* 'ಮಂಗಳೂರಿನಲ್ಲಿ ಮತ್ತೊಂದು ಹೆಣ ಬೀಳುತ್ತೆ' ಪೋಸ್ಟ್ ಹಾಕಿದ್ದವ ಅರೆಸ್ಟ್!* ಬೆಳ್ತಂಗಡಿ ಮೂಲದ ಮುಹಮ್ಮದ್ ಅಝ್ಮಲ್(20) ಬಂಧಿತ ಆರೋಪಿ* ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ವೈರಲ್ ಆಗಿದ್ದ ಪೋಸ್ಟ್

ಮಂಗಳೂರು, (ಏ.20): ಹಿಜಾಬ್ ಸಂಘರ್ಷದಿಂದ(Hijab Row) ಕರ್ನಾಟಕದಲ್ಲಿ ಧರ್ಮ ದಂಗಲ್ ಶುರುವಾಗಿದೆ. ಹಿಂದೂ-ಮುಸ್ಲಿಂ(Hindu Muslim)ಮಧ್ಯೆ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು ನಡೆಯುತ್ತಲೇ ಇವೆ. ಇನ್ನು ಹುಬ್ಬಳ್ಳಿ ಗಲಭೆ ಬೂದಿಮುಚ್ಚಿದ ಕೆಂಡದಂತಿದೆ.

 ಈ ಹೊತ್ತಲ್ಲಿ 'ಮಂಗಳೂರಿನಲ್ಲಿ ಬೀಳಲಿದೆ ಮತ್ತೊಂದು ಹೆಣ." ಎಂದು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ವೈರಲ್ ಆಗಿದೆ. ಮುಹಮ್ಮದ್ ಅಝ್ಮಲ್ ಎನ್ನುವಾತ ಪೋಸ್ಟ್ ಹಾಕಿದ್ದಾನೆ. ಈ ಮೂಲಕ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಯೊಬ್ಬನಿಗೆ ಕೊಲೆ ಬೆದರಿಕೆ ಒಡ್ಡಿದ್ದ. ಇದರಿಂದ ಎಚ್ಚೆತ್ತ ಮಂಗಳೂರು ಪೊಲೀಸರು (Mangaluru Police) ಮುಹಮ್ಮದ್ ಅಝ್ಮಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಮುಹಮ್ಮದ್ ಅಝ್ಮಲ್(20) ಬಂಧಿತ ಆರೋಪಿ. ಈತ ಇನ್ಸ್ಟಾಗ್ರಾಮ್, ಫೇಸ್‌ಬುಕ್‌ ಸೇರಿ ಹಲವಾರು ನಕಲಿ ಖಾತೆಗಳನ್ನು ರಚಿಸಿ ಕೊಲೆ ಬೆದರಿಕೆ ಒಡ್ಡಿದ್ದ. ಮಂಗಳೂರಿನ ರಥಬೀದಿ ದಯಾನಂದ ಪೈ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿರುದ್ದ ಮಾತನಾಡಿದ್ದ ವಿದ್ಯಾರ್ಥಿ ಸಾಯಿ ಸಂದೇಶ್ ಎಂಬಾತನಿಗೆ ಬೆದರಿಕೆ ಹಾಕಿದ್ದ.

