Asianet Suvarna News Asianet Suvarna News

ಮಂಡ್ಯ: ಮನೆಯಲ್ಲಿದ್ದ ಒಂದು ಕೆಜಿ ಚಿನ್ನ ಕದ್ದು ಖದೀಮರು ಪರಾರಿ..!

ಮಂಡ್ಯ‌ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆದ ಘಟನೆ, ಸೋಮನಹಳ್ಳಿಯ ಲೋಲಾಕ್ಷಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. 

One kg of Gold Stolen at Maddur in Mandya grg
Author
First Published Jan 24, 2023, 10:16 AM IST

ಮಂಡ್ಯ(ಜ.24):  ಮನೆಯಲ್ಲಿದ್ದ ಒಂದು ಕೆಜಿ ಚಿನ್ನ ಕಳ್ಳತನವಾದ ಘಟನೆ ಮಂಡ್ಯ‌ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಿನ್ನೆ(ಸೋಮವಾರ) ಸಂಜೆ ನಡೆದಿದೆ. ಸೋಮನಹಳ್ಳಿಯ ಲೋಲಾಕ್ಷಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. 

ಲೋಲಾಕ್ಷಿ ಅವರು ಸಂಜೆ ವೇಳೆ ಸ್ನೇಹಿತರ ಮನೆಗೆ ತೆರಳಿದ್ದರು. ಈ ವೇಳೆ ಕಳ್ಳರು ಬೀಗ ಒಡೆದು‌ ಮನೆಗೆ ನುಗ್ಗಿ, ಬೀರುವಿನಲ್ಲಿ ಇದ್ದ ಒಡವೆಗಳನ್ನು ತೆಗೆದುಕೊಂಡು‌ ಪರಾರಿಯಾಗಿದ್ದಾರೆ ಅಂತ ತಿಳಿದು ಬಂದಿದೆ. 

Bengaluru: ವಿವಾಹಿತನಿಂದ 2ನೇ ಮದುವೆಗೆ ಒತ್ತಡ: ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿ ಕುತ್ತಿಗೆಗೆ ಇರಿತ

ಲೋಲಾಕ್ಷಿ ಅವರು ಸ್ನೇಹಿತರ ಮನೆಯಿಂದ ವಾಪಸ್‌ ಬಂದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಲೋಲಾಕ್ಷಿ ಪೊಲೀಸ್ ಠಾಣೆಗೆ ತಿಳಿಸಿದ್ದರು. ಮನೆಯಲ್ಲಿದ್ದ ಒಂದು ಕೆಜಿ ಚಿನ್ನ ಕಳುವಾಗಿದೆ ಅಂತ ಲೋಲಾಕ್ಷಿ ಮಾಹಿತಿ ನೀಡಿದ್ದಾರೆ. 
ಘಟನಾ ಸ್ಥಳಕ್ಕೆ ಶ್ವಾನ ದಳದಿಂದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಕಳ್ಳತನದಿಂದ‌ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios