Man Stabs Transgender Wife: ವ್ಯಕ್ತಿಯೊಬ್ಬ ತನ್ನ ತೃತೀಯಲಿಂಗಿ ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಬಿಹಾರದಲ್ಲಿ ನಡೆದಿದೆ
ಬಿಹಾರ (ಸೆ. 05): ಬಿಹಾರದ ಸಿವಾನ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತೃತೀಯಲಿಂಗಿ ಪತ್ನಿ (Transgender Wife) ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪತಿಯ ಆಕ್ಷೇಪಣೆಯ ನಂತರವೂ, ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಮಂಗಳಮುಖಿಯರಿಗೆ ಮಾತ್ರ ಸೀಮಿತವಾದ ಸಂಭ್ರಮದ ಹಾಡುಗಳನ್ನು ಹಾಡಲು ಪತ್ನಿ ಇತರ ಜನರ ಮನೆಗೆ ಹೋಗಿದ್ದರು ಎನ್ನಲಾಗಿದೆ. ಈ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪತ್ನಿ ಟ್ರಾನ್ಸಜಂಡರ್ ವ್ಯಕ್ತಿಗಳ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಬಗ್ಗೆ ಪತಿ-ಪತ್ನಿ ಮಧ್ಯೆ ವಿವಾದವಿತ್ತು. ವಾಗ್ವಾದದ ಬೆನ್ನಲ್ಲೇ ಪತಿ ಮೊದಲು ಅವಳನ್ನು ಥಳಿಸಿದ್ದು, ಬಳಿಕ ಸಮಾಧಾನವಾಗದಿದ್ದಾಗ ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಮೂರು ಬಾರಿ ಹಲ್ಲೆ ನಡೆಸಿದ್ದಾನೆ.
ಚೂರಿ ಇರಿತದ ಬಳಿಕ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸೋಮವಾರ ಪತಿ ಆನಂದ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಜಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುಮಾರು ಮೂರು ವರ್ಷಗಳ ಹಿಂದೆ 2019 ರಲ್ಲಿ, ಆನಂದ್ ಕುಮಾರ್ ಚಾಪ್ರಾ ಜಿಲ್ಲೆಯ ಜಂತಾ ಬಜಾರ್ ಪ್ರದೇಶದಲ್ಲಿ ಡ್ಯಾನ್ಸ್ ಪಾರ್ಟಿ ನಡೆಸುತ್ತಿದ್ದರು. ಈ ವೇಳೆ ಆನಂದ್ ಚಾಪ್ರಾದ ಸೆಮಾರಿಯಾ ನಿವಾಸಿ ರಿಯಾ ರಾಜ್ ಎಂಬ ತೃತೀಯಲಿಂಗಿಯೊಬ್ಬಳೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ.
ನಂತರ ಇಬ್ಬರೂ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆ ಪಡೆದು ವಿವಾಹವಾಗಿದ್ದರು. ಇಬ್ಬರೂ ರೈಲ್ವೆ ನಿಲ್ದಾಣದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕ್ರಮೇಣ, ಆನಂದ್ ಮತ್ತು ಅವನ ತೃತೀಯಲಿಂಗಿ ಪತ್ನಿ ರಿಯಾ ರಾಜ್ ನಡುವೆ ಆಕೆಯ ಲೈಂಗಿಕತೆಯ ಬಗ್ಗೆ ಬಿರುಕು ಮೂಡಿದೆ.
ರಿಯಾ ರಾಜ್ ತನ್ನ ಇತರ ತೃತೀಯಲಿಂಗಿ ಸಹಚರರೊಂದಿಗೆ ಸಂಭ್ರಮಾಚರಣೆಯ ಹಾಡುಗಳನ್ನು ಹಾಡಲು ಹೋಗುತ್ತಿದ್ದರು. ಆದರೆ ಇದು ಪತಿ ಆನಂದ್‌ಗೆ ಇಷ್ಟವಿರಲಿಲ್ಲ. ಹೀಗಾಗಿ ಆನಂದ ಪದೇ ಪದೇ ಅವಳನ್ನು ಈ ಕೆಲಸವನ್ನು ಬಿಡುವಂತೆ ಒತ್ತಾಯಿಸಿದ್ದ.
