Asianet Suvarna News Asianet Suvarna News

Udupi: ಕಾರ್ಕಳದ ನೀರೆ ಗ್ರಾಮದಲ್ಲಿ ಕಾಡುಕೋಣ ಪ್ರತ್ಯಕ್ಷ, ಆತಂಕದಲ್ಲಿ ಜನತೆ

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಗ್ರಾಮಗಳಲ್ಲಿ ಹೆಚ್ಚಾಗಿ ರಾತ್ರಿ ಅಥವಾ ಮುಂಜಾನೆಯ ವೇಳೆ ಕಾಣಿಸಿಕೊಳ್ಳುವ ಕಾಡು ಕೋಣಗಳು ಹಾಡುಹಗಲೇ ಪ್ರತ್ಯಕ್ಷವಾಗುತ್ತಿವೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಮುಳ್ಯಕ್ಕಾರು ಜಡ್ಡು ಎಂಬಲ್ಲಿ ನಡು ಮಧ್ಯಾಹ್ನವೇ ಜನವಸತಿ ಪ್ರದೇಶಕ್ಕೆ ಕಾಡುಕೋಣವೊಂದು ನುಗ್ಗಿದೆ.

People in Anxiety for Wild Buffalo Came to Villag at Karkala in Udupi gvd
Author
Bangalore, First Published Mar 30, 2022, 3:35 PM IST

ವರದಿ: ಶಶಿಧರ ಮಾಸ್ತಿಬೈಲು ,ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಕಾರ್ಕಳ (ಮಾ.30): ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಗ್ರಾಮಗಳಲ್ಲಿ ಹೆಚ್ಚಾಗಿ ರಾತ್ರಿ ಅಥವಾ ಮುಂಜಾನೆಯ ವೇಳೆ ಕಾಣಿಸಿಕೊಳ್ಳುವ ಕಾಡು ಕೋಣಗಳು (Wild Buffalo) ಹಾಡುಹಗಲೇ ಪ್ರತ್ಯಕ್ಷವಾಗುತ್ತಿವೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಮುಳ್ಯಕ್ಕಾರು ಜಡ್ಡು ಎಂಬಲ್ಲಿ ನಡು ಮಧ್ಯಾಹ್ನವೇ ಜನವಸತಿ ಪ್ರದೇಶಕ್ಕೆ ಕಾಡುಕೋಣವೊಂದು ನುಗ್ಗಿದೆ. ಮನೆಯಂಗಳದಲ್ಲಿ ಓಡಾಡುವ ಭಾರಿ ಗಾತ್ರದ ಕಾಡುಕೋಣವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.

ನೀರೆ ಬೈಲೂರಿನ ಮೀಸಲು ಅರಣ್ಯ ಪ್ರದೇಶದ ಮುಳ್ಯಕ್ಕಾರು ನಿವಾಸಿ ಲೀಲಾವತಿ ಪೂಜಾರ್ತಿ ಅವರ ಮನೆಯಂಗಳದಲ್ಲಿ ಕಾಡುಕೋಣ ಓಡಿಬಂದಿದೆ. ಕಾಡುಕೋಣದ ಓಡಾಟಕ್ಕೆ ಮನೆಯ ಕೆಲ ಭಾಗಗಳಿಗೂ ಹಾನಿಯಾಗಿದೆ. ಜಮೀನಿನಲ್ಲಿ ಬೆಳೆದ ಕೃಷಿ ಪೈರು ಹಾಳಾಗಿದೆ. ಆರಂಭದಲ್ಲಿ ಮನೆಮಂದಿಯಲ್ಲಾ ಸೇರಿ ಬೊಬ್ಬೆ ಹೊಡೆದು ಕೋಣವನ್ನು ಓಡಿಸುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗದೇ ಹೋದಾಗ ಕೋಣ ದಾಳಿ ಮಾಡಿರುವ ಬಗ್ಗೆ ಸ್ಥಳೀಯರೆಲ್ಲ ಸೇರಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದರು. ಗ್ರಾಮಪಂಚಾಯತ್ ನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ವ್ಯಾಪಾರಕ್ಕೆ ನಿರ್ಬಂಧ: ಮಧ್ಯಸ್ಥಿಕೆ ವಹಿಸಿ ಪಾರುಮಾಡಿ, ಪೇಜಾವರ ಶ್ರೀಗಳ ಮೊರೆ ಹೋದ ಮುಸ್ಲಿಂ ಮುಖಂಡರು

