Asianet Suvarna News Asianet Suvarna News

Dharwad: ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಬ್ಯಾಂಕ್ ಗೆ ಕನ್ನ!

ಧಾರವಾಡ ಕೋರ್ಟ್ ಸರ್ಕಲ್ ಬಳಿ ಇರುವ ಬೀರೇಶ್ವರ ಕೋ ಆಪ್ ರೇಟಿವ್ ಬ್ಯಾಂಕ್ ಗೆ ಕನ್ನ‌ ಹಾಕಿ 25 ಲಕ್ಷ ಹಣ, 25 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಒಡೆತನಕ್ಕೆ ಸೇರಿದ ಬ್ಯಾಂಕ್ ಇದಾಗಿದ್ದು, ಕಳ್ಳತನ ಮಾಡಿ ಸಿಸಿಟಿವಿ ಸುಟ್ಟು ಹಾಕಲಾಗಿದೆ.

minister shashikala jolle Shri Beereshwar Co-Operative bank robbery in dharwad gow
Author
First Published Jan 2, 2023, 5:07 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜ.2): ವಿದ್ಯಾಕಾಶಿ ಧಾರವಾಡದಲ್ಲಿ ಕಳ್ಳರು ಬ್ಯಾಂಕ್ ಗೆ ಕನ್ನ ಹಾಕಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಧಾರವಾಡ ಕೋರ್ಟ್ ಸರ್ಕಲ್ ಬಳಿ ಇರುವ ಬೀರೇಶ್ವರ ಕೋ ಆಪ್ ರೇಟಿವ್ ಬ್ಯಾಂಕ್ ಗೆ ಕನ್ನ‌ ಹಾಕಿ 25 ಲಕ್ಷ ಹಣ, 25 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ತಡರಾತ್ರಿ‌ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಕುರಿತು ಧಾರವಾಡ ಶಹರ ಪೋಲೀಸರು ಭೇಟಿ ನೀಡಿ ತನಿಖೆ ಆರಂಭ ಮಾಡಿದ್ದಾರೆ.

ನ್ಯೂ ಇಯರ್ ಮುಗಿಸಿ ಬ್ಯಾಂಕ್ ಬಂದು ನೋಡು ನೋಡುತ್ತಿದ್ದಂತೆ ಬ್ಯಾಂಕ್ ಲಾಕರ್ ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಅದರಲ್ಲೂ ಸಿನಿಮಿಯ ರೀತಿಯಲ್ಲಿ ಬ್ಯಾಂಕ್ ಒಳಗಡೆ ಹೋಗುತ್ತಿದ್ದಂತೆ ಬ್ಯಾಂಕ್ ನಲ್ಲಿರುವ ಎಲ್ಲ ಸಿಸಿ ಟಿವಿಗಳನ್ನ ಸುಟ್ಟು ಹಾಕಿದ್ದಾರೆ. ಮತ್ತು ಟಿವಿಆರ್ ಕೂಡಾ ತಗೆದುಕ್ಕೊಂಡು ಹೋಗಿದ್ದಾರೆ.  ಪ್ರಮುಖವಾಗಿ ಬ್ಯಾಂಕ್ ನಲ್ಲಿ ಯಾವುದೇ ಕುರುಹುಗಳನ್ನ ಬಿಡದೆ ಕಳ್ಳರು ಪರಾರಿಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ  ಮದ್ಯರಾತ್ರಿ 12 ಕ್ಕೆ ಕಳ್ಳತನ ಮಾಡಿ ಸಿಸಿ‌ ಟಿವಿ ಸುಟ್ಟು ಹಾಕಿದ್ದಾರೆ.

