ದೆಹಲಿ ಫೈವ್ ಸ್ಟಾರ್ ಹೊಟೆಲ್‌ನಲ್ಲಿ 2 ವರ್ಷ ವಾಸ, 58 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿ ಪರಾರಿ!
ದೆಹಲಿ ವಿಮಾನ ನಿಲ್ದಾಣ ಬಳಿ ಇರುವ 5 ಸ್ಟಾರ್ ಹೊಟೆಲ್‌ನಲ್ಲಿ ಬರೋಬ್ಬರಿ 603 ದಿನ ವಾಸ. ಬರೋಬ್ಬರಿ 2 ವರ್ಷ ತಂಗಿದ ಬಿಲ್ 58 ಲಕ್ಷ ರೂಪಾಯಿ. ಆದರೆ ಒಂದು ರೂಪಾಯಿ ನೀಡದೆ ಪರಾರಿಯಾದ ಘಟನೆ ಇದೀಗ ಪೊಲೀಸರ ಅಚ್ಚರಿಗೆ ಕಾರಣವಾಗಿದೆ.
ನವದೆಹಲಿ(ಜೂ.21): ಪ್ರತಿಷ್ಠಿತ ಹೊಟೆಲ್ ಇರಲಿ, ಸಾಮಾನ್ಯ ಹೊಟೆಲ್ ಇರಲಿ, ರೂಂ ಪಡೆಯಲು, ತಂಗಲು ಮೊದಲೇ ಪಾವತಿ ಮಾಡಬೇಕು. ಬಾಕಿ ಉಳಿಸುವ, ಸಾಲ ಮಾಡುವ ವ್ಯವಸ್ಥೆ ಇಲ್ಲಿ ಇರುವುದಿಲ್ಲ. ಆದರೆ ದೆಹಲಿಯ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 2 ವರ್ಷ ತಂಗಿದ್ದಾನೆ. ಹೊಟೆಲ್‌ನ ಲ್ಲಿ ಎಲ್ಲಾ ಸೌಲಭ್ಯ, ಆಹಾರ ಸವಿ ಅನುಭವಿಸಿದ್ದಾನೆ. ಈತನ 2 ವರ್ಷದ ಒಟ್ಟು ಬಿಲ್ 58 ಲಕ್ಷ ರೂಪಾಯಿ. ಆದರೆ ಒಂದು ರೂಪಾಯಿಯನ್ನು ನೀಡಿದೆ ಪರಾರಿಯಾದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದಿದೆ.
ಅಂಕುಶ್ ದತ್ತ ಅನ್ನೋ ವ್ಯಕ್ತಿ ದೆಹಲಿಯ ಫೈವ್ ಸ್ಟಾರ್ ರೊಸೀಟ್ ಹೌಸ್ ಹೊಟೆಲ್‌ನಲ್ಲಿ ಬರೋಬ್ಬರಿ 603 ದಿನ ತಂಗಿದ್ದಾನೆ. 2019ರ ಮೇ 30 ರಂದು ಅಂಕುಶ್ ದತ್ತಾ ರೊಸೀಟ್ ಹೊಟೆಲ್‌ಗ ಆಗಮಿಸಿ ಒಂದು ದಿನಕ್ಕೆ ರೂಂ ಬುಕ್ ಮಾಡಿದ್ದಾನೆ. ಮೇ.31ಕ್ಕೆ ಅಂಕುಶ್ ದತ್ತಾ ಚೆಕ್ ಔಟ್ ಆಗಬೇಕಿತ್ತು. ಆದರೆ ಅಂಕುಶ್ ದತ್ತಾ ಮತ್ತೊಂದು ದಿನ ತಂಗಲು ಅವಧಿ ವಿಸ್ತರಿಸಿದ್ದಾನೆ. ಹೀಗೆ ಅವಧಿ ವಿಸ್ತರಿಸುತ್ತಾ ಜನವರಿ 22, 2021ರ ವರೆಗೆ ರೊಸೀಟ್ ಹೊಟೆಲ್‌ನಲ್ಲಿ ಅಂಕುಶ್ ದತ್ತಾ ತಂಗಿದ್ದಾನೆ.
Viral Video : ತಾಜ್ ಹೋಟೆಲ್‌ನಲ್ಲಿ ಚಿಲ್ಲರೆ ನೀಡಿ ಬಿಲ್ ಪಾವತಿಸಿದ ಮುಂಬೈ ವ್ಯಕ್ತಿ!
