ಅನಾಥ ವ್ಯಕ್ತಿಗೆ 3 ವರ್ಷಗಳಿಂದ ಆಶ್ರಯ ಕೊಟ್ಟ ಹೋಟೆಲ್ ಮಾಲೀಕ; ಕುಟುಂಬಿಕರಿಗೆ ಹುಡುಕಾಟ!
ತಾಲೂಕಿನ ಮುಂಡಾಜೆ ಪರಿಸರದಲ್ಲಿ ಕೋವಿಡ್ ಕಾಲದಲ್ಲಿ ಮಾನಸಿಕ ಅಸ್ವಸ್ಥನಾಗಿ ಅಲೆದಾಡುತ್ತಿದ್ದ ಅನಾಥ ವ್ಯಕ್ತಿಗೆ ಇಲ್ಲಿನ ಹೊಟೇಲ್ ಒಂದರಲ್ಲಿ ಕಳೆದ ಮೂರು ವರ್ಷಗಳಿಂದ ಆಶ್ರಯ ನೀಡಿದ್ದು, ಆತನ ಮೂಲ ಊರು,ಪೋಷಕರು, ಕುಟುಂಬಸ್ಥರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಬೆಳ್ತಂಗಡಿ (ಫೆ.26) : ತಾಲೂಕಿನ ಮುಂಡಾಜೆ ಪರಿಸರದಲ್ಲಿ ಕೋವಿಡ್ ಕಾಲದಲ್ಲಿ ಮಾನಸಿಕ ಅಸ್ವಸ್ಥನಾಗಿ ಅಲೆದಾಡುತ್ತಿದ್ದ ಅನಾಥ ವ್ಯಕ್ತಿಗೆ ಇಲ್ಲಿನ ಹೊಟೇಲ್ ಒಂದರಲ್ಲಿ ಕಳೆದ ಮೂರು ವರ್ಷಗಳಿಂದ ಆಶ್ರಯ ನೀಡಿದ್ದು, ಆತನ ಮೂಲ ಊರು,ಪೋಷಕರು, ಕುಟುಂಬಸ್ಥರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಮುಂಡಾಜೆ(Mundaje)ಯ ಸೋಮಂತಡ್ಕದಲ್ಲಿರುವ ಸಂಗಮ್ ಹೊಟೇಲ್(Sangam Hotel) ಮಾಲೀಕ ಅಬ್ದುಲ್ ಲತೀಫ್((Abdul Latif) ಈ ವ್ಯಕ್ತಿಗೆ ತನ್ನ ಹೊಟೇಲ್‌ನಲ್ಲಿ ಆಶ್ರಯ ನೀಡಿದ್ದಾರೆ. ಅಸ್ಪಷ್ಟವಾಗಿ ಹಿಂದಿ ಮಾತ್ರ ಮಾತನಾಡುವ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಈ ವ್ಯಕ್ತಿ ತನ್ನ ಹೆಸರು ಸುಬ್ಬು ಎಂದು ಹೇಳುತ್ತಾನೆ. ಹೊಟೇಲ್‌ನಲ್ಲಿ ಸಣ್ಣಪುಟ್ಟಕೆಲಸಗಳನ್ನು ನಿರ್ವಹಿಸುವ ಈತನಿಗೆ ತಿಂಗಳ ಸಂಬಳದ ಜತೆ ಆಹಾರ, ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.
ಆಂಧ್ರ ಮೂಲದ ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ; ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತರು
ಈತ ಅಸ್ಪಷ್ಟಮಾತಿನಲ್ಲೇ ತಾನು ಜಾರ್ಖಂಡ್(Jarkhand) ಮೂಲದ ಸನ್ ಜೋಗ್(sun jog) ಎಂಬ ಊರಿನವನು ಎಂದು ಹೇಳುತ್ತಿದ್ದಾನೆ. ತಾನು ಎಲ್ಲಿಂದ ಬಂದದ್ದು,ಯಾಕಾಗಿ ಬಂದದ್ದು ಎಂಬುದು ಈತನಿಗೆ ನೆನಪಿಲ್ಲ.
ಈತನನ್ನು ಮೊದಲಿಗೆ ಮುಂಡಾಜೆಯ ಡಾ.ರವೀಂದ್ರನಾಥ ಪ್ರಭು(Dr Ravindranath Prabhu) ಅವರು ಆರೋಗ್ಯ ತಪಾಸಣೆ ನಡೆಸಿ,ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಿ ಬಳಿಕ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಡಾ.ಮುರಳಿಧರ ಇರ್ವತ್ರಾಯರ ತಂಡ ಹೆಚ್ಚಿನ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿತ್ತು.
ಸ್ಥಳೀಯ ಅಬ್ದುಲ್ ಅಝೀಝ್ ಈತನಿಗೆ ಮಂಗಳೂರಿನಲ್ಲಿ ಮಾನಸಿಕ ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದು ಇದೀಗ ವರ್ತನೆಯಲ್ಲಿ ಕೊಂಚ ಬದಲಾವಣೆ ಕಂಡುಬರುತ್ತಿದೆ.
ವಿಧಿಯೇ ಎಷ್ಟು ಕ್ರೂರ..ಕಾಲಿಲ್ಲದವನ ಬಾಳಿಗೆ ಕಣ್ಣಾದಳು, ಕೈ ಬಿಟ್ಟು ಹೊರಟೇ ಹೋದ!
ಹೊಟೇಲ್ ಮಾಲೀಕ, ಸ್ಥಳೀಯರಾದ ಬಿ.ಎಂ.ಹಂಝ, ಜಾಬೀರ್,ಅಶ್ರಫ್ ಆಲಿ ಕುಂಞ, ನಾರಾಯಣ ಪೂಜಾರಿ ಹಾಗೂ ಇತರ ಸಮಾಜ ಸೇವಕರ ತಂಡದಿಂದ ಈತನ ಕುಟುಂಬಸ್ಥರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಇದೇ ಸಮಾಜ ಸೇವಕರ ತಂಡ 15 ವರ್ಷಗಳ ಹಿಂದೆ ಮುಂಡಾಜೆಯಲ್ಲಿ ಕಂಡುಬಂದಿದ್ದ ಒಡಿಶಾ ಮೂಲದ ಪುರುಷೋತ್ತಮ ಎಂಬ ವ್ಯಕ್ತಿಯನ್ನು ಆತನ ಕುಟುಂಬಕ್ಕೆ ಸೇರಿಸಲು ಯಶಸ್ವಿಯಾಗಿತ್ತು.