ಮಂಡ್ಯ (ಫೆ.  25)  ಮದುವೆಯಾದ ಮೂರೇ ದಿನಕ್ಕೆ ಪ್ರೇಮಿಗಳನ್ನು ಮಂಡ್ಯ ಪೊಲೀಸರು ದೂರ ಮಾಡಿದರಾ? ಹೀಗೊಂದು ಪ್ರಶ್ನೆ  ಮೂಡಿದೆ  ಯುವತಿಯನ್ನ ಸಂಧಾನಕ್ಕೆ ಕರೆದು ಹೆತ್ತವರ ಜೊತೆ ಕಳುಹಿಸಿರುವ ಆರೋಪ ಕೇಳಿಬಂದಿದೆ.

ಒಂದುವಾರದಲ್ಲಿ ವಾಪಸ್ ಕಳುಹಿಸುತ್ತೇವೆ, ನಾವೇ ಮುಂದೆ ನಿಂತು ಮದುವೆ ಮಾಡಿ ಕಳುಹಿಸ್ತೇವೆ ಎಂದು ಹೇಳಿ ಹೆತ್ತವರು ಕರೆದುಕೊಂಡು ಹೋಗಿದ್ದರು.  ಆಕೆಯ ಗಂಡನ ಜೊತೆ ಮಾತನಾಡಲು ಅವಕಾಶ ನೀಡಿಲ್ಲ. ಅವರು ಹೇಳಿದ್ದ ಟೈಂ ಬುಧವಾರ ಮುಕ್ತಾಯವಾಗಿದೆ. ತನ್ನನ್ನ ನಿನ್ನ ಜೊತೆ ಮದುವೆ ಮಾಡಲ್ಲ ಇವರು ಹೇಗಾದ್ರು ಮಾಡಿ ನನ್ನ ವಾಪಸ್ ಕರೆದುಕೊಂಡು ಹೋಗು ಎನ್ನುತ್ತಿರುವ ಯುವತಿ ಯುವಕನ ದುಂಬಾಲು ಬಿದ್ದಿದ್ದಾರೆ.

ರೈತನಿಗೆ ಹೆಣ್ಣು ಕೊಡುವ ಕಾಯಿದೆಯನ್ನಾದರೂ ತನ್ನಿ

ಹೆಂಡತಿಯನ್ನ ಕರೆಸಿಕೊಡಿ ಎಂದು ಮಂಡ್ಯ ಎಸ್‌ಪಿಗೆ ದೂರು ನೀಡಲು ಯುವಕ ಮುಂದಾಗಿದ್ದಾರೆ. ಮಂಡ್ಯ ನಗರದ ಕಲ್ಲಹಳ್ಳಿಯ ನಿವಾಸಿ ತೇಜಸ್ ತುಮಕೂರು ಮೂಲದ ಯುವತಿ ಚೈತನ್ಯ ಮದುವೆಯಾಗಿ ಈಗ ಬೇರೆಯಾಗಿದ್ದಾರೆ ಕುಣಿಗಲ್ ಬಳಿಯ ವಾನಗೆರೆ ನಿವಾಸಿ ಚೈತನ್ಯಗೆ  ಬೆಂಗಳೂರಿನಲ್ಲಿ ಓದುವ ವೇಳೆ ತೇಜಸ್ ಪರಿಚಯ ಆಗಿದ್ದರು.

ಎರಡು ವರ್ಷಗಳಿಂದ ಜೋಡಿ ಪ್ರೀತಿಯಲ್ಲಿ ಇತ್ತು. ಜಾತಿ ಕಾರಣಕ್ಕೆ ಯುವತಿ ಮನೆಯವರು ಒಪ್ಪಿಕೊಂಡಿಲ್ಲ. ಯುವತಿಗೆ ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥಕ್ಕೆ  ಮನೆಯವರು ನಿರ್ಧಾರ  ಮಾಡಿದ್ದಾರೆ. ಫೆ.15 ರಂದು ನಿಶ್ಚಿತಾರ್ಥ ನಿಗದಿ ಮಾಡಲಾಗಿದೆ. ಆದ್ರೆ ಒಂದು ದಿನ ಮೊದಲೇ ಫೆ 14  ರಂದು ಮನೆ ಬಿಟ್ಟು ಯುವತಿ ಮಂಡ್ಯಕ್ಕೆ ಬಂದಿದ್ದಾರೆಎ.

15 ರಂದು ಮಂಡ್ಯದ ದೇವಾಲಯದಲ್ಲಿ ಮವೆಯಾಗಿದ್ದಾರೆ. 16 ರಂದು ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿಕೊಂಡಿದ್ದಾರೆ. 18ಕ್ಕೆ ಮಂಡ್ಯಗೆ ಯುವತಿಯ ಹೆತ್ತವರು ಬಂದಿದ್ದು ಮಂಡ್ಯದ ಪಶ್ಚಿಮ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆದಿದೆ. ಈ ನಡುವೆ ಪೊಲೀಸರೇ ಮಧ್ಯಸ್ತಿಕೆ ವಹಿಸಿ ಯುವತಿಯನ್ನ ಕಳುಹಿಸಿದ್ದಾರೆ ಎಂದು ಯುವಕ ಆರೋಪ ಮಾಡಿದ್ದಾರೆ.ನಾವಿಬ್ಬರು ದೂರವಾಗಲು ಪೊಲೀಸರೇ ಕಾರಣ ಎಂದು ದೂರು ನೀಡಲು ತೇಜಸ್ ಮುಂದಾಗಿದ್ದಾರೆ.

ಮಂಡ್ಯದ ಪಶ್ಚಿಮ ಠಾಣೆ ಪೊಲೀಸರ ವಿರುದ್ದ  ದೂರು ನೀಡಲು ಎಸ್‌ಪಿ ಕಚೇರಿಗೆ ಬಂದಿದ್ದಾರೆ. ಯುವಕ ದೂರು ನೀಡ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಬಂದ ಪಶ್ಚಿಮಠಾಣೆಯ ಎಸ್‌ಐ ವೆಂಕಟೇಶ್ 'ನಾನೇನು ಯುವತಿಯನ್ನ ಅವರ ಹೆತ್ತವರ ಜೊತೆ ಕಳುಹಿಸಿಲ್ಲ, ನನ್ನ ವಿರುದ್ದ ದೂರು ಕೊಡಲು ಯಾಕೆ ಬಂದಿರುವೆ ಎಂದು ಕೇಳಿದ್ದಾರೆ.ಇನ್ನೊಂದು ಕಡೆ ನಮಗೆ ನ್ಯಾಯ ಕೊಡಿಸಿ ಎಂದು ಬೇಡಿ‌ಕೊಳ್ತಿರುವ ತೇಜಸ್ ಹಾಗೂ ಆತನ ತಂದೆ ಲಕ್ಷ್ಮಿ‌ನಾರಾಯಣ ವಿನಂತಿ ಮಾಡಿಕೊಂಡಿದ್ದಾರೆ.