Asianet Suvarna News Asianet Suvarna News

ಬಿಹಾರದಲ್ಲಿ ಮೂಕ ಅರ್ಚಕನ ಶಿರಚ್ಛೇದ: ಮತ್ತೊಂದು ದೇವಸ್ಥಾನದಲ್ಲಿ ರುಂಡ ಬಿಟ್ಟು ಹೋದ ದುಷ್ಕರ್ಮಿಗಳು

Crime News: ದುಷ್ಕರ್ಮಿಗಳು ಮೂಕ ಅರ್ಚಕನ ತಲೆ ಕಡಿದು ಮತ್ತೊಂದು ದೇವಿಯ ದೇವಸ್ಥಾನದ ಹೊರಗೆ ಬಿಟ್ಟು ಹೋಗಿದ್ದಾರೆ

Miscreants behead mute temple priest leave head at another temple gate in Bihar mnj
Author
Bengaluru, First Published Aug 10, 2022, 4:42 PM IST

ಬಿಹಾರ (ಆ. 10): ದುಷ್ಕರ್ಮಿಗಳು ಬಿಹಾರದ ಬೇಟಿಯಾದ ರಾಮ್ ಜಾಂಕಿ ದೇವಸ್ಥಾನವೊಂದರ ಮೂಕ ಅರ್ಚಕನ ತಲೆ ಕಡಿದು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ದೇವಿಯ ದೇವಸ್ಥಾನದ ಹೊರಗೆ ಬಿಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪೂಜಾರಿ ಕಳೆದ 40 ವರ್ಷಗಳಿಂದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ದೇವಸ್ಥಾನದ ಅರ್ಚಕ ರುಡಾಲ್ ಪ್ರಸಾದ್ ವರ್ನ್ವಾಲ್ (55) ಅವರ ತಲೆಯನ್ನು ಕಡಿದು, ಕಾಳಿ ದೇವಸ್ಥಾನಕ್ಕೆ ಕೊಂಡೊಯ್ದ ಅಪರಾಧಿಗಳು ಅದನ್ನು ಅಲ್ಲಿಯೇ ಬಿಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. 

"ಬುಧವಾರ ಬೆಳಗ್ಗೆ ಪಿಪ್ರಾ ಗ್ರಾಮದ ಜನರು ಕಾಳಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋದಾಗ, ದೇವಸ್ಥಾನದ ದ್ವಾರದಲ್ಲಿ ಕತ್ತರಿಸಿದ ತಲೆಯನ್ನು ನೋಡಿ ಭಯಭೀಯರಾದರು. ಇದರ ಬೆನ್ನಲ್ಲೇ ಅಪಾರ ಜನಸ್ತೋಮ ಅಲ್ಲಿ ನೆರೆದಿತ್ತು. ಎರಡು ದೇವಾಲಯಗಳ ನಡುವಿನ ಅಂತರ ಸುಮಾರು ಒಂದು ಕಿ.ಮೀ" ಎಂದು ಸ್ಥಳೀಯರ ಮಾಹಿತಿ ನೀಡಿದ್ದಾರೆ. 

2 ತಿಂಗಳ ಬಳಿಕ ಬಯಲಾಯ್ತು ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ: ಸವಾಲಾಗಿದ್ದ ಪ್ರಕರಣ ಭೇದಿಸಿದ ಪೊಲೀಸರು

ಬಕುಲ್ಹಾರ್ ರಾಮಜಾನಕಿ ದೇವಸ್ಥಾನದ ಅರ್ಚಕರು ಮಂಗಳವಾರ ರಾತ್ರಿ ಎಂದಿನಂತೆ ದೇವಸ್ಥಾನದ ಆವರಣದಲ್ಲಿ ಮಲಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಪರಾಧಿಗಳು ಛಾವಣಿಯ ಮೂಲಕ ಪ್ರವೇಶಿಸಿದರು ಮತ್ತು ಅವರ ಶಿರಚ್ಛೇದ ಮಾಡಿದ ನಂತರ ಹೋದರು. ಅಪರಾಧಿಗಳ ಚಪ್ಪಲಿಗಳನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ ಈ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಪೊಲೀಸರು ಈ ಭಯಾನಕ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬುಧವಾರ ಬೆಳಗ್ಗೆ ಜನರು ಮಠಕ್ಕೆ ಹೋದಾಗ ರಾಮ ಜಾನಕಿ ದೇವಸ್ಥಾನದಲ್ಲಿ ರಕ್ತ ಬಿದ್ದಿರುವುದನ್ನು ಕಂಡರು ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ಅರ್ಚಕರ ಉಳಿದ ದೇಹವೂ ಅಲ್ಲೇ ಬಿದ್ದಿತ್ತು. ಇದೇ ವೇಳೆ ಅವರ ತಲೆಯನ್ನು ಪಿಪ್ರಾದ ಕಾಳಿ ದೇವಸ್ಥಾನದಲ್ಲಿ ಅರ್ಪಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ

ಎರಡೂ ದೇವಾಲಯಗಳ ಬಳಿ ಜನಸಾಗರವೇ ನೆರೆದಿತ್ತು. ಘಟನೆಯಿಂದ ಜನರು ತೀವ್ರ ಆಕ್ರೋಶಗೊಂಡಿದ್ದಾರೆ. ಇದು ದೇವಿಗೆ ಧಾರ್ಮಿಕ ನೈವೇದ್ಯ ನೀಡಲು ಈ ಕೃತ್ಯವೆಸಗಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಆದರೆ, ಪೊಲೀಸರು ಸದ್ಯಕ್ಕೆ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ತನಿಖೆ ಇನ್ನೂ ನಡೆಯುತ್ತಿರುವುದರಿಂದ ಏನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios