* ಹುಬ್ಬಳ್ಳಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು* ಫೇಸ್‌ಬುಕ್‌ ಪಾಲೋವರ್ಸ್‌ಗಳಿಗೆ ಅಶ್ಲೀಲ ಮೆಸೇಜ್‌ ಕಳಿಸಿದ ದುಷ್ಕರ್ಮಿ* ವ್ಯಾಪಾರದಲ್ಲಿ ನಷ್ಟವಾಗುವಂತೆ ಮಾಡಿದ ಖದೀಮ

ಹುಬ್ಬಳ್ಳಿ(ಮೇ.09): ಜಾಹೀರಾತಿಗಾಗಿ ಕ್ರಿಯೆಟ್‌ ಮಾಡಿದ ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ಖಾತೆಗೆ ಲಾಗಿನ್‌ ಆಗಿ ಅಶ್ಲೀಲ ವಿಡಿಯೋ ಲಿಂಕ್‌ ಮಾಡಿದ ದುಷ್ಕರ್ಮಿ ವಿರುದ್ಧ ಇಲ್ಲಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆದಿ ಜಾರಿ ಎಂಬಾತ ಆರೋಪಿ. ಧಾರವಾಡದ ಮಹ್ಮದ್‌ ಇಬ್ರಾಹಿಂ ಶೇಖ್‌ ಎಂಬುವವರು ತಮ್ಮ ಹೋಟೆಲ್‌ ಉದ್ಯಮಕ್ಕಾಗಿ ಖಾತೆಗಳನ್ನು ತೆರೆದಿದ್ದರು. ಆದರೆ, ಆರೋಪಿ ಖಾತೆಗೆ ಲಾಗಿನ್‌ ಆಗಿ ಅಶ್ಲೀಲ ವಿಡಿಯೋ ಲಿಂಕ್‌ ಮಾಡಿದ್ದಾನೆ. ಅಲ್ಲದೆ, ಫೇಸ್‌ಬುಕ್‌ ಪಾಲೋವರ್ಸ್‌ಗಳಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸಿದ್ದಾನೆ. 

ಹಾವೇರಿ ಜಿಲ್ಲಾಧಿಕಾರಿ ಫೇಸ್‌ಬುಕ್‌ ಹ್ಯಾಕ್‌: ಹಣಕ್ಕೆ ಬೇಡಿಕೆ ಇಟ್ಟ ಖದೀಮರು..!

ಅಷ್ಟೇ ಅಲ್ಲದೆ, ಇ-ಮೇಲ್‌ ಐಡಿಗೂ ಲಾಗಿನ್‌ ಆಗಿ ಅಲ್ಲಿದ್ದ ಹೋಟೆಲ್‌ ವ್ಯವಹಾರಕ್ಕೆ ಸಂಬಂಧಿಸಿದ ಡಾಟಾಗಳನ್ನು ಡಿಲೀಟ್‌ ಮಾಡಿ ವ್ಯಾಪಾರದಲ್ಲಿ ನಷ್ಟವಾಗುವಂತೆ ಮಾಡಿದ್ದಾನೆ ಎಂದು ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ.