* ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರ ಕೊಪ್ಪದಲ್ಲಿ ನಡೆದ ಘಟನೆ*  ಗಂಡು ಮಗು ಜನಿಸಿಲ್ಲ ಎಂದು ಮೃತ ಮಹಿಳೆಗೆ ದೈಹಿಕ ಹಾಗೂ ಮಾನಸಿಕ ಹಿಂಸೆ* ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು 

ಮುಂಡಗೋಡ(ಜು.02): ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೆ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಇಂದೂರ ಕೊಪ್ಪದಲ್ಲಿ ಗುರುವಾರ ಸಂಭವಿಸಿದೆ. 
ಈ ಕುರಿತು ಮೃತ ಮಹಿಳೆ ಪತಿ ಹಾಗೂ ಅತ್ತೆಯ ಮೇಲೆ ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವಾತಿ ಮಂಜುನಾಥ ಹೊಸೂರ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಮದುವೆಯಲ್ಲಿ ಯಾವುದೇ ರೀತಿ ವರದಕ್ಷಿಣೆ ನೀಡಿಲ್ಲ ಎಂಬುವುದು ಸೇರಿದಂತೆ ಸ್ವಾತಿಗೆ ಗಂಡು ಮಗು ಜನಿಸಿಲ್ಲ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಮೃತ ಮಹಿಳೆಯ ಪತಿ ಮಂಜುನಾಥ ಹೊಸೂರ ಹಾಗೂ ಅತ್ತೆ ತಾಯವ್ವ ಹೊಸೂರ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. 

ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ!

ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತಮ್ಮ ಪುತ್ರಿ ಸ್ವಾತಿ ನೇಣಿಗೆ ಶರಣಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೃತಳ ತಾಯಿ ಮಲ್ಲವ್ವ ಮಲ್ಲೇಶಪ್ಪ ಕಬ್ಬೇರ ದೂರು ನೀಡಿದ್ದಾರೆ. ಮುಂಡಗೋಡ ಕ್ರೈಮ್‌ ವಿಭಾಗದ ಪಿಎಸ್‌ಐ ಎನ್‌.ಡಿ. ಜಕ್ಕಣ್ಣನವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.