ಬೆಂಗಳೂರು(ಡಿ. 15)   ಮಸಾಜ್ ಪಾರ್ಲರ್ ದಂಧೆಗೆ ಇನ್ಸ್ಪೆಕ್ಟರ್ ಮತ್ತು  SB ಪೇದೆ ತಲೆದಂಡವಾಗಿದೆ. ರಾಜಾಜಿನಗರ ನಗರ ಇನ್ಸ್ ಪೆಕ್ಟರ್ ವೆಂಕಟೇಶ ಮತ್ತು SB ವಿಠ್ಠಲ್ ತಲೆದಂಡವಾಗಿದೆ.

ಕಳೆದ ಎರಡು ದಿನಗಳ ಹಿಂದೆ ರಾಜಾಜಿನಗರ ಮತ್ತು ಬನಶಂಕರಿ ವ್ಯಾಪ್ತಿಯಲ್ಲಿ ಸಿಸಿಬಿ ದಾಳಿ ಮಾಡಿತ್ತು. ದಾಳಿ ವೇಳೆ‌ ಸಿಸಿಬಿ ಇಬ್ಬರನ್ನು ಬಂಧಿಸಿತ್ತು. 

ರಾಜಧಾನಿಯಲ್ಲಿ ಕ್ರಾಸ್ ಮಸಾಜ್ ಬ್ಯಾನ್; ಯಾಕಾಗಿ?

ದಾಳಿಗೂ ಮೊದಲೇ ಮಸಾಜ್ ಪಾರ್ಲರ್ ಮುಚ್ಚಿಸುವಂತೆ‌‌ ಕಮಿಷನರ್ ಸೂಚನೆ ನೀಡಿದ್ದರು. ಕಮಿಷನರ್ ಸೂಚನೆ ಇದ್ರೂ ಮಸಾಜ್ ಪರ್ಲಾರ್ ಒಪನ್ ಇದ್ದಿದ್ದಕ್ಕೆ  ಜವಾಬ್ದಾರಿ ಹೊತ್ತುಕೊಂಡವರಿಗೆ ಅಮಾನತು ಶಿಕ್ಷೆ ನೀಡಲಾಗಿದೆ.

ಸದ್ಯ ರಾಜಾಜಿನಗರ ಇನ್ಸ್ಪೆಕ್ಟರ್ ಮತ್ತು SB ಪೇದೆಯನ್ನು ಅಮಾನತು ಮಾಡಲಾಗಿದ್ದು ಎಚ್ಚರಿಕೆ ನೀಡಲಾಗಿದೆ.