: ಮುಖ್ಯ​ಶಿ​ಕ್ಷ​ಕ​ರೊ​ಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆಗೆ ತೆರಳಿ ಗಲಾಟೆ ಮಾಡಿದ ಘಟನೆ ತಾಲೂಕಿನ ಶಕ್ತಿನಗರದಲ್ಲಿ ಜರು​ಗಿತು.

ರಾಯಚೂರು (ಮಾ.30) : ಮುಖ್ಯ​ಶಿ​ಕ್ಷ​ಕ​ರೊ​ಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆಗೆ ತೆರಳಿ ಗಲಾಟೆ ಮಾಡಿದ ಘಟನೆ ತಾಲೂಕಿನ ಶಕ್ತಿನಗರದಲ್ಲಿ ಜರು​ಗಿತು.

ಶಕ್ತಿ​ನ​ಗ​ರದ ಕೆಪಿಸಿಎಲ್‌ ಡಿಎವಿ(KPCL DAV) ಶಾಲೆಯ ಮುಖ್ಯಶಿಕ್ಷಕ ವಿಜಯ ಅಂಗಡಿ(Vijay angadi) ಎನ್ನುವವರು ವಿದ್ಯಾರ್ಥಿನಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಅನು​ಚಿ​ತ​ವಾಗಿ ವರ್ತಿ​ಸಿದ್ದು, ಇದೆ​ಲ್ಲವೂ ಮೊಬೈಲ್‌ನಲ್ಲಿ ರೆಕಾರ್ಡ್‌(Mobile record) ಆಗಿದೆ. ಮುಖ್ಯಶಿಕ್ಷಕ ವರ್ತ​ನೆ​ಯಿಂದ ಬೇಸತ್ತ ವಿದ್ಯಾ​ರ್ಥಿನಿ ಪಾಲಕರ ಗಮನಕ್ಕೆ ತಂದಿದ್ದು, ಪಾಲಕರು, ಸಂಬಂಧಿಕರು ಮಾತ್ರವಲ್ಲದೇ ಬಡಾವಣೆಯ ನೂರಾರು ಜನ ಶಾಲೆಗೆ ತೆರಳಿ ಗಲಾಟೆ ಮಾಡಿ ಮುಖ್ಯಶಿಕ್ಷಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗ​ಮಿ​ಸಿದ ಶಕ್ತಿನಗರ ಪೊಲೀಸರು(Shaktinagara police), ಮುಖ್ಯಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಪಾಲಕರು ನೀಡಿದ ದೂರ​ನ್ನಾ​ಧ​ರಿ​ಸಿ ಮುಖ್ಯಶಿಕ್ಷಕನನ್ನು ಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾ​ರಣೆ ನಡೆ​ಸಿ​ದ್ದಾ​ರೆ.

ರಾಯಚೂರು: ಮೊದಲ ಪಟ್ಟಿ​ಯಲ್ಲಿ ಜಿಲ್ಲೆಯ ಇಬ್ಬರು ಹಾಲಿ ಶಾಸ​ಕ​ರಿಗೆ ಟಿಕೆಟ್‌

ಪಿಯುಸಿ ಪರೀಕ್ಷೆ: 12,529 ವಿದ್ಯಾರ್ಥಿಗಳು ಹಾಜರು

ರಾಯಚೂರು: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಿಯುಸಿ ವಾರ್ಷಿಕ ಪರೀಕ್ಷೆಯ ಸಮಾಜಶಾಸ್ತ್ರ ಹಾಗೂ ಕಂಪ್ಯೂಟರ್‌ ವಿಷಯದ ಪರೀಕ್ಷೆಗಳು ಬುಧವಾರ ನಡೆದಿದ್ದು, ಈ ಪರೀಕ್ಷೆಯಲ್ಲಿ ಒಟ್ಟು 13,739 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಒಟ್ಟು 12,529 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 1,210 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಸಮಾಜಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 3106 ವಿದ್ಯಾರ್ಥಿಗಳು ಹಾಜರಾಗಿದ್ದರೆ 359 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 2319 ಹಾಜರು, 133 ಗೈರು, ಸಿಂಧನೂರು ತಾಲೂಕಿನಲ್ಲಿ 2118 ಹಾಜರು, 220 ಗೈರು, ಮಾನ್ವಿ ತಾಲೂಕಿನಲ್ಲಿ 1438 ಹಾಜರು, 114 ಗೈರು, ದೇವದುರ್ಗ ತಾಲೂಕಿನಲ್ಲಿ 1375 ಹಾಜರು, 210 ಗೈರು, ಮಸ್ಕಿ 614 ಹಾಜರು, 65 ಗೈರು, ಸಿರವಾರ 490 ಹಾಜರಾಗಿದ್ದರೆ 66 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಕಾಂಗ್ರೆಸ್‌ನ ಬಸ​ನ​ಗೌ​ಡ​ರಿಗೆ ತಿರು​ಗೇಟು ​ನೀ​ಡು​ವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ

ಕಂಪ್ಯೂಟರ್‌ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 372 ವಿದ್ಯಾರ್ಥಿಗಳು ಹಾಜರಾಗಿದ್ದರೆ 17 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 155 ಹಾಜರು, 08 ಗೈರು, ಸಿಂಧನೂರು ತಾಲೂಕಿನಲ್ಲಿ 428 ಹಾಜರು, 15 ಗೈರು, ಮಾನ್ವಿ ತಾಲೂಕಿನಲ್ಲಿ 102 ಹಾಜರು, 03 ಗೈರು, ದೇವದುರ್ಗದಲ್ಲಿ 12 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ.