Asianet Suvarna News Asianet Suvarna News

ತುಮಕೂರು ಅತಿಥಿ ಶಿಕ್ಷಕನ ಕೊಲೆಗೆ ಸಿಕ್ತು ರೋಚಕ ತಿರುವು: ಪ್ರೀತಿಗೊಪ್ಪದ ತಂದೆ ಕೊಲೆಗೆ ಸುಪಾರಿ ಕೊಟ್ಟ ತಾಯಿ-ಮಗಳು

ತುಮಕೂರಿನ ಕುಳಿನಂಜಯ್ಯನ ಪಾಳ್ಯದಲ್ಲಿ  ನಡೆದ ಅತಿಥಿ ಶಿಕ್ಷಕ ಮರಿಯಪ್ಪನ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಆತನ ಹೆಂಡತಿ-ಮಗಳು ಸುಪಾರಿಕೊಟ್ಟು ಆತನ ಕೊಲೆ ಮಾಡಿಸಿದ್ದಾರೆ.

Tumkur guest teacher Mariyappa murder case have big twist wife and daughter give supari sat
Author
First Published Feb 13, 2024, 2:16 PM IST

ತುಮಕೂರು (ಫೆ.13): ಕಳೆದ ನಾಲ್ಕು ದಿನಗಳ ಹಿಂದೆ ತುಮಕೂರಿನ ಕುಳಿನಂಜಯ್ಯನ ಪಾಳ್ಯದಲ್ಲಿ  ನಡೆದ ಅತಿಥಿ ಶಿಕ್ಷಕ ಮರಿಯಪ್ಪ (47) ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಶಿಕ್ಷಕನ ಮಗಳ ಪ್ರೀತಿಗೆ ಒಪ್ಪದ ಕಾರಣ ತಂದೆಯನ್ನು ಕೊಲೆ ಮಾಡುವುದಕ್ಕೆ ತಾಯಿ-ಮಗಳು ಸೇರಿ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಹಾಡು ನಾವು ಕೇಳಿದ್ದೇವೆ. ಆದರೆ, ಇಲ್ಲಿ ಮಗಳ ಪ್ರೀತಿಯನ್ನು ಒಪ್ಪದ ತಂದೆಯನ್ನೇ ಮಗಳು ತನ್ನ ತಾತಯಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದು ದುರ್ದೈವದ ಸಂಗತಿಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಶುಕ್ರವಾರ (ಫೆ.09) ಮೋದೂರು ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮರಿಯಪ್ಪ (47) ಅವರನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕುಳ್ಳನಂಜಯ್ಯನಪಾಳ್ಯದ ಜಮೀನಿನ ಬಳಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಬೀಸಾಡಲಾಗಿತ್ತು.

ಅತಿಥಿ ಶಿಕ್ಷಕನಿಗೆ ಯಾರ ಮೇಲೆಯೂ ದ್ವೇಷವಿಲ್ಲದ್ದರಿಂದ ಕೊಲೆಗೆ ಕಾರಣವೇನೆಂದು ತಿಳಿದಿರಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಪ್ರತಿ ಹಂತದಲ್ಲಿ ರೋಚಕ ತಿರುವುಗಳು ಸಿಗುತ್ತಾ ಹೋಗಿವೆ. ಅಂತಿಮವಾಗಿ ಕೊಲೆಯಾದ ಅತಿಥಿ ಶಿಕ್ಷಕನ ಹೆಂಡತಿ ಶೋಭಾ ಹಾಗೂ ಮಗಳು ಹೇಮಲತಾ ಸೇರಿ ತಂದೆಯನ್ನು ಕೊಲೆ ಮಾಡುವುದಕ್ಕೆ ಸುಪಾರಿ ಕೊಟ್ಟಿರುವ ಮಾಹಿತಿ ಬಯಲಿಗೆ ಬಂದಿದೆ. ಇದನ್ನು ತಿಳಿದು ಪೊಲೀಸರೇ ಶಾಕ್‌ಗೆ ಒಳಗಾಗಿದ್ದು, ತಾಯಿ-ಮಗಳು ಹಾಗೂ ಕೊಲೆ ಮಾಡಿದವರನ್ನು ಸೇರಿಸಿ 8 ಜನರನ್ನು ವಶಕ್ಕೆ ಪಡೆದಿದ್ದಾರೆ.

