ಪಾಟ್ನಾ(ಫೆ. 08) ಹೊಟೆಲ್ ಕೋಣೆಯೊಂದರಲ್ಲಿ ಮಹಿಳೆ ಮತ್ತು ಪುರುಷನ ಶವ ಪತ್ತೆಯಾಗಿದೆ. ಇಬ್ಬರ ತಲೆಯಲ್ಲಿ ಗುಂಡು ಸಿಕ್ಕಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ತನಿಖೆ ಆರಂಭವಾಗಿದೆ.

ಈಗ ಮೃತಪಟ್ಟಿರುವ ವ್ಯಕ್ತಿ, ಮನೀಶ್ ಕುಮಾರ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದೆ. ಮಹಿಳೆಯೊಂದಿಗೆ   ಕೋಣೆ ಪಡೆದುಕೊಂಡಿದ್ದರು. ನಾವಿಬ್ಬರು ದಂಪತಿ ಎಂದು ಹೊಟೆಲ್ ಸಿಬ್ಬಂದಿಗೆ ಹೇಳಿದ್ದರು.

ಹೊಲದಲ್ಲೇ ಪತ್ನಿ ಜತೆ ದೈಹಿಕ ಸಂಪರ್ಕ.. ಎರಡು ದಿನದ ನಂತರ ಶವ ಪತ್ತೆ
 
ಮ್ಯಾನೇಜರ್ ಚೋಟು ಕುಮಾರ್  ಹೇಳುವಂತೆ, ಮನೀಶ್ ಕುಮಾರ್ ಶ್ರೀವಾಸ್ತವ್ ಸಂಜೆ ನಾನು ಚೆಕ್ ಔಟ್ ಆಗಲಿದ್ದೇನೆ ಎಂದು ಹೇಳಿದ್ದರು. ಆದರೆ ಸಂಜೆಯಾದರೂ ಕೋಣೆಯಿಂದ ಯಾವ ರೆಸ್ಪಾನ್ಸ್ ಬರಲಿಲ್ಲ.  ಇದಾದ ಮೇಲೆ ಪೊಲೀಸರಿಗೆ ಕರೆ ಮಾಡಿದೆವು ಎಂದು ಘಟನೆ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಹೊಟೆಲ್ ಕೋಣೆಯ ಬಾಗಿಲನ್ನು ಒಡೆದಿದ್ದಾರೆ. ಒಳಗೆ ನೋಡಿದಾಗ ಹಾಸಿಗೆಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಪೊಲೀಸರು ಮತ್ತು ಫಾರೆನ್ಸಿಕ್ ಲ್ಯಾಬ್  ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.