Asianet Suvarna News Asianet Suvarna News

ಹೆಂಡತಿ ತಂಗಿಯೊಂದಿಗೆ ಕುಚ್ ಕುಚ್...ಗರ್ಭಿಣಿ ಪತ್ನಿ ಹತ್ಯೆ ಮಾಡಿದ!

ಗರ್ಭಿಣಿ ಪತ್ನಿ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ/ ಅವಳಿ ಮಕ್ಕಳಿಗೆ ತಾಯಿಯಾಗಬೇಕಿದ್ದಳು/ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬರ್ತಿದ್ದ ಮಹಿಳೆ/ ಗಂಡನಿಂದಲೇ ಹತ್ಯೆ

Pregnant woman shot dead by husband in broad daylight mah
Author
Bengaluru, First Published Apr 28, 2021, 11:54 PM IST

ನವದೆಹಲಿ(ಏ. 28)   ಗರ್ಭಿಣಿ ಪತ್ನಿಯನ್ನು ವ್ಯಕ್ತಿಯೊಬ್ಬ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ದೆಹಲಿಯ ಆಗ್ನೇಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಘಟನೆ ನಡೆದಿದೆ.

ಡ್ರಗ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ಪತ್ನಿ ಮೂರು ದಿನದ ಹಿಂದೆ  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವಳಿ ಮಕ್ಕಳು ಹೊಟ್ಟೆಯಲ್ಲಿದ್ದವು. ಗಂಡ ಗರ್ಭಿಣಿ ಹೆಂಡತಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಮನೆಯ ಹೊರಭಾಗದಲ್ಲಿಯೇ ಪತ್ನಿ ಸೈನಾ ಮೇಲೆ ಪಾಪಿ ಗಂಡ ಗುಂಡಿನ ದಾಳಿ ಮಾಡಿದ್ದಾನೆ. ಘಟನೆಯನ್ನು ತಪ್ಪಿಸಲು ಬಂದ ಮತ್ತೊಬ್ಬ ವ್ಯಕ್ತಿಗೂ ಗಾಯಗಳಾಗಿದೆ.

ವಿಕ್ಟೋರಿಯಾದಿಂದ ಜಿಗಿದು ಸೋಂಕಿತ ವ್ಯಕ್ತಿ ಆತ್ಮಹತ್ಯೆ

ಇಡೀ ಪ್ರಕರಣದ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಡನಜ್ ಗೂ ಅಧಿಕ ಸಾರಿ ಮನಸೋ ಇಚ್ಛೆ ಗುಂಡಿನ ದಾಳಿ ಮಾಡಿದ್ದಾನೆ. ಮಹಿಳೆ ಇದಕ್ಕೂ ಮೊದಲು ಶರಾಫತ್ ಶೇಖ್ ಎಂಬ ಗ್ಯಾಂಗ್ ಸ್ಟರ್ ನ ಮದುವೆಯಾಗಿದ್ದರು.  ಶೇಖ್ ಗ್ಯಾಂಗ್ ಸ್ಟರ್ ಆಗಿದ್ದುಕೊಂಡು ಡ್ರಗ್ಸ್ ಡೀಲ್ ಮಾಡುತ್ತಿದ್ದ ಎನ್ನಲಾಗಿದೆ.  ಮೊದಲನೆ ಗಂಡನಿಗೆ ಸಂಬಂಧಿಸಿದ ಕೇಸ್ ನಲ್ಲಿ ಈಕೆಯನ್ನು ಬಂಧಿಸಲಾಗಿತ್ತು. 

ಒಂದು ವರ್ಷದ ಹಿಂದೆ ವಾಸೀಮ್ ಎಂಬಾತನ ಜತೆ ಮಹಿಳೆ ಮದುವೆಯಾಗಿದ್ದರು. ಗರ್ಭಿಣಿ ಎಂಬ ಕಾರಣಕ್ಕೆ ನ್ಯಾಯಾಲಯ ಮಹಿಳೆಗೆ ಬೇಲ್ ನೀಡಿತ್ತು.  ಸೈನಾ ಜೈಲು ಸೇರಿದ ನಂತರ ವಾಸಿಮ್ ಆಕೆಯ ಸಹೋದರಿಯೊಂದಿಗೆ ಅಫೇರ್ ಶುರು ಮಾಡಿಕೊಂಡಿದ್ದ.  ಈ ನಡುವೆ ಸೈನಾ ಜೈಲಿನಿಂದ ಬಿಡುಗಡೆಯಾಗಿದ್ದು ಮುಂದೆ ತನಗೆ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios