Asianet Suvarna News Asianet Suvarna News

ಕೋಲಾರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ: 17 ವರ್ಷದ ಮಗಳನ್ನು ಕೊಲೆಗೈದು ಸುಟ್ಟು ಹಾಕಿದ ಅಪ್ಪ!

ಕೋಲಾರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿರುವ ಘಟನೆ 5 ತಿಂಗಳ ಬಳಿಕ ಬಯಲಾಗಿದೆ. ತಂದೆಯೇ ತನ್ನ ಮಗಳನ್ನು ಕೊಲೆಗೈದು ಸುಟ್ಟು ಹಾಕಿದ್ದಾರೆ. 

Kolar honor killing case father killed his 17 year old young girl sat
Author
First Published Dec 26, 2023, 5:35 PM IST

ಕೋಲಾರ (ಡಿ.26): ಪ್ರೀತಿ, ಪ್ರೇಮ ಅಂತ ಮನೆಯವರನ್ನು ಎದುರು ಹಾಕಿಕೊಳ್ಳದೇ ತಾನು ಕೊಟ್ಟ ಹುಡುಗನನ್ನು ಮದುವೆ ಮಾಡಿಕೊಂಡು ಆರಾಮವಾಗಿರು ಎಂದು ಕಾಲೇಜು ಓದುತ್ತಿದ್ದ ಮಗಳನ್ನು 17 ವರ್ಷಕ್ಕೆ ಮದುವೆ ಮಾಡಿಕೊಡಲಾಗಿದೆ. ಮದುವೆಯಾದರೂ ಪ್ರೀತಿಸಿದವನೇ ಬೇಕೆಂದು ಹಠವಿಡಿದ ಮಗಳನ್ನು ತವರು ಮನೆಗೆ ಕರೆದುಕೊಂಡು ಬಂದು ತಂದೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ಸುಟ್ಟು ಹಾಕಿರುವ ದುರ್ಘಟನೆ ನಡೆದಿದೆ. ಈ ಘಟನೆ ನಂತರ ಮಗಳು ಕಾಣೆಯಾಗಿದ್ದಾಳೆ ಎಂದು ತಂದೆಯೇ ದೂರು ಕೊಟ್ಟಿದ್ದು, 7 ತಿಂಗಳ ಬಳಿಕ ಸತ್ಯಾಂಶ ಮರ್ಯಾದಾ ಹತ್ಯೆ ನಡೆದಿರುವ ಸತ್ಯಾಂಶ ಹೊರಬಿದ್ದಿದೆ.

ಕೋಲಾರದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆ ಎಂಬ ಅನುಮಾನ ಕಂಡುಬಂದಿದೆ. ಸ್ವತಃ ತಂದೆಯೇ ಮಗಳನ್ನು ಕೊಚ್ಚಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಮಗಳು ಅರ್ಚಿತಾ (17) ತಂದೆಯಿಂದಲೇ ಕೊಲೆ ಆಗಿರುವ ಮಗಳು. ತಂದೆ ರವಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೇ 21ರಂದು ನಡೆದಿರುವ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮುಷ್ಟೂರು ಗ್ರಾಮದಲ್ಲಿ ಘಟನೆ ನಡೆದಿದೆ.

ರಜನಿಕಾಂತ್ ಪತ್ನಿಗೆ ಬೆಂಗಳೂರು ಕೋರ್ಟ್‌ನಿಂದ ಜಾಮೀನು ಮಂಜೂರು: ಲತಾ ರಜನೀಕಾಂತ್‌ಗೆ ಬಿಗ್‌ ರಿಲ್ಯಾಕ್ಸ್!

ಮಗಳ ಪ್ರೀತಿಯನ್ನು ವಿರೋಧಿಸಿದ ತಂದೆ ಬೇರೊಬ್ಬನ ಜೊತೆಗೆ ಮಗಳನ್ನು ಮದುವೆ ಮಾಡಿದ್ದನು. ನೀನು ಪ್ರೀತಿಸುವ ಹುಡುಗ ಸಂಬಂಧದಲ್ಲಿ ಅಣ್ಣ ಆಗುತ್ತಾನೆ ಬೇಡ ಎಂದು ಮಗಳಿಗೆ ಬುದ್ಧಿ ಹೇಳಿದ್ದರು. ಆದರೂ, ಅವನೊಂದಿಗೆ ಸಂಬಂಧ ಮುಂದುವರೆಸುತ್ತಿದ್ದಳು. ಮಗಳು ಅಪ್ರಾಪ್ತೆ ಆಗಿದ್ರು ಸಹ ಬೇರೊಬ್ಬನ ಜೊತೆಗೆ ಮಾರ್ಚ್‌ ತಿಂಗಳಲ್ಲಿ ಮದುವೆ ಮಾಡಿದ್ದರು. ಮದುವೆ ಬಳಿಕವೂ ಆಕೆ ಸರಿಯಾಗಿ ಗಂಡನೊಂದಿಗೆ ಸಂಸಾರ ಮಾಡದೇ ಕ್ಯಾತೆ ತೆಗೆದಿದ್ದಾಳೆ. ಇದರಿಂದಾಗಿ ಅಳಿಯ ಬಂದು ಮಗಳ ಬಗ್ಗೆ ತಂದೆ ರವಿಯ ಬಳಿ ದೂರನ್ನು ಹೇಳಿದ್ದಾನೆ. ಆಗ, ತಂದೆ ಮಗಳಿಗೆ ಬುದ್ದಿ ಹೇಳುತ್ತೇನೆ ಎಂದು ತವರು ಮನೆಗೆ ಕರೆದುಕೊಂಡು ಬಂದಿದ್ದಾನೆ.

ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ: ಅರ್ಹತೆ, ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ತವರು ಮನೆಗೆ ಕರೆದುಕೊಂಡು ಬಂದು ಬುದ್ಧಿ ಹೇಳಿದರೂ ನನಗೆ ಪ್ರೀತಿಸಿದವನೆ ಬೇಕು ಎಂದು ಮಗಳು ಪಟ್ಟು ಹಿಡಿದಿದ್ದಾಳೆ. ಇದಕ್ಕೆ ಕೋಪಗೊಂಡ ತಂದೆ ರವಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಬೇರೊಬ್ಬರ ಜಮೀನಿನಲ್ಲಿ ಮಗಳನ್ನು ಸುಟ್ಟು ಹಾಕಿದ್ದಾನೆ. ಆದರೆ, ಗ್ರಾಮದ ಕೆಲವರಿಗೆ ಹೆದರಿ ಮಗಳು ಕಾಣೆ ಆಗಿದ್ದಾಳೆಂದು ತಂದೆ ರವಿ ಅಕ್ಟೋಬರ್ 17ರಂದು ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರ ತನಿಖೆ ವೇಳೆ ಕೊಲೆ ಪ್ರಕರಣ ಬಯಲಾಗಿದೆ. ಸದ್ಯ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗಳ ಹೆಣ ಸುಟ್ಟಿರುವ ಸ್ಥಳದಲ್ಲಿ ಮೃತಳ ಅವಶೇಷಗಳಿಗಾಗಿ FSIL ತಂಡದಿಂದ ಹುಡುಕಾಟ ನಡೆಸಿದೆ.

Follow Us:
Download App:
  • android
  • ios