Asianet Suvarna News Asianet Suvarna News

ಕೊಪ್ಪಳ: ಮೂರು ಎಕರೆ ಕಬ್ಬಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು; ರೈತ ಕಂಗಾಲು

ತಾಲೂಕಿನ ಲಕಮಾಪುರದ ಮಲ್ಲಿಕಾರ್ಜುನಯ್ಯ ಕುಕನೂರು ಎಂಬ ರೈತರ 3 ಎಕರೆ ಕಬ್ಬಿನ ಜಮೀನಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಶ್ರಮ, ಸಾಲ ಮಾಡಿ ಬೆಳೆದಿದ್ದ ರೈತ ಮಲ್ಲಿಕಾರ್ಜುನಯ್ಯ. ಬೆಳೆ ಕೈಗೆ ಬಂದಿತ್ತು. ಕಳೆದ ಬಾರಿ ಅತಿವೃಷ್ಟಿಗೆ ಕಂಗಾಲಾಗಿದ್ದ ರೈತ. ಈ ಬಾರಿ ಕಬ್ಬು ಫಲವತ್ತಾಗಿ ಬೆಳೆದಿತ್ತು. ಸುಮಾರು ಹತ್ತು ಲಕ್ಷರೂ. ಆದಾಯ ಬರುವ ನಿರೀಕ್ಷೆಯಲ್ಲಿದ್ದ ರೈತ. ಆದರೆ ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಬೆಂಕಿಗಾಹುತಿಯಾಗಿದೆ

Miscreants set fire to three acres of sugarcane Farmer tears koppal rav
Author
First Published Jan 28, 2023, 7:41 AM IST

ಕುಕನೂರು (ಜ.28) :

ತಾಲೂಕಿನ ಲಕಮಾಪುರದ ಮಲ್ಲಿಕಾರ್ಜುನಯ್ಯ ಕುಕನೂರು ಎಂಬ ರೈತರ 3 ಎಕರೆ ಕಬ್ಬಿನ ಜಮೀನಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಬೆಳೆ ಭಸ್ಮವಾಗಿದೆ. ಕಬ್ಬು ಈಗಾಗಲೇ ಕಟಾವಿಗೆ ಬಂದಿತ್ತು. ಸುಮಾರು ಹತ್ತು ಲಕ್ಷ ರುಪಾಯಿ ಆದಾಯ ನಿರೀಕ್ಷೆ ಇತ್ತು. ರೈತ ಮಲ್ಲಿಕಾರ್ಜುನಯ್ಯ ಕುಕನೂರು ಕಬ್ಬು ಸುಟ್ಟಿದ್ದು ಕಂಡು ಕಣ್ಣೀರಿಟ್ಟರು. ಗ್ರಾಮ ಲೆಕ್ಕಾಧಿಕಾರಿಗಳು ಆಗಮಿಸಿ ಸಮೀಕ್ಷೆ ನಡೆಸಿ ವರದಿ ಪಡೆದಿದ್ದಾರೆ.

