ವಿವಾಹಿತನೊಂದಿಗೆ ಸಂಬಂಧ: ಅಪ್ರಾಪ್ತ ಮಗಳನ್ನು ಕೊಂದ ಪೋಷಕರು
ವಿವಾಹಿತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಅಪ್ರಾಪ್ತ ಮಗಳ ವರ್ತನೆಯ ವಿರುದ್ಧ ಆಕ್ರೋಶಗೊಂಡು ಆಕೆಯ ಹತ್ಯೆ ಮಾಡಿದ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.
ರುದ್ರಾಪುರ: ವಿವಾಹಿತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಅಪ್ರಾಪ್ತ ಮಗಳ ವರ್ತನೆಯ ವಿರುದ್ಧ ಆಕ್ರೋಶಗೊಂಡು ಆಕೆಯ ಹತ್ಯೆ ಮಾಡಿದ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಅಪ್ರಾಪ್ತೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪೋಷಕರೇ ಮರ್ಯಾದೆಗೆ ಅಂಜಿ ಮಗಳ ಹತ್ಯೆ ಮಾಡಿರುವುದು ಬಯಲಾಗಿದೆ.
17 ವರ್ಷದ ಶಬಾನಾ ಹತ್ಯೆಯಾದ ಅಪ್ರಾಪ್ತೆ. ಈಕೆ ತನ್ನ ಮನೆ ಸಮೀಪದಲ್ಲೇ ವಾಸವಿದ್ದ ವಿವಾಹಿತ ವ್ಯಕ್ತಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆದರೆ ವಿವಾಹಿತನೊಂದಿಗಿನ ಮಗಳ ಈ ಪ್ರೇಮ ಸಂಬಂಧಕ್ಕೆ ಪೋಷಕರ ಸಮ್ಮತಿ ಇರಲಿಲ್ಲ, ಈ ಹಿನ್ನೆಲೆಯಲ್ಲಿ ಪೋಷಕರೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಶಬಾನಾ ತಂದೆ 50 ವರ್ಷದ ಮೊಹಮ್ಮದ್ ಶಫಿ, ಹಾಗೂ ತಾಯಿ 45 ವರ್ಷದ ಕಾಟೂನ್ ಜಹಾನ್ ಎಂಬುವವರನ್ನು ಬಂಧಿಸಿದ್ದಾರೆ.
ಕೋಲಾರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ: 17 ವರ್ಷದ ಮಗಳನ್ನು ಕೊಲೆಗೈದು ಸುಟ್ಟು ಹಾಕಿದ ಅಪ್ಪ!
ಈ ಪ್ರಕರಣವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕಲು ಪೋಷಕರು ಹತ್ಯೆಯ ನಂತರ ಶಬಾನಾ ಶವವನ್ನು ಉತ್ತರಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ ಹೂತು ಹಾಕಲು ಮುಂದಾಗಿದ್ದಾರೆ. ಆದರೆ ಸ್ಥಳೀಯ ಪೊಲೀಸ್ ಮಾಹಿತಿದಾರರೊಬ್ಬರು ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ಯುವತಿ ದೇಹದಲ್ಲಿ ಗಾಯದ ಗುರುತುಗಳಿರುವುದು ಕಂಡು ಬಂದಿದೆ. ಪೊಲೀಸರು ಮೃತದೇಹವನ್ನು ಪರೀಕ್ಷಿಸಿದಾಗ ದೇಹದಲ್ಲಿ ಹಲ್ಲೆ, ಗಾಯದ ಗುರುತುಗಳಿದ್ದವು. ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯನ್ನು ಉಸಿರುಕಟ್ಟಿಸಿ ಸಾಯಿಸಲಾಗಿದೆ ಎಂಬುದು ಖಚಿತವಾಗಿತ್ತು ಎಂದು ಪೊಲೀಸ್ ಅಧಿಕಾರಿ ನಿಹಾರಿಕಾ ತೋಮರ್ ಹೇಳಿದ್ದಾರೆ.
ತುಮಕೂರು ಅತಿಥಿ ಶಿಕ್ಷಕನ ಕೊಲೆಗೆ ಸಿಕ್ತು ರೋಚಕ ತಿರುವು: ಪ್ರೀತಿಗೊಪ್ಪದ ತಂದೆ ಕೊಲೆಗೆ ಸುಪಾರಿ ಕೊಟ್ಟ ತಾಯಿ-ಮಗಳು
ಈ ಹಿನ್ನೆಲೆಯಲ್ಲಿ ಈಗ ಶಬಾನಾ ಪೋಷಕರಾದ ಮೊಹಮ್ಮದ್ ಶಫಿ, ಹಾಗೂ ಕಾಟೂನ್ ಜಹಾನ್ ಅವರನ್ನು ಬಂಧಿಸಲಾಗಿದೆ. ವಿವಾಹಿತನೊಂದಿಗಿನ ತಮ್ಮ ಮಗಳ ಸಂಬಂಧ ಇಷ್ಟವಿಲ್ಲದೇ ಮಗಳನ್ನು ತಾವೇ ಹಲ್ಲೆ ಮಾಡಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದಾರೆ. ಅಲ್ಲದೇ ಹತ್ಯೆಗೆ ಬಳಸಿದ ಆಯುಧಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.