ಮೂವರು ಪುರುಷರು ಹಾಗೂ ಒಬ್ಬರು ಮಹಿಳೆ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆಕೆಯ ನಿವಾಸಕ್ಕೆ ಹೋಗುವ ದಾರಿಯಲ್ಲಿ ಚಲಿಸುವ ಕಾರಿನಲ್ಲೇ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಇತ್ತೀಚೆಗೆ ದೇಶಾದ್ಯಂತ ಅಪರಾಧ ಪ್ರಕರಣಗಳು (Crime Cases) ಹೆಚ್ಚಾಗಿ ವರದಿಯಾಗುತ್ತಿದೆ. ಮಹಿಳೆಯರ ಕೊಲೆ (Murder), ಅತ್ಯಾಚಾರ (Rape) ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ. ಈಗ, ಅದೇ ರೀತಿ, ಕೇರಳದ (Kerala) ಕೊಚ್ಚಿಯಲ್ಲಿ (Kochi) 19 ವರ್ಷದ ಮಾಡೆಲ್‌ (Model) ಅನ್ನು ಕಾಮುಕರು ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ (Gang Rape) ಮಾಡಿರುವ ವರದಿಯಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಸಂಬಂಧ ಎರ್ನಾಕುಲಂ ದಕ್ಷಿಣ ಪೊಲೀಸರು (Ernakulam South Police) ಮೂವರು ಪುರುಷರು ಹಾಗೂ ಒಬ್ಬ ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ಕೊಚ್ಚಿಯ ರವಿಪುರಂ ಪ್ರದೇಶದ ಬಾರ್‌ನಲ್ಲಿ ಮಾಡೆಲ್‌ ಕುಡಿದು ನಂತರ ಅಲ್ಲೇ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ನಂತರ, ಮೂವರು ಪುರುಷರು ಹಾಗೂ ಒಬ್ಬರು ಮಹಿಳೆ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆಕೆಯ ನಿವಾಸಕ್ಕೆ ಹೋಗುವ ದಾರಿಯಲ್ಲಿ ಚಲಿಸುವ ಕಾರಿನಲ್ಲೇ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವರದಿಯಾಗಿದೆ. ಕೃತ್ಯವೆಸಗಿದ ಬಳಿಕ ಕಾಕ್ಕನಾಡ್‌ ಬಳಿಯ ಆಕೆಯ ನಿವಾಸದ ಬಳಿ ಬಿಟ್ಟು ಹೋಗಿದ್ದಾರೆ. 

ಇದನ್ನು ಓದಿ: ತ್ರಿಪಲ್ ತಲಾಖ್ ಕೊಟ್ಟು ತಮ್ಮನೊಂದಿಗೆ ಮದುವೆಯಾಗು ಎಂದ ಪತಿ: ಇಬ್ಬರಿಂದಲೂ ಸಾಮೂಹಿಕ ಅತ್ಯಾಚಾರ

Scroll to load tweet…

ಸದ್ಯ, ಸಂತ್ರಸ್ಥ ಮಾಡೆಲ್‌ ಕಾಲಮಸ್ಸೇರಿ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಗಾಯಗಳ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಡೆಲ್‌ನ ಗೆಳೆಯರೊಬ್ಬರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಒಬ್ಬರು ಮಹಿಳೆ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. 
ಈ ಮೂವರು ಪುರುಷರು ಕೊಡುಂಗಲ್ಲೂರು ಮೂಲದವರು ಹಾಗೂ ಮಹಿಳೆ ರಾಜಸ್ಥಾನ ಮೂಲದ ಮಾಡೆಲ್‌ ಎಂದು ತಿಳಿದುಬಂದಿದೆ. ಇನ್ನು, ಅತ್ಯಾಚಾರಕ್ಕೊಳಗಾದ ಮಾಡೆಲ್‌ ಕಾಸರಗೋಡು ಮೂಲದವರು ಎಂದೂ ವರದಿಯಾಗಿದೆ.

ಇನ್ಪೋಪಾರ್ಕ್‌ ಪೊಲೀಸರು ಮೊದಲು ಈ ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ಥೆಯನ್ನು ಗುರುವಾರ ರಾತ್ರಿಯೇ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರೆ. ನಂತರ, ಈ ಪ್ರಕರಣವನ್ನು ಅತ್ಯಾಚಾರ ನಡೆದ ಎರ್ನಾಕುಲಂ ದಕ್ಷಿಣ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದ್ದು, ಅವರೇ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಇನ್ನೂ ಮುಂದುವರಿದಿದೆ ಎಂದು ಸಹ ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ: ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ: ಎನರ್ಜಿ ಮಾತ್ರೆ ತೆಗೆದುಕೊಂಡಿದ್ದ ಆರೋಪಿ..!

Scroll to load tweet…