ಶ್ರಮ, ಸಾಲ ಮಾಡಿ ಬೆಳೆದಿದ್ದ ರೈತ ಮಲ್ಲಿಕಾರ್ಜುನಯ್ಯ. ಬೆಳೆ ಕೈಗೆ ಬಂದಿತ್ತು. ಕಳೆದ ಬಾರಿ ಅತಿವೃಷ್ಟಿಗೆ ಕಂಗಾಲಾಗಿದ್ದ ರೈತ. ಈ ಬಾರಿ ಕಬ್ಬು ಫಲವತ್ತಾಗಿ ಬೆಳೆದಿತ್ತು. ಸುಮಾರು ಹತ್ತು ಲಕ್ಷರೂ. ಆದಾಯ ಬರುವ ನಿರೀಕ್ಷೆಯಲ್ಲಿದ್ದ ರೈತ. ಆದರೆ ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಬೆಂಕಿಗಾಹುತಿಯಾಗಿದೆ. ಕಿಡಿಗೇಡಿಗಳು ಕಬ್ಬಿನ ಗದ್ದೆಗೆ ದುರುದ್ದೇಶದಿಂದ ಬೆಂಕಿ ಹಚ್ಚಿದ್ದಾರೆ. ರೈತ ಕುಟುಂಬ ಕಂಗಾಲಾಗಿದೆ. ಒಂದು ಕಡೆ ಸಮೃದ್ಧವಾಗಿ ಬೆಳೆದಿದ್ದ ಬೆಳೆ ಕಣ್ಣಮುಂದೆ ಸುಟ್ಟು ಕರಕಲಾಗಿದ್ದ ನಿಂತಿದ್ದರೆ, ಇನ್ನೊಂದೆಡೆ, ಈ ಬೆಳೆಗೆ ಮಾಡಿಕೊಂಡಿದ್ದ ಸಾಲ, ಆರ್ಥಿಕ ಸ್ಥಿತಿಯನ್ನು ನೆನೆದು ದುಃಖಿಸುತ್ತಿರುವ ಕುಟುಂಬಸ್ಥರು.

ತುಮಕೂರು: ತಿಮ್ಲಾಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಕಬ್ಬಿನ ಗದ್ದೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು ಯಾರೇ ಆಗಗಿದ್ದರೂ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚಲಿಸುವ ಕಾರು ಬೆಂಕಿಗೆ ಆಹುತಿ

 ಹುಬ್ಬಳ್ಳಿ : ಚಲಿಸುವ ಕಾರಿನಲ್ಲಿ ಹೊಗೆ ಕಾಣಿಸಿಕೊಂಡು ಏಕಾಏಕಿ ಬೆಂಕಿ ತಗುಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆಯಿಂದಾಗಿ ಕೆಲಹೊತ್ತು ಟ್ರಾಫಿಕ್‌ ಜಾಮ್‌ ಆಗಿತ್ತು.

Mandya: ಪ್ರಾಣವನ್ನೇ ತೆಗೆದ ತುಂಡು ಬೀಡಿ: ಸೇದಿ ಎಸೆದ ಬೀಡಿಯ ಕಿಡಿಯಿಂದ ವೃದ್ಧ ಸಾವು

ಇಲ್ಲಿನ ಉಣಕಲ್‌ ನಿವಾಸಿ ರಾಜೀವ ಮರಡೂರು ಎಂಬುವವರ ಕಾರು ಭಸ್ಮವಾಗಿದೆ. ಇವರು ಕಾರಲ್ಲಿ ಹೋಗುತ್ತಿದ್ದಾಗ ಏಕಾಏಕಿ ಎಂಜಿನ್‌ನಲ್ಲಿ ಹೊಗೆ ಕಾಣಿಸಿದೆ. ಅಕ್ಕಪಕ್ಕದಲ್ಲಿ ಹೋಗುತ್ತಿದ್ದ ಬೈಕ್‌ ಸವಾರರು ಕಾರಿನ ಎಂಜಿನಿನಿಂದ ಹೊಗೆ ಬರುತ್ತಿದೆ ನೋಡಿ ಎಂದಾಗ ಇವರು ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದಾರೆ. ಏನಾಗಿದೆ ಎಂದು ನೋಡುವಷ್ಟರಲ್ಲೇ ಕಾರಿಗೆ ಬೆಂಕಿ ಆವರಿಸಿ ದಗದಗ ಉರಿಯಿತು. ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವಷ್ಟರಲ್ಲೇ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ತಾಂತ್ರಿಕ ತೊಂದರೆಯಿಂದಾಗಿ ಈ ರೀತಿ ಕಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಹಿಂಬದಿಯ ವಾಹನಗಳನ್ನು ನಿಲ್ಲಿಸಲಾಯಿತು. ಇದರಿಂದಾಗಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಉಂಟಾಯಿತು. ವಿದ್ಯಾನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios