ಪಾಕಿಸ್ತಾನದ ಇಂಟಲಿಜೆನ್ಸ್ ಕರೆಗಳನ್ನು ಸಿಮ್ ಬಾಕ್ಸ್ ಮೂಲಕ ಲೋಕಲ್ ಕರೆಗಳಾಗಿ ಕನ್ವರ್ಟ್ ಮಾಡ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜೂ. 21): ಮಿಲಿಟರಿ‌ ಇಂಟಲಿಜೆನ್ಸ್ ಮತ್ತು ಸಿಸಿಬಿಯಿಂದ ಜಂಟಿ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು (International Call) ಲೋಕಲ್ ಕರೆಗಳಿಗೆ ಕನ್ವರ್ಟ್ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಇಂಟಲಿಜೆನ್ಸ್ ಕರೆಗಳನ್ನು ಸಿಮ್ ಬಾಕ್ಸ್ ಮೂಲಕ ಲೋಕಲ್ ಕರೆಗಳಾಗಿ ಕನ್ವರ್ಟ್ ಮಾಡ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. 58 ಸಿಮ್ ಬಾಕ್ಸ್ ಗಳ ಮೂಲಕ 2144 ಸಿಮ್ ಬಳಸಿ ಇಂಟರ್ ನ್ಯಾಷನಲ್ ಕರೆಗಳನ್ನು ಲೋಕಲ್ ಕರೆಗಳಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್‌ ಪೋಲಿಸರ ಬಲೆಗೆ ಬಿದ್ದಿದೆ. 

ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಅಂತಾರಾಷ್ಟ್ರೀಯ ಕರೆಗಳನ್ನು ಲೋಕಲ್ ಕಾಲ್ ಆಗಿ ಕನ್ವರ್ಟ್ ಮಾಡಲಾಗುತಿತ್ತು. ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಇಂಟಲಿಜೆನ್ಸ್‌ ಸಹ ಕರೆ ಬಂದಿರುವುದು ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಕೇರಳ ವಯನಾಡ್ ಮೂಲದ ಶರಾಫುದ್ದೀನ್( 41) ಬಂಧಿಸಿಲಾಗಿದೆ. ಆರೋಪಿ ಶರಾಫುದ್ದೀನ್ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಸಿಮ್ ಬಾಕ್ಸ್ (Sim Box) ಇಟ್ಟಿದ್ದ

ಇದನ್ನೂ ಓದಿ:ಸರ್ಕಾರಿ ನೌಕರಿ ಕೊಡಿಸೋದಾಗಿ ಉದ್ಯಮಿಗೆ 1 ಕೋಟಿ ಟೋಪಿ ಹಾಕಿದ ಬ್ರದರ್ಸ್‌..!

ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆ ಸಿಮ್ ಬಾಕ್ಸ್ ಇಟ್ಟು ಡೀಲ್ ಮಾಡಲಾಗುತಿತ್ತು. ರೇಡ್ ನಡೆಸಿ 58 ಸಿಮ್ ಬಾಕ್ಸ್ , ಮತ್ತು 2144 ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಂಗಳೂರು ಸೌತರ್ನ್ ಕಮ್ಯಾಂಡ್ ಟೀಂ ಮತ್ತು ಸಿಸಿಬಿಯ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.