ಸ್ಥಳಕ್ಕೆ‌ ಬಂದ ಶಹರ್ ಪೋಲಿಸ್ ಠಾಣೆ ಪ್ರಕರಣವನ್ನು ದಾಖಲಿಸಿಕ್ಕೊಂಡು ಅಕ್ಕ ಪಕ್ಕದ ಅಂಗಡಿಗಳಲ್ಲಿ ಸಿಸಿ ಟಿವಿ ಗಳನ್ನ ಪರಿಶಿಲ‌ನೆ ಮಾಡುತ್ತಿದ್ದಾರೆ. ಕಳ್ಳರು ಗ್ಯಾಸ್ ಕಟರ್ ಬಳಕೆ‌ ಮಾಡಿಕ್ಕೊಂಡು ಕಳ್ಳತನ ಮಾಡಿದ್ದಾರೆ. ಎಂದು ಹೇಳಲಾಗುತ್ತಿದೆ. ಆದರೆ ಪೋಲಿಸರು ಎಲ್ಲಾ ಮೂಲಗಳಿಂದ ಮಾಹಿತಿಯನ್ನ ಕಲೆ‌ ಹಾಕುತ್ತಿದ್ದಾರೆ. ಅಕ್ಕ ಪಕ್ಕದ ಜನರನ್ನ ಕರೆಸಿ ಪೋಲಿಸರು ಮಾಹಿತಿಯನ್ನ‌ ಪಡೆದುಕ್ಕೊಳ್ಖುತ್ತಿದ್ದಾರೆ. ಸ್ಥಳಕ್ಕೆ ಎಸಿಪಿ ವಿಜಯ ತಳವಾರ ಭೇಟಿ  ನೀಡಿ ಪ್ರಕರಣದ ಮಾಹಿತಿಯನ್ನ ಪಡೆದುಕ್ಕೊಳ್ಳುತ್ತಿದ್ದಾರೆ. ಈ ಪ್ರಕರಣದ ಕುರಿತು ಧಾರವಾಡ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Belagavi Crime: ಗುಟಕಾ ತಿಂದು ಉಗಿದಿದ್ದಕ್ಕೆ ಕೊಲೆ: ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ ಕ್ರೂರಿ

ವಿಶೇಷವಾಗಿ ಕಳ್ಳರು ಕಳ್ಳತನ ಮಾಡಿದ ಬಳಿಕ ಸಿಸಿ ಟಿವಿಯಲ್ಲಿ ಸೆರೆ ಯಾಗ್ತಾರೆ, ಅದರ ಮುಖಾಂಥರ ಪೋಲಿಸರು ಎಷ್ಟೋ ಪ್ರಕರಣಗಳನ್ನ ಪತ್ತೆ‌ ಹಚ್ಚಿದ್ದಾರೆ. ಆದರೆ ಈ ಕಳ್ಳತನ ಪ್ರಕರಣದಲ್ಲಿ ಕಳ್ಳರು ಕಳ್ಳತನ ಮಾಡಿದ್ದು ಅಲ್ಲದೆ ಸಿಸಿಟಿವಿ ಗಳನ್ನ‌ ಸುಟ್ಟು ಹಾಕಿದ್ದಾರೆ. ಜೊತೆಗೆ ಡಿವಿಆರ್ ನ್ನು ಕೂಡಾ ತೆಗೆದುಕ್ಕೊಂಡು ಹೋಗಿದ್ದಾರೆ ಅಂದ್ರೆ ಇವರು ಅಂತಿಂತ್ ಕಳ್ಳರಲ್ಲ, ವೃತ್ತಿಪರ ಕಳ್ಳರು ಎಂದು ಮೆಲ್ನೋಟಕ್ಕೆ ಕಂಡು ಬರುತ್ತಿದೆ.

BENGALURU CRIME: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೀತಿ ವಿಚಾರಕ್ಕೆ ಎಲ್ಲರೆದುರೇ ವಿದ್ಯಾರ್ಥಿನಿ ಮರ್ಡರ್‌

ಇನ್ನು ಪೋಲಿಸರು ಕೂಡಾ ಈ ಕುರಿತು ಪೋಲಿಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಇಂತಹ ಪ್ರಕರಣದಲ್ಲಿ ಕಳ್ಳತನದ ಆರೋಪಿಗಳನ್ನ ಪತ್ತೆ ಹಚ್ಚೋದು ಪೋಲಿಸರಿಗೆ ಸ್ವಲ್ಪ ಕಷ್ಟ ಆದರೂ ಶಹರ ಪೋಲಿಸ್ ಠಾಣೆಯ ಸಿಪಿಐ ಪ್ರಭು ಗಂಗನಹಳ್ಳಿ ಇಂತಹ ಪ್ರಕಣಗಳನ್ನ ಬೇದಿಸಿದ್ದ ಉದಾಹರಣೆಗಳಿವೆ. ಆದಷ್ಟೂ ಬೇಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳರನ್ನ ಬಂಧಿಸಬೇಕಿದೆ.

Follow Us:
Download App:
  • android
  • ios