ಮದುವೆ ವಯಸ್ಸಿನ ಮಗಳೊಂದಿಗೆ ನದಿಗೆ ಹಾರಿದ ತಾಯಿ: ಇಬ್ಬರೂ ಸಾವು

ಇಲ್ಲಿದೆ ನೋಡಿ ಪೂರ್ಣ ವಿವರ:
ಅತಿಥಿ ಶಿಕ್ಷಕ ಮರಿಯಪ್ಪ ತಾನಾಯ್ತ, ತನ್ನ ಕುಟುಂಬವಾಯ್ತು ಎಂದು ಬಡತನದಲ್ಲಿಯೇ ನೆಮ್ಮದಿ ಜೀವನ ಸಾಗಿಸುತ್ತಿದ್ದನು. ಆದರೆ, ಎದೆಯೆತ್ತರಕ್ಕೆ ಬೆಳೆದ ಮಗಳು ಹೇಮಲತಾ ಅದೇ ಗ್ರಾಮದ ಶಾಂತಕುಮಾರ ಎನ್ನುವ ಯುವಕನ್ನು ಪ್ರೀತಿ ಮಾಡಿದ್ದಳು. ಆದರೆ, ಇವರ ಪ್ರೀತಿಗೆ ತಾಯಿ ಶೋಭಾ ಒಪ್ಪಿಗೆ ಸೂಚಿಸಿದ್ದರೂ, ತಂದೆ (ಶಿಕ್ಷಕ ಮರಿಯಪ್ಪ) ಮಾತ್ರ ಭಾರಿ ವಿರೋಧ ವ್ಯಕ್ತಪಡಿಸಿದ್ದನು. ಈ ಸಂಬಂಧ ಶಿಕ್ಷಕ ಮರಿಯಪ್ಪ ತನ್ನ ಮಗಳನ್ನು ಪ್ರೀತಿಸಿದ್ದ ಶಾಂತಕುಮಾರ ಯುವಕನನ್ನ ಥಳಿಸಿದ್ದನು. ಇದರಿಂದ ಶಾಂತಕುಮಾರ್ ಗೆ ಮರಿಯಪ್ಪ ಮೇಲೆ ದ್ವೇಷ ಹೆಚ್ಚಾಗಿತ್ತು. ಸೇಡು ತೀರಿಸಿಕೊಳ್ಳಲು ಶಾಂತಕುಮಾರ್ ಸ್ನೇಹಿತರ ಜೊತೆಗೆ ಗೂಡಿ ಮರಿಯಪ್ಪ ಕೊಲೆಗೆ ಸಂಚು ರೂಪಿಸಿದ್ದನು.

ಇನ್ನು ಅತಿಥಿ ಶಿಕ್ಷಕ ಮರಿಯಪ್ಪನ ಪುಡಿಗಾಸು ಸಂಬಳ ಪಡೆದು ಬಡತನದ ಜೀವನ ಸಾಗಿಸುತ್ತಿದ್ದ ಮಗಳು ಹೇಮಲತಾ ಹಾಗೂ ಪತ್ನಿ ಶೋಭಾ ಕೂಡ ರೋಸಿ ಹೋಗಿದ್ದು, ಕೊಲೆಗೆ ಸಂಚು ರೂಪಿಸಿದ್ದ ಶಾಂತ ಕುಮಾರನೊಂದೊಗೆ ಕೈ ಜೋಡಿಸಿದ್ದರು. ಇನ್ನು ಬೆಂಗಳೂರಿನಲ್ಲಿ ವಾಸವಿದ್ದ ಶಾಂತಕುಮಾರ್ ಸ್ನೇಹಿತ‌ರಾದ ಸಂತು, ಹೇಮಂತ್ ಅವರಿಗೆ ಕೊಲೆ ಸುಫಾರಿ ನೀಡಲಾಗಿತ್ತು. ಹೇಮಂತ್ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮೂರು ಬಾಲಕರನ್ನು ಬಳಸಿಕೊಂಡು ಕೊಲೆ ಮಾಡಿದ್ದಾನೆ. 

ಮರಿಯಪ್ಪನ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದ ತಾಯಿ-ಮಗಳು: ಇನ್ನು ಶಿಕ್ಷಕ ಮರಿಯಪ್ಪನ ಕೊಲೆಯ ದಿನ ಆತನ ಚಲನ ವಲನಗಳ ಬಗ್ಗೆ ತಾಯಿ-ಮಗಳು ಸುಪಾರಿ ಹಂತಕರಿಗೆ ಮಾಹಿತಿ ನೀಡಿದ್ದರು. ಮರಿಯಪ್ಪ ಅಮವಾಸ್ಯೆ ಪೂಜೆ ಮುಗಿಸಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ಮಾಹಿತಿಯನ್ನು ಶಾಂತಕುಮಾರ್ ಗೆ ಹೇಳಿದ್ದರು. ಮರಿಯಪ್ಪ ಗ್ರಾಮದ ಬಳಿ ಬರುವ ಸಂದರ್ಭದಲ್ಲಿ ಬೈಕ್ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದರು. ಗಾಬರಿಗೊಂಡ ಮರಿಯಪ್ಪ ಬೈಕ್ ನಿಂದ ಕೆಳಗಿಳಿದು ಓಡಿ ಹೋಗಿದ್ದರು. ಬೆನ್ನತ್ತಿ ಹೋದ ಪಾತಕಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ‌ಕೊಲೆ ಮಾಡಿದ್ದರು.

ಪ್ರಿಯತಮೆ ಕೊಲೆಗೈದು, ತಾನು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದರೂ ಬದುಕುಳಿದ ಯುವಕ

ಕುಣಿಗಲ್ ಪೊಲೀಸರು ಶಾಂತಕುಮಾರ್, ಸಂತು, ಹೇಮಂತ್, ಶೋಭಾ, ಹೇಮಲತಾ ಹಾಗೂ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 8 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಆದರೆ, ಕೊಲೆಯಾದ ದಿನ ಸ್ವತಃ ತನ್ನ ತಂದೆಯ ಕೊಲೆ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವಂತೆ ಹೇಮಲತಾ ದೂರು ನೀಡಿದ್ದಳು. ಆದರೆ, ಪೊಲೀಸರು ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದಾಗ ಕೊಲೆ ಪ್ರಕರಣ ಬಯಲಾಗಿದೆ. ಈಗ ತಾನು ದುಡಿದು ತಾಯಿ-ಮಗಳನ್ನು ಸಾಕಿದ ಅತಿಥಿ ಶಿಕ್ಷಕ ಮರಿಯಪ್ಪ ಮಸಣ ಸೇರಿದರೆ, ಕೊಲೆ ಪಾತಕಿಗಳು ಜೈಲು ಸೇರಿದ್ದಾರೆ.

Follow Us:
Download App:
  • android
  • ios