Mangaluru ಪ್ರಾಧ್ಯಾಪಕಿ ಬಗ್ಗೆ ಅಶ್ಲೀಲ ಬರಹ, ಕಾಲೇಜಿನ ಸಂಚಾಲಕ ಸೇರಿ ಸಿಬ್ಬಂದಿ ಬಂಧನ

'ಮಂಗಳೂರಿನಲ್ಲಿ ಬೀಳಲಿದೆ ಮತ್ತೊಂದು ಹೆಣ..!", 'ಒಂದು ವಾರದೊಳಗೆ ನಿನ್ನ ಗೇಮ್ ಫಿನಿಶ್ ಮಾಡುತ್ತೇವೆ', ಮಂಗಳೂರಿನ ಅದೇ ಕಾಲೇಜ್ ಮುಂಭಾಗದಲ್ಲಿ ನಿನ್ನ ಹೆಣ ಬೀಳುತ್ತೆ' ಅಂತ ಬೆದರಿಕೆ ಒಡ್ಡಿದ್ದ. ವಿದೇಶಿ ಕಾಲ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಮೂಲಕ ಹತ್ತಾರು ಬೆದರಿಕೆ ಬಂದಿತ್ತು. ಕೆಲ ತಿಂಗಳ ಹಿಂದೆ ಹಿಜಾಬ್ ವಿಚಾರವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. 

ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ಬಂದ ವೇಳೆ ಸಾಯಿ ಸಂದೇಶ್ ಮತ್ತು ಕೆಲ ವಿದ್ಯಾರ್ಥಿಗಳ ಆಕ್ಷೇಪ ಎತ್ತಿದ್ದರು. ವಿದ್ಯಾರ್ಥಿಗಳ ಆಕ್ಷೇಪದ ಹಿನ್ನೆಲೆ ತರಗತಿ ಹಾಜರಾಗಲು ಪ್ರಾಂಶುಪಾಲರು ನಿರಾಕರಿಸಿದ್ದರು. ಹೀಗಾಗಿ ಕಾಲೇಜು ಗೇಟಿನ ಮುಂಭಾಗದಲ್ಲೇ ವಿದ್ಯಾರ್ಥಿಗಳು ಪರಸ್ಪರ ಜಗಳಕ್ಕಿಳಿದಿದ್ದರು. ವಿಡಿಯೋ ವೈರಲ್ ಬೆನ್ನಲ್ಲೇ ಎಬಿವಿಪಿ ವಿದ್ಯಾರ್ಥಿ ಸಾಯಿ ಸಂದೇಶ್ ಗೆ ಕೊಲೆ ಬೆದರಿಕೆ ಹಾಕಲಾಗಿತ್ತು.
ತನ್ನ ವಿರುದ್ದ ಕೊಲೆ ಬೆದರಿಕೆ ಸಂಬಂಧ ಸಾಯಿ ಸಂದೇಶ್ ಪ್ರಕರಣ ದಾಖಲಿಸಿದ್ದ.

ಪ್ರಾಧ್ಯಾಪಕಿ ಬಗ್ಗೆ ಅಶ್ಲೀಲ ಬರಹ, ಕಾಲೇಜಿನ ಸಂಚಾಲಕ ಸೇರಿ ಸಿಬ್ಬಂದಿ ಬಂಧನ
ಮಂಗಳೂರು (ಏ.20): ಪ್ರಾಧ್ಯಾಪಕಿಯ (professor ) ಕುರಿತು ಮಾನಹಾನಿಕರ ಪತ್ರವನ್ನು ಹಾಗೂ ಪೋಸ್ಟರ್ ತಯಾರಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ, ಕಾಲೇಜಿನ ಸಂಚಾಲಕ ಸೇರಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಕಾಲೇಜಿನ ಪ್ರಾಧ್ಯಾಪಕಿಯೋರ್ವರ (female lecturer ) ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಹಾಗೂ ಮಾನಹಾನಿಕರವಾಗಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದರು.‌ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ( Bantwal ) ಪ್ರತಿಷ್ಠಿತ ಕಾಲೇಜ್ ವೊಂದರ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ನಡುವಿನ ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರದ ಗಲಾಟೆಯಲ್ಲಿ ಕಾಲೇಜಿನ ಮಹಿಳಾ ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರವಾದ ಪತ್ರ, ಪೋಸ್ಟರ್ ಗಳನ್ನು ತಯಾರಿಸಿ ಹರಿ ಬಿಟ್ಟಿದ್ದಾರೆ.

ಅಂಚೆ ಮೂಲಕ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ, ಜೀವ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳಾ ಪ್ರಾದ್ಯಾಪಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.