Mangaluru: ಚಪ್ಪರ ಕುಸಿತ: 30 ಮಕ್ಕಳಿಗೆ ಗಾಯ
- ಚಪ್ಪರ ಕುಸಿತ: 30 ಮಕ್ಕಳಿಗೆ ಗಾಯ
- ಕಾಸರಗೋಡಿನ ಬೇಕೂರಿನಲ್ಲಿ ನಡೆದ ಘಟನೆ
ಮಂಗಳೂರು (ಅ.22) : ಕಾಸರಗೋಡಿನ ಮಂಜೇಶ್ವರ ಬಳಿ ಬೇಕೂರಿನಲ್ಲಿ ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮ ನಡೆಯುತ್ತಿದ್ದಾಗ ತಗಡಿನ ಚಪ್ಪರ ಕುಸಿದು 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಮಂಗಳೂರು, ಕಾಸರಗೋಡು ಹಾಗೂ ಉಪ್ಪಳದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಟಿನ್‌ಶೀಟ್ ಮತ್ತು ಬಿದಿರು, ಕಬ್ಬಿಣದ ರಾಡ್ ಬಳಸಿ ನಿರ್ಮಿಸಿದ್ದ ಚಪ್ಪರ ಇದಾಗಿದ್ದು, ಇದರಡಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಸಿಲುಕಿದ್ದರು. ಊಟದ ಸಮಯವಾಗಿದ್ದರಿಂದ ಮತ್ತು ಎರಡೂ ಕಡೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಿದ್ದರಿಂದ ಕಾರ್ಯಕ್ರಮ ವೇದಿಕೆಯಲ್ಲಿ ಹೆಚ್ಚು ಮಕ್ಕಳಿರಲಿಲ್ಲ. ಘಟನೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು ಚೆಲ್ಲಾಪಿಲ್ಲಿಯಾಗಿದ್ದು, ಹಾನಿಗೊಂಡಿವೆ. ಚಪ್ಪರ ಕುಸಿಯಲು ಕಾರಣ ತಿಳಿದುಬಂದಿಲ್ಲ.
ಸುಮಾರು 11 ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಮೈದಾನದಲ್ಲಿ ಬೃಹತ್ ಚಪ್ಪರ ನಿರ್ಮಿಸಲಾಗಿತ್ತು. ಕಬ್ಬಿಣದ ಶೀಟಿನ ಚಪ್ಪರವಾದ್ದರಿಂದ ಅದಕ್ಕೆ ಸೂಕ್ತ ಭದ್ರತೆ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಶಾಮಿಯಾನ ಸಿಬ್ಬಂದಿಯ ಎಡವಟ್ಟು ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ. ಉಪ್ಪಳ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Magalauru: ಕಾಂಗ್ರೆಸ್ ನಾಯಕಿ ವಿರುದ್ದ ಟ್ರೋಲ್, ಕಮಿಷನರ್ ಗೆ ದೂರು ಕೊಟ್ಟ ಪ್ರತಿಭಾ ಕುಳಾಯಿ!