Asianet Suvarna News Asianet Suvarna News

ಹಾವೇರಿ ಜಿಲ್ಲಾಧಿಕಾರಿ ಫೇಸ್‌ಬುಕ್‌ ಹ್ಯಾಕ್‌: ಹಣಕ್ಕೆ ಬೇಡಿಕೆ ಇಟ್ಟ ಖದೀಮರು..!

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಫೇಸ್‌ಬುಕ್‌ ಖಾತೆಯ ಮೆಸೆಂಜರ್‌ ಮೂಲಕ ಹಲವರಿಗೆ ಸಂದೇಶ| 8 ಸಾವಿರ ಕೊಡಿ ಸಂಜೆ ವಾಪಸ್‌ ಕೊಡುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ಬಂದ ಮೆಸೇಜ್‌| ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಜನರು| ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಜಿಲ್ಲಾಧಿಕಾರಿ| 

Miscreants Hacked Haveri DC Facebook Account grg
Author
Bengaluru, First Published May 5, 2021, 12:57 PM IST

ಹಾವೇರಿ(ಮೇ.05): ಜಿಲ್ಲಾಧಿಕಾರಿಗಳ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಿರುವ ಖದೀಮರು ಹಲವರಿಗೆ ಮೆಸೇಜ್‌ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರ ಫೇಸ್‌ಬುಕ್‌ ಖಾತೆಯ ಮೆಸೆಂಜರ್‌ ಮೂಲಕ ಮಂಗಳವಾರ ಹಲವರಿಗೆ ಸಂದೇಶ ಬಂದಿದೆ. ಹಾಯ್‌ ಎಂದು ಪರಿಚಯಿಸಿಕೊಂಡು ತುರ್ತಾಗಿ ಹಣ ನೀಡುವಂತೆ ಮೆಸೇಜ್‌ ಬಂದಿದೆ. ಇದನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ. ಪಕ್ಕಾ ಸ್ನೇಹಿತರು ಹಣ ಕೇಳಿದರೆ ನಿಜ ಎಂದುಕೊಳ್ಳುತ್ತಿದ್ದರೇನೋ. ಆದರೆ, ಇಲ್ಲಿ ಜಿಲ್ಲಾಧಿಕಾರಿಗಳೇ ಹಣ ಕೇಳಿರುವುದರಿಂದ ಎಲ್ಲರಿಗೂ ಅನುಮಾನ ಬಂದಿದೆ. ನಿಮ್ಮ ಅಕೌಂಟ್‌ನಲ್ಲಿ ಎಷ್ಟು ಹಣವಿದೆ, 8 ಸಾವಿರ ಕೊಡಿ ಸಂಜೆ ವಾಪಸ್‌ ಕೊಡುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ಮೆಸೇಜ್‌ ಬಂದಿದೆ. 

ಹೆಂಡತಿ ತಂಗಿಯೊಂದಿಗೆ ಕುಚ್ ಕುಚ್...ಗರ್ಭಿಣಿ ಪತ್ನಿ ಹತ್ಯೆ ಮಾಡಿದ!

ಈ ರೀತಿ ಹಣ ಕೇಳಿ ಮೆಸೇಜ್‌ ಬರುತ್ತಿರುವುದನ್ನು ನೋಡಿ ಎಲ್ಲರಿಗೂ ಇದು ಫೇಕ್‌ ಎನ್ನುವುದು ಅರಿವಾಗಿದೆ. ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ತಮ್ಮ ಖಾತೆ ಹ್ಯಾಕ್‌ ಆಗಿದ್ದು, ಹಣಕ್ಕೆ ಬೇಡಿಕೆ ಇಟ್ಟು ಬರುವ ಮೆಸೇಜ್‌ಗೆ ಯಾರೂ ಪ್ರತಿಕ್ರಿಯಿಸಬಾರದು ಎಂದು ಕೋರಿಕೊಂಡರು. ಅಲ್ಲದೇ ಈ ಕುರಿತು ಜಿಲ್ಲಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
 

Follow Us:
Download App:
  • android
  • ios