ಗೂಡ್ಸ್‌ಶೆಡ್ ರಸ್ತೆ ಬುಲ್ಲಾರ್ಡ್ಸ್‌ಗೆ ಡಿಕ್ಕಿ ಹೊಡೆದು ಅಪ್ರಾಪ್ತ ಬಾಲಕ ಸಾವು: ಅತಿವೇಗದಿಂದ ಅಪಘಾತ
ಬೆಂಗಳೂರು ನಗರದ ಕೇಂದ್ರ ಭಾಗ ಮೆಜೆಸ್ಟಿಕ್ ಬಳಿಯಿರುವ ಗೂಡ್ಸ್‌ಶೆಡ್ ರಸ್ತೆಯಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪ್ರಾಪ್ತ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ಬೆಂಗಳೂರು (ಮಾ.12): ಬೆಂಗಳೂರು ನಗರದ ಕೇಂದ್ರ ಭಾಗ ಮೆಜೆಸ್ಟಿಕ್ ಬಳಿಯಿರುವ ಗೂಡ್ಸ್‌ಶೆಡ್ ರಸ್ತೆಯಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪ್ರಾಪ್ತ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಶಿಸ್ತುಬದ್ಧ ಸಂಚಾರಕ್ಕೆ ಅನುಕೂಲ ಆಗುವಂತೆ ರಸ್ತೆ ವಿಭಜಕಗಳನ್ನು ನಿರ್ಮಾಣ ಮಾಡಲಾಗುತ್ತದೆ. ಆದರೆ, ವೇಗವಾಗಿ ಬೈಕ್ ಚಲಾಯಿಸಿಕೊಂಡು ಬೈಕ್ ಚಲಾಯಿಸಿಕೊಂಡು ಹೋಗುವ ಯುವಕರು ಡಿವೈಡರ್‌ಗಳಿಗೆ ಗುದ್ದು ಅಪಘಾತಕ್ಕೆ ಒಳಗಾಗುವುದು ಕೂಡ ಹೆಚ್ಚಾಗುತ್ತಿದೆ. ಇದೇ ರೀತಿ ಅಪ್ರಾಪ್ತ ವಯಸ್ಕ ಯುವಕ ಧನುಷ್ (17) ಮೆಜೆಸ್ಟಿಕ್ ಬಳಿಯ ಗೂಡ್ಸ್‌ಶೆಡ್ ರಸ್ತೆಯಲ್ಲಿ ಹೋಗುವಾರ ಡಿವೈಡರ್‌ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾನೆ. ಇನ್ನು ಯುವಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಡೆದಿದೆ.
ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ: ಮೊದಲ ಪತಿಯ ಮಗನನ್ನು ಕೊಲೆ ಮಾಡಿದ ಎರಡನೇ ಪತಿ
ಅಜಾಗರೂಕ ಚಾಲನೆಯಿಂದ ಅಪಘಾತ: ಮೆಜೆಸ್ಟಿಕ್ ಕಡೆಯಿಂದ ಗೂಡ್ ಶೇಡ್ ಕಡೆ ತೆರಳುವಾಗ ಅಫಘಾತ ನಡೆದಿದೆ. ಅಫಘಾತದಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಬಾಲಕನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ. ಇನ್ನು ರಾತ್ರಿ ವೇಳೆ ಊಟ ತರಲು ಸ್ನೇಹಿತರೊಂದಿಗೆ ತೆರಳಿದ್ದನು. ಈ ವೇಳೆ ಅತೀ ವೇಗ ಅಜಾಗರೂಕತೆ ಚಾಲನೆಯಿಂದ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ಘಟನೆ ಕುರಿತು ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ವಕೀಲರನ್ನು ಅಟ್ಟಾಡಿಸಿ ಹೊಡೆದ ಕಿಡಿಗೇಡಿಗಳು
ಬೆಂಗಳೂರಿನಲ್ಲಿ ವಕೀಲರ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಆರೋಪ ಕೇಳಿಬಂದಿದೆ. ಮಾ.11ರ ರಾತ್ರಿ ವೇಳೆ ನಾಗವಾರ ಮಾರ್ಗದಿಂದ ಹೆಬ್ಬಾಳದ ಕಡೆಗೆ ಬರುತ್ತಿದ್ದ ವಕೀಲ ಹುಸೇನ್ ಎಂಬುವವರ ಕಾರನ್ನು ಅಟ್ಟಿಸಿಕೊಮಡು ಬಂದ ಬೈಕ್ ಸವಾರರು ಕಿಟಕಿ ಗಾಜು ಒಡೆದು ಪರಾರಿ ಆಗಿದ್ದಾರೆ. ಮಾರ್ಚ್ 11 ರ ಸಂಜೆ 4 ಗಂಟೆ ಸುಮಾರಿಗೆ ನಡೆದ ಘಟನೆ ನಡೆದಿದ್ದು,ಬೈಕ್ ನಲ್ಲಿ ಫಾಲೋ ಮಾಡಿಕೊಂಡು ಬಂದ ಕಿಡಿಗೇಡಿಗಳು
ಕಾರಿನ ಗಾಜು ಒಡೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
Dhruva Narayan: ಭಾರೀ ರೋಚಕವಾಗಿದ್ದ ಧ್ರುವನಾರಾಯಣ ರಾಜಕೀಯ ಜರ್ನಿ..!
ಕಾರು ಗಾಜು ಇಳಿಸದ್ದಕ್ಕೆ ಕಬ್ಬಿಣದ ರಾಡ್ ಬಳಸಿ ಹಲ್ಲೆ: ವಕೀಲ ಹುಸೇನ್ ತನ್ನ ಕಾರಿನಲ್ಲಿ ನಾಗವಾರ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಬರುತ್ತಿದ್ದ ವೇಳೆ ನಾಲ್ವರು ಯುವಕರ ಗುಂಪು ಎರಡು ಬೈಕ್ ನಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ಕಾರ್ ಗೆ ಬೈಕ್ ನಿಂದ ಅಡ್ಡಗಟ್ಟಿದ್ದಾರೆ. ನಂತರ ಕಾರಿನ ಗಾಜು ಇಳಿಸುವಂತೆ ಹೇಳಿದ್ದಾರೆ. ಗಾಜು ಇಳಿಸದೇ ಇದ್ದಾಗ ಕಬ್ಬಿಣದ ರಾಡ್ ನಿಂದ ಕಾರಿನ ಗಾಜು ಪುಡಿ ಮಾಡಿದ್ದಾರೆ. ಗ್ಲಾಸ್ ಒಡೆದು ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಈ ಘಟನೆ ಕುರಿತಂತೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.