ಭಕ್ತನಿಂದ ಹೊರಬಿತ್ತು ಫೋಟೋ: ವಿನಯ್ ಗುರೂಜಿಗೆ ಸಂಕಷ್ಟ..!
ಭಕ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಸ್ವಯಂಘೋಷಿತ ಆಧ್ಯಾತ್ಮ ಗುರು ವಿನಯ್ ಗುರೂಜಿ ಫೋಟೋವೊಂದು ಸಂಕಷ್ಟ ತಂದೊಡ್ಡಿದ್ದು, ವಿನಯ್ ಗುರೂಜಿ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.ಏನದು ಪೋಟೋ..? ಈ ಕೆಳಗಿನಂತಿದೆ ನೊಡಿ ಮಾಹಿತಿ.
ಚಿಕ್ಕಮಗಳೂರು,(ಜ.08): ಸಾಮಾಜಿಕ ಜಾಲತಾಣವು ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ. ನಮ್ಮ ಸಮಾಜದಲ್ಲಿ ಹುಟ್ಟಿಕೊಂಡ ಹೊಸಚಿಂತನೆಗಳನ್ನು ವ್ಯಕ್ತಪಡಿಸಲು ಇದು ಒಳ್ಳೆಯ ವೇದಿಕೆ.
ಆದ್ರೆ, ಇದೀಗ ಇದೇ ಸಾಮಾಜಿಕ ಜಾಲತಾಣ ವಿನಯ್ ಗುರೂಜಿ ಅವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಗೌರಿಗದ್ದೆ ವಿನಯ್ ಗುರೂಜಿ ಆಶ್ರಮದಲ್ಲಿ ಅಚ್ಚರಿ ಘಟನೆ!
ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಸಮೀಪದ ಗೌರಿಗದ್ದೆಯ ಅವದೂತ ವಿನಯ್ ಗುರೂಜಿ ಅವರು ತಲೆ ಸಹಿತ ಇರುವ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋವೊಂದು ವೈರಲ್ ಆಗಿದೆ.
ಈಗ ಅದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಗ್ರಾಸವಾಗಿದ್ದು, ಹುಲಿ ಚರ್ಮ ನೀಡಿದ ಶಿವಮೊಗ್ಗದ ಪ್ರತಿಷ್ಠಿತ ಕುಟುಂಬವೊಂದರ ವ್ಯಕ್ತಿ ಹಾಗೂ ಇದನ್ನು ಸ್ವೀಕರಿಸಿದ ವಿನಯ್‌ಗುರೂಜಿ ಇಬ್ಬರೂ ಕಾನೂನು ಕ್ರಮ ಎದುರಿಸಬೇಕಾದ ಅನಿವಾರ್ಯತೆ ಇದೆಯಾ ಎಂದು ಚರ್ಚೆಗಳು ಸಹ ನಡೆದಿವೆ.
ಡಿಕೆಶಿ ಮುಂದೆ ಮತ್ತೆ 2 ಕಷ್ಟಗಳು, 2 ಹುದ್ದೆಗಳು: ಭವಿಷ್ಯ ನುಡಿದ ವಿನಯ್ ಗುರೂಜಿ
ಹುಲಿ ಚರ್ಮ ಬೆಳಕಿಗೆ ಬಂದಿದ್ದೇಗೆ..?
ಬೆಂಗಳೂರಿನ ಪ್ರಭಾವಿ ವ್ಯಕ್ತಿಯೊಬ್ಬರು ಇತ್ತೀಚೆಗೆ ವಿನಯ್ ಗುರೂಜಿ ಅವರನ್ನು ಅವರ ಆಶ್ರಮದಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರ ಭೇಟಿ ಫೋಟೋವೊಂದನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆ ಫೋಟೋದಲ್ಲಿ ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕುಳಿತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿವೆ.
ಬಳಿಕ ಹುಲಿ ಚರ್ಮವನ್ನು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿಯವರಿಗೆ ಭಕ್ತಿಪೂರ್ವಕವಾಗಿ ನೀಡಲು ಅನುಮತಿ ನೀಡಬೇಕೆಂದು ಶಿವಮೊಗ್ಗ ಮೂಲದ ಡಿ.ಆರ್. ಅಮರೇಂದ್ರ ಕಿರೀಟ ಎನ್ನುವರು ಶಿವಮೊಗ್ಗದ ವನ್ಯಜೀವಿ ವಿಭಾಗದ ಉಪಅರಣ್ಯಾಧಿಕಾರಿಗಳಿಗೆ ಬರೆದ ಪತ್ರವೂ ಸಹ ವೈರಲ್ ಆಗಿದೆ.
ಈ ಪ್ರತದಲ್ಲಿ ನಮ್ಮ ಬಳಿ ಹುಲಿ ಚರ್ಮ ಸೇರಿದಂತೆ ಕೆಲವು ಅಮೂಲ್ಯ ವಸ್ತುಗಳಿರುವುದಾಗಿ ಈ ಹಿಂದೆಯೇ ಘೋಷಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ವಿನಯ್ ಗುರೂಜಿ ರಸ್ತೆ ನಾಮ ಫಲಕ ತೆರವುಗೊಳಿಸಿದ ಬಿಬಿಎಂಪಿ!
ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.
ವಿನಯ್ ಗುರೂಜಿ ಸ್ಪಷ್ಟನೆ
ಈ ಹುಲಿ ಚರ್ಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕುರಿತಂತೆ ಸ್ಪಷ್ಟನೆ ನೀಡಿರುವ ವಿನಯ್ ಗುರೂಜಿ, ಹುಲಿ ಚರ್ಮ ಅಕ್ರಮದಲ್ಲ. ಆಶ್ರಮಕ್ಕೆ ಭಕ್ತರು ನೀಡಿದ್ದು. ಅದಕ್ಕೆ ಸೂಕ್ತ ಮಾಲೀಕತ್ವ ಪ್ರಮಾಣ ಪತ್ರಕೂಡ ಇದೆ. ಶೀಘ್ರದಲ್ಲೇ ಅದನ್ನು ಅರಣ್ಯಾಧಿಕಾರಿಗಳಿಗೆ ನೀಡುತ್ತೇವೆ ಎಂದಿದ್ದಾರೆ.
ಕಾನೂನು ಏನು ಹೇಳುತ್ತೆ..?
1972ರ ವನ್ಯಜೀವ ಸಂರಕ್ಷಣಾ ಕಾಯ್ದೆ ಪ್ರಕಾರ, ಯಾವುದೇ ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸುವುದು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ.
ಒಂದು ವೇಳೆ ವನ್ಯಜೀವಿಗಳ ಅಂಗಾಂಗಗಳು ಕಂಡುಬಂದಲ್ಲಿ ಅಂತವರ ವಿರುದ್ಧ ಕೇಸ್ ಬುಕ್ ಆಗಲಿದ್ದು, ಅದು ನಿಜವೆಂದು ಸಾಬೀತಾದ್ರೆ 3 ರಿಂದ 7 ವರ್ಷಗಳ ಕಾಲ ಜೈಲು ಶಿಕ್ಷೆ. ಜತೆಗೆ 10 ಸಾವಿರ ರೂ. ದಂಡ ವಿಧಿಸಹುದು.