ಕೂಡ್ಲಿಗಿ(ಜು.08): 23 ವರ್ಷವಾದರೂ ಋುತುಮತಿಯಾಗಿಲ್ಲವೆಂದು ನೊಂದ ಗೃಹಿಣಿಯೋರ್ವಳು ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದ್ದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಕೂಡ್ಲಿಗಿಯ ವೀಣಾ(23) ನೇಣಿಗೆ ಶರಣಾದ ಗೃಹಿಣಿಯಾಗಿದ್ದು ಈಕೆಯನ್ನು 2 ವರ್ಷಗಳ ಹಿಂದೆ ಸಂಡೂರು ತಾಲೂಕು ಬಂಡ್ರಿ ಗ್ರಾಮದ ರುದ್ರಮುನಿ ಎನ್ನುವವರಿಗೆ ಮದುವೆ ಮಾಡಿ ಕೊಡಲಾಗಿತ್ತು. ವೀಣಾ ಕೂಡ್ಲಿಗಿಯಲ್ಲಿಯೇ ಬಿಇಡಿ ವಿಧ್ಯಾಭ್ಯಾಸ ಮಾಡುತ್ತಿದ್ದಳು. 

ಬೈಲಹೊಂಗಲ: ಮಗನ ಕಿರುಕುಳಕ್ಕೆ ಬೇಸತ್ತು ತಾಯಿ ಆತ್ಮಹತ್ಯೆ

ತನಗೆ 23 ವರ್ಷವಾದರೂ ಇನ್ನೂ ಋುತುಮತಿಯಾಗಿಲ್ಲ. ಹೀಗಾಗಿ ಸಾಂಸಾರಿಕ ಜೀವನ ಸಾಗಿಸಲು ಸಾಧ್ಯವಿಲ್ಲವೆಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ಯಾರು ಇಲ್ಲದಿರುವ ವೇಳೆ​ಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ತಾಯಿ ಗೌರಮ್ಮ ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.