ವಿಮಾನ ಪ್ರಯಾಣದ ವೇಳೆ ಇಬ್ಬರು ಗಗನ ಸಖಿಯರ ಜತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.

ಬೆಂಗಳೂರು (ಆ.22) :  ವಿಮಾನ ಪ್ರಯಾಣದ ವೇಳೆ ಇಬ್ಬರು ಗಗನ ಸಖಿಯರ ಜತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.

ಮಾಲ್ಡೀವ್‌್ಸ ಮೂಲದ ಅಕ್ರಂ ಮಹಮದ್‌(51) ಬಂಧಿತ. ಆ.18ರಂದು ಘಟನೆ ನಡೆದಿದೆ. ಖಾಸಗಿ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ನೀಡಿದ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ: 74ರ ನಿವೃತ್ತ ಪಿಎಸ್‌ಐ ಸೆರೆ

ಆರೋಪಿಯು ಆ.18ರಂದು ಮಾಲ್ಡೀವ್‌್ಸನ ಮಾಲೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Kempegowda airport)ಕ್ಕೆ ಪ್ರಯಾಣಿಸಿದ್ದ. ಪ್ರಯಾಣದ ವೇಳೆ ವಿಮಾನದಲ್ಲಿ ಗಗನಸಖಿಯನ್ನು ಕರೆದು ಬಿಯರ್‌ ಮತ್ತು ಗೋಡಂಬಿ ಕೇಳಿದ್ದಾನೆ. ಅದರಂತೆ ಆ ಗಗನಸಖಿ ಬಿಯರ್‌ ಮತ್ತು ಗೋಡಂಬಿ ತಂದು ಕೊಟ್ಟಿದ್ದಾರೆ. ಆಗ ಆರೋಪಿಯು ‘ನಾನು ನಿನ್ನಂತಹ ಹುಡುಗಿಯನ್ನು ಹುಡುಕುತ್ತಿದ್ದೆ. ಸೇವೆಗೆ ನೀನು ಎಷ್ಟುಶುಲ್ಕ ಕೇಳುವೆ. ಯಾವಾಗ ನೀನು ಬಿಡುವಾಗುವೆ’ ಎಂದು ಕೇಳಿದ್ದಾನೆ. ಮುಂದುವರೆದು, ‘ನಿನ್ನಂತಹ ಹುಡುಗಿಯನ್ನು ನಾನು 51 ವರ್ಷದಿಂದ ಹುಡುಕುತ್ತಿದ್ದೆ. 10 ಡಾಲರ್‌ ಬದಲು 100 ಡಾಲರ್‌ ನೀಡುತ್ತೇನೆ. ಉಳಿದ ಹಣವನ್ನು ನಿನ್ನ ಬಳಿಯೇ ಇರಿಸಿಕೋ’ ಎಂದು ಗಗನಸಖಿಯ ದೇಹವನ್ನು ಕೈನಿಂದ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ನೊಂದ ಗಗನ ಸಖಿಯರು ಆರೋಪಿ ಅಕ್ರಂ ವರ್ತನೆ ಹಾಗೂ ಕಿರುಕುಳದ ಬಗ್ಗೆ ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವೇಳೆ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯು ಆರೋಪಿ ಅಕ್ರಂ ವಿರುದ್ಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಕ್ರಂ ಮಾಲ್ಡೀವ್‌್ಸನಿಂದ ಭಾರತಕ್ಕೆ ಬಿಜಿನೆಸ್‌ ವೀಸಾದಡಿ ಬಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಹ ತಪಾಸಣೆ ಹೆಸರಲ್ಲಿ ಬಟ್ಟೆ ಕಳಚಿಸಿದರು: ಕಣ್ಣೀರಿಟ್ಟ ಮಿಸ್ ಯೂನಿವರ್ಸ್ ಸ್ಪರ್ಧಿಗಳು!

‘ಐ ಲವ್‌ ರಫ್‌ ಥಿಂಗ್ಸ್

ಮತೊಬ್ಬ ಗಗನಸಖಿ ಬಿಯರ್‌ ಮತ್ತು ಗೋಡಂಬಿಯ ಹಣ ಕೇಳಲು ಬಂದಾಗ, ಆರೋಪಿ ಅಕ್ರಂ ಪ್ಯಾಂಟಿನೊಳಗೆ ಕೈ ಹಾಕಿ ಹಣ ಹುಡುವಂತೆ ನಟಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ವಿಮಾನ ಲ್ಯಾಂಡ್‌ ಆಗುವಾಗ ಎರಡು ಬಾರಿ ತನ್ನ ಆಸನದಿಂದ ಮೇಲೆ ಎದ್ದಿದ್ದಾನೆ. ಈ ವೇಳೆ ಕುಳಿತು ಕೊಳ್ಳುವಂತೆ ಗಗನ ಸಖಿ ಹೇಳಿದಾಗ, ಆರೋಪಿಯು ‘ನನಗೆ ಒರಟು ವಸ್ತುಗಳೆಂದರೆ ಪ್ರೀತಿ.(I love rough things) ನೀನು ತುಂಬಾ ಒರಟು’ ಎಂದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.