ಮಂಗಳೂರು(ಅ. 23) ತುಳು ನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಕೊಲೆ ನಂತರ ಮಂಗಳೂರಿನಲ್ಲಿ ವಾತಾವರಣ ಕೊಂಚ ತಿರುವು ಪಡೆದುಕೊಂಡಂತೆ ಕಾಣುತ್ತಿದೆ. ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ಕಲ್ಲಡ್ಕ ನಿವಾಸಿ ಚೆನ್ನೆ ಫಾರೂಕ್ ಮೇಲೆ ತಲವಾರ್ ನಿಂದ ದಾಳಿ ಮಾಡಲಾಗಿದೆ. ರೌಡಿಶೀಟರ್ ಆಗಿರುವ ಚೆನ್ನೆ ಫಾರೂಕ್ ಗಂಭೀರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದರೂ ಸಾವಿಗೀಡಾಗಿದ್ದಾನೆ.

ಸುರೇಂದ್ರ ಬಂಟ್ವಾಳ ಕೊಂದಿದ್ದು ನಾನೆ, ಯಾವ ಸಾವಿಗೆ ಪ್ರತೀಕಾರ

ಬಂಟ್ವಾಳದ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಹಲ್ಲೆ ನಡೆದಿದೆ. ಕಾರಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ ಎಸಗಿದ್ದಾರೆ. ತಲವಾರಿನಿಂದ  ಕಂಡ ಕಂಡಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.