Asianet Suvarna News Asianet Suvarna News

Udupi: ಕರಾವಳಿಯಲ್ಲಿ ಮತ್ತೆ ಮುಂದುವರಿದ ಗೋಕಳ್ಳರ ಅಟ್ಟಹಾಸ

ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೋಕಳ್ಳರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ನಿರಂತರ ಗೋಕಳ್ಳತನವಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಾಕಷ್ಟು ಪ್ರತಿಭಟನೆ ನಡೆಸಿದ ಹೊರತಾಗಿಯೂ ಗೋ ಕಳ್ಳರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ.

Miscreants Did Cow Theft in Karkala gvd
Author
Bangalore, First Published Apr 2, 2022, 4:56 PM IST

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಏ.02): ಜಿಲ್ಲೆಯ ಕಾರ್ಕಳ (Karkala) ತಾಲೂಕಿನಲ್ಲಿ ಗೋಕಳ್ಳರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ನಿರಂತರ ಗೋಕಳ್ಳತನವಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಾಕಷ್ಟು ಪ್ರತಿಭಟನೆ (Protest) ನಡೆಸಿದ ಹೊರತಾಗಿಯೂ ಗೋ ಕಳ್ಳರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ (Police Department) ವಿಫಲವಾಗಿದೆ. ಗೋಹತ್ಯಾ ನಿಷೇಧ ಕಾಯ್ದೆ ಬಂದ ನಂತರವಾದರೂ ಗೋಕಳ್ಳರು ತಮ್ಮ ದುಷ್ಕೃತ್ಯ ನಿಲ್ಲಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ಪರಿಸರದ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿ ಇದ್ದ ದನಗಳನ್ನು ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ (CC Camera) ದಾಖಲಾಗಿದೆ. 

ಇತ್ತೀಚೆಗೆ ಕಾರ್ಕಳದ ಕೆಲವು ಮನೆಗಳ ಹಟ್ಟಿಗೆ ನುಗ್ಗಿ ಇದೇ ಮಾದರಿಯಲ್ಲಿ ಕಳ್ಳತನ ನಡೆಸಲಾಗಿತ್ತು. ಮನೆ ಮಾಲಕರಿಗೆ ಮಾರಕಾಸ್ತ್ರವನ್ನು ತೋರಿಸಿ ಬೆದರಿಸಿ ಹಸು‌ ಕದ್ದೊಯ್ದ ಘಟನೆಗಳು ನಡೆದಿತ್ತು. ಬಳಿಕ ಸಚಿವ, ಸ್ಥಳೀಯ ಶಾಸಕ ಸುನಿಲ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಎಲ್ಲ ಠಾಣೆಗಳಲ್ಲೂ ಗೋಕಳ್ಳರನ್ನು ಪ್ರತ್ಯೇಕವಾಗಿ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಎಚ್ಚರಿಕೆಯ ಹೊರತಾಗಿಯೂ ಕಳ್ಳತನ ಮುಂದುವರೆದಿದೆ.‌ ಶನಿವಾರ ಮುಂಜಾನೆ 2.45 ರ ಸುಮಾರಿಗೆ ನಡೆದಿರುವ ಘಟನೆಯ ಇಂಚಿಂಚು ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಐಷಾರಾಮಿ ವಾಹನದಲ್ಲಿ ಬಂದ ಕಳ್ಳರು, ಆಹಾರ ತಿನ್ನಿಸುವ ನೆಪದಲ್ಲಿ ಪಕ್ಕಕ್ಕೆ ಬಂದು ಹಿಂಸಾತ್ಮಕವಾಗಿ ಹಸುವನ್ನು ಕದ್ದೊಯ್ಯುತ್ತಿರುವ ದೃಶ್ಯ ಇದರಲ್ಲಿದೆ. ಇಬ್ಬರ ದುಷ್ಕರ್ಮಿಗಳು ಈ ಕೃತ್ಯಯಲ್ಲಿ ಭಾಗಿಯಾಗಿದ್ದಾರೆ.

