ನೆಲಮಂಗಲ(ಡಿ.16): ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಾಂಗಲ್ಯ ಸರ ಕಸಿದಿರುವ ಘಟನೆ ನಗರದ ಜಯದೇವ್‌ ಹಾಸ್ಟೆಲ್‌ ರಸ್ತೆ ಬಳಿ ಬೆಳಿಗ್ಗೆ ನಡೆದಿದೆ. ಕೋಟೆ ಬೀದಿ ನಿವಾಸಿ ಶಾಂತಕುಮಾರಿ ಎಂಬಾಕೆ ಹಲ್ಲೆಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ. 

ಪ್ರತಿನಿತ್ಯದಂತೆ ಮನೆಯಿಂದ ಹೊರಟ ಮಹಿಳೆ ಬೆಳಗಿನ ಡೇರಿ ಹಾಲು ತೆಗೆದುಕೊಂಡು ಹಿಂತಿರುಗುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದು ಇಬ್ಬರು ಮಹಿಳೆಗೆ ಮಚ್ಚಿನಿಂದ ತಲೆಗೆ ಹೊಡೆದು ಸುಮಾರು 1 ಲಕ್ಷಕ್ಕಿಂತ ಹೆಚ್ಚು ಬೆಲೆಬಾಳುವ 30 ಗ್ರಾಂ ಚಿನ್ನದ ಸರ ಕಸಿದು ಬೈಕ್‌ನಲ್ಲಿ ಕಳ್ಳರು ಪರಾರಿಯಾಗಿದ್ದಾರೆ. 

ಬೆಂಗಳೂರು ಮಹಿಳೆಯರೇ ಎಚ್ಚರ : ಇಂತಹ ಖತರ್ನಾಕ್ ಗ್ಯಾಂಗ್ ಇದೆ

ಈ ಬಗ್ಗೆ ಟೌನ್‌ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.