ಲೈವ್‌ ಸ್ಟೀಮಿಂಗ್‌ ಮಾಡುತ್ತಿದ್ದ ವೇಳೆಯೇ ತನ್ನ ಮಾಜಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ವ್ಯಕ್ತಿಗೆ ಚೀನಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. 

ಲೈವ್‌ ಸ್ಟೀಮಿಂಗ್‌ ಮಾಡುತ್ತಿದ್ದ ವೇಳೆಯೇ ತನ್ನ ಮಾಜಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ವ್ಯಕ್ತಿಗೆ ಚೀನಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. 2020ರ ಸೆಪ್ಟೆಂಬರ್‌ನಲ್ಲಿ ಈ ಅನಾಹುತ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದ ತನ್ನ ಪತ್ನಿ 30 ವರ್ಷದ ಲಮುಗೆ ಮಾಜಿ ಪತಿ ತಾಂಗ್ ಲು ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಬೆಂಕಿ ಹಚ್ಚಿದ ಪರಿಣಾಮ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆಕೆ ಕೆಲ ವಾರಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಈ ಕೌಟುಂಬಿಕ ಕಲಹವೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. 

ಭಾರತದಲ್ಲಿ ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣ ಆಪ್‌ಗಳಾದ ಇನ್ಸ್ಟಾಗ್ರಾಮ್, ಸ್ನಾಪ್ಚಾಟ್‌ನಂತೆ ಚೀನಾದ ಸಾಮಾಜಿಕ ಜಾಲತಾಣ ಆಪ್ ಆದ ಡುಯಿನ್ (Douyin) ಅಲ್ಲಿ ಲೈವ್‌ ಸ್ಟ್ರೀಮ್ ಮಾಡುತ್ತಿದ್ದ ವೇಳೆಯೇ ಮಹಿಳೆ ಲಮುವಿನ ಮಾಜಿ ಪತಿ ತಾಂಗ್ ಲು ಆಕೆಗೆ ಬೆಂಕಿ ಹಚ್ಚಿದ್ದ. ಈ ಘಟನೆಗೆ ಸಂಬಂಧಿಸಿದಂತೆ ನ್ಗಾವಾ ಟಿಬೆಟಿಯನ್ ಮತ್ತು ಕಿಯಾಂಗ್ ಸ್ವಾಯತ್ತ ಪ್ರಿಫೆಕ್ಚರ್ ಮಧ್ಯಂತರ ಜನರ ಕೋರ್ಟ್ ಆರೋಪಿ ತಾಂಗ್ ಲುನನ್ನು ಶನಿವಾರವೇ ಗಲ್ಲಿಗೇರಿಸಿದೆ ಎಂದು ತನ್ನ ಕಿರು ಹೇಳಿಕೆಯಲ್ಲಿ ತಿಳಿಸಿದೆ.

ಅಮರನಾಥ ಯಾತ್ರೆ, ಹಲವರ ಪ್ರಾಣ ಬಲಿ ಪಡೆದ ದಿಢೀರ್ ಪ್ರವಾಹದ ಹಿಂದೆ ಚೀನಾ ಸಂಚು? ಸೌಂಡ್‌ ವೆಬ್‌ ಅಂದ್ರೇನು?

ಮೃತ ಮಹಿಳೆ ಲಮು ಈ ಸಾಮಾಜಿಕ ಜಾಲತಾಣವಾದ ಟಿಕ್‌ಟಾಕ್‌ನ ಚೈನೀಸ್ ಆವೃತ್ತಿಯ ಆಪ್‌ನಲ್ಲಿ ಶಾರ್ಟ್ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದಳು. ಇದರಲ್ಲಿ ಆಕೆ ತನ್ನ ಲೈಫ್‌ಸ್ಟೈಲ್ ಬಗ್ಗೆ ವಿಡಿಯೋಗಳನ್ನು ಹಾಕುತ್ತಿದ್ದಳು. ಜೊತೆಗೆ ಲಮು ತನ್ನ ವಿಡಿಯೋದಲ್ಲಿ ಸಿಚುವಾನ್ ಗ್ರಾಮಾಂತರ ಪ್ರದೇಶದ ಸಂಸ್ಖೃತಿಯನ್ನು ತೋರಿಸಿದ್ದರು. ಅಲ್ಲದೇ ತಮ್ಮ ಜೀವನದ ಬಗ್ಗೆ ಬ್ಲಾಗ್‌ ಮಾಡಿದ್ದರು. ಮೃತ ಮಹಿಳೆ ಲಮು ಅವರು ಟಿಬೆಟಿಯನ್ ಜನಾಂಗದವರಾಗಿದ್ದು, ತಮ್ಮ ವಿಡಿಯೋಗಳಲ್ಲಿ ಸಾಂಪ್ರದಾಯಿಕ ಟಿಬೆಟಿಯನ್ ಉಡುಪುಗಳನ್ನು ಧರಿಸುತ್ತಿದ್ದರು.

ಈ ಘಟನೆಯ ಬಗ್ಗೆ ಲಮು ಅವರ ಸಹೋದರಿ ಸಂಘೈನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತನ್ನ ಸಹೋದರಿ ಹಲವು ವರ್ಷಗಳಿಂದ ತಾಂಗ್‌ನಿಂದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಅಲ್ಲದೇ ಆತನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಳು ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೇ ಘಟನೆ ನಡೆದು ಹಲವು ದಿನಗಳ ಬಳಿಕ ಪೊಲೀಸರು ಮಹಿಳೆಯ ಗಂಡನನ್ನು ವಶಕ್ಕೆ ಪಡೆದಿದ್ದರು. ವರ್ಷಗಳ ಕಾಲ ವಿಚಾರಣೆ ನಡೆದು ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. 

4389 ಕೋಟಿ ತೆರಿಗೆ ವಂಚನೆ: ಚೀನಾ ಮೂಲದ ಮೊಬೈಲ್‌ ಕಂಪನಿ ಒಪ್ಪೊಗೆ ನೋಟಿಸ್‌!