'ನಟ ಸುರೇಂದ್ರನ ಕೊಂದಿದ್ದು ನಾನೇ'  ಯಾವ ಸಾವಿಗೆ ಪ್ರತೀಕಾರ!

ರಿಯಲ್ ಎಸ್ಟೇಟ್ ವ್ಯವಹಾರ/ ರೌಡಿಶೀಟರ್ ಸುರೇಂದ್ರ ಬಂಟ್ವಾಳ ನ ನ್ನು ನಾನೆ ಕೊಂದಿದ್ದು/ ಸತೀಶ್ ಕುಲಾಲ್ ಸ್ಟೋಟಕ ಹೇಳಿಕೆ/ ಪೊಲೀಸರ  ಎದುರು ಶರಣಾಗುತ್ತೇನೆ

First Published Oct 22, 2020, 7:50 PM IST | Last Updated Oct 22, 2020, 7:53 PM IST

ಮಂಗಳೂರು/ ಕಾರವಾರ(ಅ.  22) ತುಳು ಚಿತ್ರರಂಗದ ತುಳು ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ ನ ನ್ನು ನಾನೆ ಕೊಂದಿದ್ದು ಅಂತಾ ಆತನ ಜೊತೆಗಿರುತ್ತಿದ್ದ ಸತೀಶ್ ಹೇಳಿಕೊಂಡಿದ್ದಾನೆ. ಸತೀಶ್ ಪೊಲೀಸರಿಗೆ ಕಳುಹಿಸಿದ್ದಾನೆ ಎನ್ನಲಾದ ಆಡಿಯೋವೊಂದು ಈಗ ಲಭ್ಯವಾಗಿದೆ. ಹಾಗಾದ್ರೆ ಸತೀಶ್ ಪೊಲೀಸರಿಗೆ ಕಳುಹಿಸಿರೋ ಆಡಿಯೋದಲ್ಲಿ ಏನು ಹೇಳಿಕೊಂಡಿದ್ದಾನೆ ನೋಡೊಣ ಬನ್ನಿ.

ಚಿತ್ರನಟ ಸುರೇಂದ್ರ ಬಂಟ್ವಾಳ ಹತ್ಯೆಗೆ ಬೆಚ್ಚಿಬಿದ್ದ ಮಂಗಳೂರು

ನಮಸ್ತೆ ನಾನು ಸತೀಶ್ ಮಾತನಾಡೋದು. ನಿನ್ನೆ ರಾತ್ರಿ ವಸ್ತಿ ಅಪಾರ್ಟ್ಮೆಂಟ್ ನಲ್ಲಿ ಸುರೇಂದ್ರನ ಹತ್ಯೆಯಾಗಿದೆ. ಇದನ್ನು ನಾನೇ ಮಾಡಿದ್ದು. ಇದು ಕಿಶನ್ ಹೆಗ್ಡೆ ಸಾವಿನ ಪ್ರತಿಕಾರ. ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಇಂತಹ ಪಾಪದ ಜನರ ಸಾವಿಗೆ ಉಪಯೋಗಿಸುತ್ತಿದ್ದ. ನಾನು 22 ವರ್ಷದಿಂದ ಸುರೇಂದ್ರನ ಒಟ್ಟಿಗೆ ಇದ್ದವನು. ಅವನ ಎಲ್ಲ ಅವ್ಯವಹಾರಗಳು ಗೊತ್ತಿತ್ತು. ಮೊನ್ನೆ ನಡೆದ ಕಿಶನ್ ಹೆಗ್ಡೆ ಕೊಲೆಯಲ್ಲಿ ಇವನು ಹಣದ ಸಹಾಯ ಮಾಡಿದ್ದ  ಎಂದು ಹೇಳಿದ್ದು ಪೊಲೀಸರಿಗೆ ಶರಣಾಗುತ್ತೇನೆ ಎಂದು ತಿಳಿಸಿದ್ದಾನೆ.