ಸ್ಥಳಕ್ಕೆ ಧಾವಿಸಿ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾರಿ ಗಾತ್ರದ ಕೋಣವನ್ನು ಸೆರೆಹಿಡಿಯಲು ಹರಸಾಹಸಪಟ್ಟರು. ಕಾರ್ಕಳ ಅರಣ್ಯ ವಿಭಾಗದ ಆರ್ ಎಫ್ ಒ ದಿನೇಶ್ ಅವರ ನೇತೃತ್ವದಲ್ಲಿ, ಕಾರ್ಕಳ ವನ್ಯಜೀವಿ ವಿಭಾಗದ ಆರ್ ಎಫ್ ಒ ಸ್ಮಿತಾ ಅವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಮಂಗಳೂರು ವಿಭಾಗದಿಂದ ನುರಿತ ಪಶುವೈದ್ಯರನ್ನು ಕರೆಸಿಕೊಳ್ಳಲಾಯಿತು. ಸ್ಥಳಕ್ಕೆ ಜೆಸಿಬಿ, ಟಿಪ್ಪರ್,  ಟ್ರ್ಯಾಕ್ಟರ್ ತರಿಸಿಕೊಂಡು ಕಾರ್ಯಾಚರಣೆ ಆರಂಭಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಕಾಡುಕೋಣವನ್ನು ಸೆರೆಹಿಡಿಯುವುದು ಸಾಧ್ಯವಾಗಲಿಲ್ಲ. ಸುಮಾರು ಐದು ತಾಸುಗಳ ಸತತ ಪ್ರಯತ್ನದ ಬಳಿಕ, ಅರಿವಳಿಕೆಯನ್ನು ನೀಡಿ ಕಾಡುಕೋಣವನ್ನು ವಶಕ್ಕೆ ಪಡೆಯಲಾಯಿತು.

Udupi: ಕೊಲ್ಲೂರಿನಲ್ಲಿ ಸಲಾಂ ಮಂಗಳಾರತಿ ಪೂಜೆಯೇ ಚಾಲ್ತಿಯಲ್ಲಿಲ್ಲ..!

ಜನರ ಬೊಬ್ಬೆ ಗಲಾಟೆಗಳಿಂದ ಗಾಬರಿಗೊಂಡಿದ್ದ ಕಾಡುಕೋಣ, ವ್ಯಗ್ರವಾಗಿತ್ತು. ಇದರಿಂದ ಕಾರ್ಯಾಚರಣೆ ನಡೆಸುವುದು ಕಷ್ಟವಾಯಿತು. ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗದೇ ಇದ್ದಲ್ಲಿ, ಅಪಾಯ ಸಂಭವಿಸುವ ಸಾಧ್ಯತೆ ಇತ್ತು.  ಇತ್ತೀಚಿನ ದಿನಗಳಲ್ಲಿ ಕಾರ್ಕಳ ತಾಲ್ಲೂಕಿನ ಹಲವು ಗ್ರಾಮಗಳ ಜನವಸತಿ ಪ್ರದೇಶದಲ್ಲೇ ಕಾಡುಕೋಣ ಸಹಿತ ಅನೇಕ ಕಾಡು ಪ್ರಾಣಿಗಳ ಓಡಾಟ ಸಾಮಾನ್ಯವಾಗಿದೆ. ಕಾಡು ಪ್ರಾಣಿಗಳಿಂದ ನಮ್ಮನ್ನು ಮತ್ತು ಕೃಷಿಯನ್ನು ರಕ್ಷಿಸಿ ಎಂದು ಗ್ರಾಮಸ್ಥರು ಪದೇಪದೇ ಮನವಿ ನೀಡಿ ಸೋತು ಹೋಗಿದ್ದಾರೆ.

Follow Us:
Download App:
  • android
  • ios