ಕೂಡ್ಲಿಗಿ: ಮಕ್ಕಳಾಗದಿದ್ದಕ್ಕೆ ನೇಣಿಗೆ ಶರಣಾದ ಮಹಿಳೆ

ಚಪ್ಪರದಹಳ್ಳಿ ಗ್ರಾಮದ ಲಲಿತಮ್ಮಳನ್ನು 12 ವರ್ಷಗಳ ಹಿಂದೆ ನಾಗರಾಜಗೆ ಮದುವೆ ಮಾಡಿಕೊಡಲಾಗಿತ್ತು| ಲಲಿತಮ್ಮ ಮಕ್ಕಳಾಗದಿದ್ದಕ್ಕೆ ಅಲ್ಲಲ್ಲಿ ಚಿಕಿತ್ಸೆ ಪಡೆದುಕೊಂಡರೂ ಪ್ರಯೋಜನವಾಗಿರಲಿಲ್ಲ| ಹಲವು ಬಾರಿ ನಾನು ಇದ್ದೇನು ಪ್ರಯೋಜನ ಸಾಯಬೇಕು ಎಂದು ಹೇಳುತ್ತಿದ್ದ ಮೃತ ಮಹಿಳೆ|

Married Women Commits Suicide in Kudligi in Ballari district

ಕೂಡ್ಲಿಗಿ(ಜು.14): ಮದುವೆಯಾಗಿ 12 ವರ್ಷವಾಗಿದ್ದರೂ ಮಕ್ಕಳಾಗದಿದ್ದಕ್ಕೆ ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ತಾಲೂಕಿನ ಈಚಲಬೊಮ್ಮನಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಲಲಿತಮ್ಮ (36) ಎನ್ನುವ ಮಹಿಳೆಯೇ ಮನೆಯಲ್ಲಿ ನೇಣಿಗೆ ಶರಣಾದ ಗೃಹಿಣಿ. ಚಪ್ಪರದಹಳ್ಳಿ ಗ್ರಾಮದ ಲಲಿತಮ್ಮಳನ್ನು 12 ವರ್ಷಗಳ ಹಿಂದೆ ಈಚಲಬೊಮ್ಮನಹಳ್ಳಿಯ ನಾಗರಾಜಗೆ ಮದುವೆ ಮಾಡಿಕೊಡಲಾಗಿತ್ತು. ಲಲಿತಮ್ಮ ಮಕ್ಕಳಾಗದಿದ್ದಕ್ಕೆ ಅಲ್ಲಲ್ಲಿ ಚಿಕಿತ್ಸೆ ಪಡೆದುಕೊಂಡರೂ ಪ್ರಯೋಜನವಾಗಿಲ್ಲ. ಹೀಗಾಗಿ ಹಲವು ಬಾರಿ ನಾನು ಇದ್ದೇನು ಪ್ರಯೋಜನ ಸಾಯಬೇಕು ಎಂದು ಹೇಳುತ್ತಿದ್ದಳು. 

ಬಸವನಬಾಗೇವಾಡಿ: ತಾಯಿ- ಮಗಳು ನದಿಗೆ ಹಾರಿ ಆತ್ಮಹತ್ಯೆ

ಗಂಡ ನಾಗರಾಜ ಸಹ ಮಕ್ಕಳಾಗದಿದ್ದಕ್ಕೆ ಕುಡಿತದ ಚಟಕ್ಕೆ ಅಂಟಿಕೊಂಡಿದ್ದನು. ​ಹೀಗಾಗಿ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಲಲಿತಮ್ಮ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಮವಾರ ಬೆಳಗ್ಗೆ ಗಂಡ ಹಾಗೂ ಅಕ್ಕಪಕ್ಕದ ಮನೆಯವರು ಬಾಗಿಲು ಬಡಿದರೂ ಚಿಲಕ ತೆಗೆಯದಿದ್ದಕ್ಕೆ ಕಿಟಕಿಯಲ್ಲಿ ನೋಡಿದಾಗ ಲಲಿತಮ್ಮ ನೇಣುಹಾಕಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಮೃತಳ ಸಹೋದರಿ ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios