Asianet Suvarna News Asianet Suvarna News

ಮಾಜಿ ಗೃಹ ಸಚಿವರ ತವರಲ್ಲೇ ಗಾಂಜಾ ಮಾಫಿಯಾ; ದಂಧೆಗೆ ಬ್ರೇಕ್ ಹಾಕುತ್ತಾ ಪೊಲೀಸ್ ಇಲಾಖೆ?

ತೀರ್ಥಹಳ್ಳಿ ತಾಲ್ಲೂಕಿನ  ಶಿವಮೊಗ್ಗ  - ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಮಾಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

Marijuana peddlers arrested in Tirthahalli at shivamogga crime rav
Author
First Published Aug 13, 2023, 12:33 PM IST

ಶಿವಮೊಗ್ಗ (ಆ.13) : ತೀರ್ಥಹಳ್ಳಿ ತಾಲ್ಲೂಕಿನ  ಶಿವಮೊಗ್ಗ  - ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಮಾಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳಾದ ಯೂನಸ್‌, ಅತೀಫ್‌, ಮನೋಜ್‌  ಅಕ್ರಮವಾಗಿ ಗಾಂಜಾ(Illega marijuana) ಸಾಗಿಸುತ್ತಿದ್ದ ಬಂಧಿತ ಆರೋಪಿಗಳು ಎಲ್ಲರೂ ಅಗರ್ಭ ಶ್ರೀಮಂತರೇ. ಐಷಾರಾಮಿ ಕಾರುಗಳಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು.

ಕೆಎ 04 ಎಲ್‌ಸಿ 1205 ಸಂಖ್ಯೆಯ ಫಾರ್ಚುನರ್‌ ಕಾರಿ(Fortuner car)ನಲ್ಲಿ ಬಂದ ಮೂವರು ಆರೋಪಿಗಳು. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಅಕ್ರಮವಾಗಿ ಗಾಂಜಾ ಸಾಗಿಸಲಾಗುತ್ತಿತ್ತು. ಗಾಂಜಾ ಸಾಗಾಟ ಖಚಿತ ಮಾಹಿತಿ ಪಡೆದು ಡಿವೈಎಸ್‌ಪಿ ಗಜಾನನ ವಾಮನ ಸುತಾರ  ಮಾಳೂರು ಎಸ್‌ಐ ನವೀನ್‌ ಮಠಪತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಕಾರಿನಲ್ಲಿ 200 ಗ್ರಾಂ ಗಾಂಜಾ ಪತ್ತೆಯಾಗಿದೆ.

ಅಣ್ಣ-ತಮ್ಮಂದಿರ ಜಗಳದಲ್ಲಿ ಬೆಳಕಿಗೆ ಬಂತು ನಾಡ ಬಂದೂಕು ತಯಾರಿಸುವ ಭಯಾನಕ ಕೃತ್ಯ!

ಒಂದು ಕಡೆ ವೇಶ್ಯೆವಾಟಿಕೆ ದಂಧೆ, ಇನ್ನೊಂದೆಡೆ ಗಾಂಜಾ ಮಾಫಿಯಾ ಇಡೀ ಮಲೆನಾಡನ್ನು ಬೆಚ್ಚಿಬೀಳಿಸಿದೆ. ಗಾಂಜಾ ಮಾರಾಟದಲ್ಲಿ ತೊಡಗಿರುವವರು ನಿರುದ್ಯೋಗಿಗಳೋ, ಬಡವರೋ ಅಲ್ಲ, ಬದಲಾಗಿ ಐಷಾರಾಮಿ ಕಾರುಗಳನ್ನು ಹೊಂದಿರುವ ಶ್ರೀಮಂತರೇ ಗಾಂಜಾ ಪೆಡ್ಲರ್ಸ್. ಗೃಹ ಸಚಿವರ ತವರು ಜಿಲ್ಲೆಯೇ ಪೆಡ್ಲರ್ಸ್‌ಗಳ ಹಾಟ್ಸ್‌ಸ್ಪಾಟ್ ಆಗಿದೆ. 

ಇತ್ತೀಚಿಗೆ ಕೋಣಂದೂರಿನಲ್ಲಿ ತೋಟವೊಂದರಲ್ಲಿ ಬೆಳೆದಿದ್ದ ಪ್ರಕರಣ ಪತ್ತೆಹಚ್ಚಲಾಗಿತ್ತು. ಗಾಂಜಾ ಗಿಡ ಬೆಳೆದು ಮಾರಾಟ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಿದ್ದ ಪೊಲೀಸರು. ಇದೀಗ ಮಾಳೂರಿನಲ್ಲಿ ತನಿಖೆ ವೇಳೆ ಗಾಂಜಾ ಸಾಗಿಸುತ್ತಿದ್ದ ಪ್ರಕರಣ ಪತ್ತೆಯಾಗಿದೆ. ತೀರ್ಥಹಳ್ಳಿಯಲ್ಲಿ ವಿಪರೀತ ಪ್ರಮಾಣದಲ್ಲಿ ಬಳಕೆಯಾಗುತ್ತಿದೆಯಾ ಗಾಂಜಾ? ಇದರಿಂದ ಹೈ ಅಲರ್ಟ್ ಆಗಿರುವ ಶಿವಮೊಗ್ಗ ಪೊಲೀಸರು. ಕಟ್ಟುನಿಟ್ಟಿನ ಕ್ರಮದಿಂದಲೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಲೆನಾಡನ್ನೇ ಟಾರ್ಗೆಟ್ ಮಾಡಿಕೊಂಡಿರುವ ಗಾಂಜಾ ದಂಧೆಗೆ ಪೊಲೀಸರು ಹಾಕುತ್ತಾರಾ ಬ್ರೇಕ್? ಕಾದು ನೋಡಬೇಕು.

ಹೈಟೆಕ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಗಾಂಜಾ ಕೃಷಿ: ಮೆಡಿಕಲ್ ಸ್ಟೂಡೆಂಟ್ಸ್ ಅರೆಸ್ಟ್!

Follow Us:
Download App:
  • android
  • ios