ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಿದ್ದರೂ ಮಾಡ್ತಾರೆ. ಹಾಸನ ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿರೋಧ ಅಥವಾ ಪ್ರತಿಸ್ಪರ್ಧಿ ಇಲ್ಲ. ಅವರ ರೀತಿ ರಾಜಕಾರಣ ಮಾಡಿದವರು ಯಾರು ಇಲ್ಲ. ಅವರನ್ನು ಸಿಲುಕಿಸಬೇಕು, ವೀಕ್ ಮಾಡಬೇಕು ಎಂದು ಷಡ್ಯಂತ್ರ ಮಾಡ್ತಾ ಇದ್ದಾರೆ ಎಂದು ಗುಡುಗಿದ ಸೂರಜ್‌ ರೇವಣ್ಣ 

ಹಾಸನ(ಮೇ.02):  ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣವನ್ನ ತನಿಖೆಗೆ ವಹಿಸಿದ್ದಾರೆ ಅಲ್ಲಿ ಏನು ಸಾಬೀತಾಗಬೇಕೋ, ಸಾಬೀತಾಗಲಿದೆ. ಈ ಬಗ್ಗೆ ನಾನು ಏನು ಮಾತನಾಡಲಿ ಎಂದ ವಿಧಾನಪರಿಷತ್ ಸದಸ್ಯ ಎಚ್‌.ಡಿ. ರೇವಣ್ಣ ಅವರ ಪುತ್ರ ಡಾ. ಸೂರಜ್ ರೇವಣ್ಣ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿದೇಶದಿಂದ ಯಾವಾಗ ಬರಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸೂರಜ್ ರೇವಣ್ಣ ಅವರು, ಪ್ರಜ್ವಲ್ ಬಗ್ಗೆ ನನಗೆ ಮಾಹಿತಿ ಇಲ್ಲ. ಇಲ್ಲಿ ನಾವು ಏನು ಕಾರ್ಯಕ್ರಮ ಅಟೆಂಡ್ ಆಗಬೇಕು ನಮ್ಮ ಕೆಲಸ ನಾನು ಮಾಡ್ತಾ ಇದೀನಿ ಎಂದಷ್ಟೇ ಹೇಳಿದ್ದಾರೆ. 

ಲೈಂಗಿಕ ಕಿರುಕುಳ ಕೇಸಲ್ಲಿ ಜಾಮೀನು ಕೋರಿದ ಸಂಸದ ಪ್ರಜ್ವಲ್ ಹಾಗೂ ರೇವಣ್ಣ; ಎಸ್‌ಐಟಿಗೆ ನೋಟೀಸ್ ಕೊಟ್ಟ ಕೋರ್ಟ್

ಎಚ್ಡಿ ರೇವಣ್ಣ ವಿರುದ್ಧವೂ ಹೊಳೆನರಸೀಪುರ ಠಾಣೆಯಲ್ಲಿ ಕೇಸ್ ದಾಖಲು ವಿಚಾರದ ಬಗ್ಗೆ ಮಾತನಾಡಿದ ಸೂರಜ್‌ ರೇವಣ್ಣ, ಎಚ್ಡಿ ರೇವಣ್ಣ ಅವರ ಮೇಲೆ ಸಾವಿರ ಆರೋಪ ಮಾಡಲಿ. ಏನು ಸಾಬೀತಾಗಬೇಕೋ ಅದು ಸಾಬೀತಾಗಲಿದೆ. ರೇವಣ್ಣ ಅವರು ಏನೆಂದು ನಮ್ಮ ಜಿಲ್ಲೆಯ ಜನರಿಗೆ ಗೊತ್ತು, ನಮ್ಮ ತಾಲ್ಲೂಕಿನ ಜನರಿಗೆ ಗೊತ್ತಿದೆ. ಅಂತಹ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ ಎಂದು ಹೇಳಿದ್ದಾರೆ. 

ತಮ್ಮ ಕುಟುಂಬದ ವಿರುದ್ಧ ಇಂತಹ ಆರೋಪಗಳ ಬಗ್ಗೆ ಕಿಡಿ ಕಾರಿದ ಸೂರಜ್‌ ರೇವಣ್ಣ, ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಿದ್ದರೂ ಮಾಡ್ತಾರೆ. ಹಾಸನ ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿರೋಧ ಅಥವಾ ಪ್ರತಿಸ್ಪರ್ಧಿ ಇಲ್ಲ. ಅವರ ರೀತಿ ರಾಜಕಾರಣ ಮಾಡಿದವರು ಯಾರು ಇಲ್ಲ. ಅವರನ್ನು ಸಿಲುಕಿಸಬೇಕು, ವೀಕ್ ಮಾಡಬೇಕು ಎಂದು ಷಡ್ಯಂತ್ರ ಮಾಡ್ತಾ ಇದ್ದಾರೆ ಎಂದು ಗುಡುಗಿದ್ದಾರೆ. 

ನಾಲ್ಕು ತಿಂಗಳ ಹಿಂದೆ ಡಿಕೆಶಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೂರಜ್‌ ರೇವಣ್ಣ, ನಾನು ಅವರನ್ನು ಭೇಟಿ ಆಗಿದ್ದು ಜನವರಿ ತಿಂಗಳಲ್ಲಿ. ಕ್ಷೇತ್ರದ ಅನುದಾನ ಹಾಗೂ ಕೆಲ ಎನ್ ಓಸಿ ವಿಚಾರದಲ್ಲಿ. ಈಗ ನಮ್ಮ ಕ್ಷೇತ್ರ ನಮ್ಮ ಜಿಲ್ಲೆಯ ಪ್ರತಿನಿಧಿ ನಾನು. ಆಗಲೇ ನೀವೆಲ್ಲ ತೋರಿಸಿದಿರಿ. ಹೌದು, ಭೇಟಿಯಾಗಿದ್ದು ನಿಜ ಅದು ಮಾಧ್ಯಮದಲ್ಲಿ ಬಂದಿದೆ. ಹೊಸದಾಗಿ ಎಲ್ಲಿ ಭೇಟಿ ಆಗಿದಿನಿ ಎಂದು ಪ್ರಶ್ನೆ ಮಾಡಿದ್ದಾರೆ.