮಧ್ಯಾಹ್ನ ಹೊಸ ಮನೆಯ ಬಳಿಗೆ ಹೋಗಿದ್ದರು. ಇತ್ತ ಪತ್ನಿ ಮತ್ತು ಮಕ್ಕಳು ಶಾಪಿಂಗ್ ಮಾಡಲು ಹೊರಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ನೋಡಿಕೊಂಡು ದುಷ್ಕರ್ಮಿಗಳು ಬಾಗಿಲ ಬೀಗ ಮುರಿದು ಒಳ ನುಗ್ಗಿ ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮನೆಯವರು ಶಾಪಿಂಗ್ ಮುಗಿಸಿಕೊಂಡು ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಗಗನಸಖಿಯರಿಗೆ ಲೈಂಗಿಕ ಕಿರುಕುಳ; ಮಾಲ್ಡೀವ್ಸ್ ಮೂಲದ ಅಕ್ರಂ ಮಹಮದ್ ಬಂಧನ