Udupi: ಮೀನುಗಾರರಿಗೆ ಅಭಯವಿತ್ತ ತಾಯಿ ಮಹಾಲಕ್ಷ್ಮಿ ದೇವಾಲಯ ಬ್ರಹ್ಮಕಲಶೋತ್ಸವ!

ಎರಡು ದಿನಗಳ ಹಿಂದೆಯೂ ಈ ಭಾಗದಲ್ಲಿ ಗೋ ಕಳ್ಳತನ ನಡೆದಿತ್ತು. ಹಾಡುಹಗಲೇ ಗೋಕಳ್ಳತನ ನಡೆಯುತ್ತಿದೆ ಎಂಬುದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪತ್ತೆಹಚ್ಚಿದರು. ನಕಲಿ ನಂಬರ್ ಪ್ಲೇಟ್ ನ್ನು ಬಳಸಿದ ಓಮಿನಿ ಕಾರ್ ನಲ್ಲಿ ದನಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಸ್ಥಳಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ತೆರಳಿದಾಗ ಕೂದಲೆಳೆಯ ಅಂತರದಲ್ಲಿ ದನಕಳ್ಳರು ವಾಹನದ ಜೊತೆಗೆ ಪರಾರಿಯಾಗಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಈಗ ಮತ್ತೊಮ್ಮೆ ಬೆಳಗಿನ ಜಾವ ಗೋಕಳ್ಳರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಈ ಹಿಂದೆ ಕಾರ್ಕಳದಲ್ಲಿ ಗೋಕಳ್ಳತನ ನಡೆದಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಠಾಣೆಯ ಮುಂದೆ ಭಜನೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ಇಷ್ಟಾದರೂ ಗೋಕಳ್ಳತನಕ್ಕೆ ಮಾತ್ರ ಉಡುಪಿ ಜಿಲ್ಲೆಯಲ್ಲಿ ಕಡಿವಾಣ ಬಿದ್ದಿಲ್ಲ.

Udupi: ಕಾರ್ಕಳದ ನೀರೆ ಗ್ರಾಮದಲ್ಲಿ ಕಾಡುಕೋಣ ಪ್ರತ್ಯಕ್ಷ, ಆತಂಕದಲ್ಲಿ ಜನತೆ

ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಕಳ್ಳರಿಗೆ ಕಡಿವಾಣ ಹಾಕುವ ಉತ್ಸುಕತೆ ಹೊಂದಿದ್ದರೂ ಸಹ, ಕೆಳಹಂತದ ಸಿಬ್ಬಂದಿಗಳ ಗೋಕಳ್ಳಕರ ಜೊತೆ ಶಾಮೀಲಾಗಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ. ಪೊಲೀಸ್ ಠಾಣೆಯ ಸ್ವಲ್ಪವೇ ದೂರದಲ್ಲಿ ಗೋಕಳ್ಳತನ ನಡೆದರೂ ಪೊಲೀಸರು ಕಡಿವಾಣ ಹಾಕುವುದರಲ್ಲಿ ವಿಫಲರಾಗಿದ್ದಾರೆ. ಇಲಾಖೆಯೊಳಗಿನ ಮಾಹಿತಿ ಸೋರಿಕೆ ಆಗುತ್ತಿರುವುದೇ ನಿರಂತರ ಗೋಕಳ್ಳತನಕ್ಕೆ ಕಾರಣ. ರಾಜ್ಯದಲ್ಲಿ ನಮ್ಮದೇ ಸರಕಾರವಿದ್ದರೂ ಗೋ ಕಳ್ಳತನಕ್ಕೆ ಕಡಿವಾಣ ಬೀಳದೇ ಇರುವುದು ದುರದೃಷ್ಟಕರ ಎಂದು ಹಿಂದೂ ಜಾಗರಣ ವೇದಿಕೆ ಸ್ಥಳೀಯ ಮುಖಂಡ ರಮೇಶ್ ಆರೋಪಿಸಿದ್ದಾರೆ.

Follow Us:
Download App:
  • android
  • ios