ಉತ್ತರ ಪ್ರದೇಶ(ಫೆ.  07)  ಇದೊಂದು ತೀರಾ ವಿಚಿತ್ರ ಪ್ರಕರಣ.. ಪತ್ನಿಯನ್ನು ಹತ್ಯೆ ಮಾಡುವ ಪ್ಲಾನ್ ಹಾಕಿಕೊಂಡಿದ್ದ ಗಂಡ ಮಾಡಿದ ಮಾಸ್ಟರ್ ಐಡಿಯಾ!

ಉತ್ತರ ಪ್ರದೇಶದ ಹಮೀರ್ ಪುರದ ಬೆಟ್ವಾ ನದಿ ಪ್ರದೇಶದ ಹೊಲದಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗುತ್ತದೆ. ಎರಡೇ ದಿನದಲ್ಲಿ ಪೊಲೀಸರು  ಆಕೆಯ ಗಂಡನ ಹೆಡೆಮುರಿ ಕಟ್ಟುತ್ತಾರೆ.

ಎರಡು ವರ್ಷದ ಹಿಂದೆ  ಯುವತಿ ಕಂಚನ್ ಅಮಿತ್ ಎಂಬಾತನನ್ನು ಮದುವೆಯಾಗಿದ್ದಳು. ಇಬ್ಬರಿಗೆ ಒಂದು ಮಗು ಸಹ ನಿದೆ. ದಾಂಪತ್ಯ ಕಲಹ ಉಂಟಾಗಿ ಪತ್ನಿ ತವರು ಮನೆಗೆ ಹೋಗಿದ್ದಳು.

'ಒಬ್ಬರೆ ಕೋಣೆಗೆ ಬನ್ನಿ' ಮ್ಯಾನೇಜರ್ ರೂಂಗೆ ಹೋದಳು..!

ಹೆಂಡತಿಯನ್ನು ವಾಪಸ್ ಕರೆದುಕೊಂಡು ಬರಲು ಹೋದ ಗಂಡ ಆಕೆಯ ಮನವೊಲಿಕೆ ಮಾಡಿದ್ದಾನೆ. ಬೆಟ್ವಾ ನದಿ  ತೀರದ ಹೊಲದ ಹತ್ತಿರ ಬಾ ಎಂದಿದ್ದಾನೆ.

ಗಂಡನ ಮಾತು ನಂಬಿದ ಆಕೆ ನದಿ  ತೀರಕ್ಕೆ ಬಂದಿದ್ದಾಳೆ.  ಹೆಂಡತಿ ಮೇಲೆ ಪ್ರೀತಿ ಉಕ್ಕಿ ಅಲ್ಲಿಯೇ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾನೆ. ಆದರೆ ಇದಾದ ಮೇಲೆ ತನ್ನ ನಿಜ ರೂಪ ತೋರಿಸಿದ್ದು  ಕೊಲೆ ಮಾಡಿ ನದಿಗೆ ಎಸೆದಿದ್ದಾನೆ. ಪೊಲೀಸರು ಆರೋಪಿ ಗಂಡನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಎಲ್ಲ ಮಾಹಿತಿಗಳು ಹೊರಕ್ಕೆ ಬಂದಿವೆ.