ಇದರ ನಡುವೆ ಅಂಕುಶ್ ದತ್ತಾ ಬಿಲ್ ಪಾವತಿಗೆ 3 ಚೆಕ್ ನೀಡಿದ್ದಾನೆ. 10 ಲಕ್ಷ ರೂಪಾಯಿ, 7 ಲಕ್ಷ ರೂಪಾಯಿ ಹಾಗೂ 20 ಲಕ್ಷ ರೂಪಾಯಿ ಮೌಲ್ಯದ 3 ಚೆಕ್ ಬೌನ್ಸ್ ಆಗಿದೆ. ಇದರ ನಡುವೆ ಹೊಟೆಲ್ ಸರ್ವರ್ ಹ್ಯಾಕ್ ಮಾಡಿದ್ದಾನೆ. ಹೊಟೆಲ್‌ನಲ್ಲಿ ತಂಗಿರುವ ಇತರ ಅತಿಥಿಗಳು ಅಂಕುಶ್ ದತ್ತಾ ಅವರ ಬಾಕಿ ಮೊತ್ತ ಪಾವತಿ ಮಾಡಿರುವ ರೀತಿ ಹ್ಯಾಕ್ ಮಾಡಿದ್ದಾನೆ. ಇದಕ್ಕೆ ಹೊಟೆಲ್ ಫ್ರಂಟ್ ಆಫೀಸ್ ಸಿಬ್ಬಂದಿ ಪ್ರೇಮ್ ಪ್ರಕಾಶ್ ನೆರವು ನೀಡಿರುವುದು ಬೆಳಕಿ ಬಂದಿದೆ. ಈತನ ನೆರವಿನಿಂದ ಅಂಕುಶ್ ದತ್ತಾ ಹಲವು ಅಕ್ರಮ ಮಾಡಿ ಬರೋಬ್ಬರಿ 2 ವರ್ಷ ತಂಗಿದ್ದಾನೆ.
ಹೊಟೆಲ್ ನಿಯಮದ ಪ್ರಕಾರ ಯಾವುದೇ ಅತಿಥಿ ಯಾವುದೇ ಬಾಕಿ ಉಳಿಸಿಕೊಳ್ಳುವಂತಿಲ್ಲ. 72 ಗಂಟೆಗಳಲ್ಲಿ ಬಾಕಿ ಮೊತ್ತ ಪಾವತಿಸಬೇಕು. ಇಲ್ಲದಿದ್ದರೆ, ಹೊಟೆಲ್ ಮ್ಯಾನೇಜರ್ ಹಾಗೂ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರಕಾಶ್ ಜೊತೆ ಇತರ ಕೆಲ ಸಿಬ್ಬಂದಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೊಟೆಲ್ ಮ್ಯಾನೇಜ್ಮೆಂಟ್ ದೂರು ದಾಖಲಿಸಿದೆ. ಇದೀಗ ಅಂಕುಶ್ ದತ್ತಾಗೆ ಹುಡುಕಾಟ ಆರಂಭಗೊಂಡಿದೆ.
ಹೊಟೆಲ್ ಸಿಬ್ಬಂದಿಗಳು ಹಲವು ನಕಲಿ ಬಿಲ್ ಸೃಷ್ಟಿಸಿದ್ದಾರೆ. ಯಾವುದೇ ಪಾವತಿ ಮಾಡದಿದ್ದರೂ ನಕಲಿ ಬಿಲ್ ಮೂಲಕ ಅಂಕುಶ್ ದತ್ತಾ ಪಾವತಿ ಮಾಡಿರುವುದಾಗಿ ತೋರಿಸಲಾಗಿದೆ. ಇದೀಗ ಹೊಟೆಲ್ ಆಡಳಿತ ಮಂಡಳಿ ಆರೋಪಿ ಹಾಗೂ ಅಕ್ರಮ ಎಸಗಿರುವ ತಮ್ಮ ಹೊಟೆಲ್ ಸಿಬ್ಬಂದಿಗಳ ವಿರುದ್ದ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದೆ.
ಅನಾಥ ವ್ಯಕ್ತಿಗೆ 3 ವರ್ಷಗಳಿಂದ ಆಶ್ರಯ ಕೊಟ್ಟ ಹೋಟೆಲ್ ಮಾಲೀಕ; ಕುಟುಂಬಿಕರಿಗೆ ಹುಡುಕಾಟ!
58 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿದ ಅಂಕುಶ್ ದತ್ತಾ ಸದ್ದಿಲ್ಲದೇ ಪರಾರಿಯಾಗಿದ್ದಾನೆ. ಇತ್ತ ಈತನಿಗೆ ನೆರವು ನೀಡಿರುವ ಕೆಲ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಅಂಕುಶ್ ದತ್ತಾ ಬಂಧಿಸಲು ಹೊಟೆಲ್ ಆಡಳಿತ ಮಂಡಳಿ ದೂರಿನಲ್ಲಿ ಆಗ್ರಹಿಸಿದೆ.