ದೆಹಲಿ: ವಿದೇಶಿ ಮಹಿಳೆ ಮುಂದೆ ಹಸ್ತಮೈಥುನ: ಕ್ಯಾಬ್ ಚಾಲಕ ಅರೆಸ್ಟ್
ಅಲ್ಲದೇ ಆಕೆಯನ್ನು ಆ ಕಂಪನಿಯಿಂದ ದೂರವಿಡಲು ಆನಂದ್ ಆಕೆಯನ್ನು ದೆಹಲಿಗೆ ಕರೆದೊಯ್ದಿದ್ದ. ಆದರೆ ರಿಯಾ ರಾಜ್ ಮತ್ತೆ ಹಳ್ಳಿಗೆ ಅಲ್ಲಿಂದ ಓಡಿಹೋಗಿದ್ದಳು. ಹೀಗಾಗಿ ಅವರು ಅಲ್ಲಿ ಹೆಚ್ಚು ಕಾಲ ವಾಸಿಸಲು ಸಾಧ್ಯವಾಗಿರಲಿಲ್ಲ.
ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಂದ: ಶೀಲ ಶಂಕಿಸಿ ಮಚ್ಚಿನಿಂದ ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಅಮಾನುಷ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಆರ್.ಪುರದ ಟಿ.ಸಿ.ಪಾಳ್ಯ ನಿವಾಸಿ ನೈಸಿ (30) ಕೊಲೆಯಾದ ದುರ್ದೈವಿ.
ಈಕೆಯ ಪತಿ ಜಾನ್ ಸುಪ್ರೀತ್(34) ಬಂಧಿತ. ಪತಿ ಪತ್ನಿಯ ಜತೆ ಜಗಳ ತೆಗೆದು ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮಚ್ಚಿನಿಂದ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ನೈಸಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರದುರ್ಗ ಮೂಲದ ಆರೋಪಿ ಜಾನ್ ಸುಪ್ರೀತ್ 10 ವರ್ಷದ ಹಿಂದೆ ನೈಸಿಯನ್ನು ಪ್ರೀತಿಸಿ ವಿವಾಹವಾಗಿದ್ದ. ದಂಪತಿಗೆ ಆರು ಮತ್ತು ಎಂಟು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಆರು ವರ್ಷಗಳಿಂದ ಟಿ.ಸಿ.ಪಾಳ್ಯದ ಸ್ವಂತ ಮನೆಯಲ್ಲಿ ಕುಟುಂಬ ನೆಲೆಸಿತ್ತು. ನೆಲಮಹಡಿಯಲ್ಲಿ ಜಾನ್ ಪೋಷಕರು ಇದ್ದರು. ಮೊದಲ ಅಂತಸ್ತಿನಲ್ಲಿ ಜಾನ್ ಹಾಗೂ ಪತ್ನಿ ನೈಸಿ ನೆಲೆಸಿದ್ದರು. ಟೆಂಟ್ ಶಾಮಿಯಾನ ವ್ಯವಹಾರ ಮಾಡಿಕೊಂಡಿದ್ದ. ಪತ್ನಿ ನೈಸಿ ಗೃಹಿಣಿಯಾಗಿದ್ದಳು.
ಜಾರ್ಖಂಡ್ ಬುಡಕಟ್ಟು ಬಾಲಕಿ ರೇಪ್, ಕೊಲೆ ಬಳಿಕ ಗರ್ಭಿಣಿ ಎಂಬ ವಿಚಾರ ಬೆಳಕಿಗೆ
ಇತ್ತೀಚೆಗೆ ಪತ್ನಿಯ ಶೀಲ ಶಂಕಿಸಿ ಜಾನ್ ಆಗಾಗ ಮನೆಯಲ್ಲಿ ಪತ್ನಿ ಜತೆಗೆ ಗಲಾಟೆ ಮಾಡುತ್ತಿದ್ದ. ಅದರಂತೆ ಪತ್ನಿ ಜತೆಗೆ ಜಗಳ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೆ ಏರಿದೆ. ಈ ವೇಳೆ ಕೋಪೋದ್ರಿಕ್ತನಾದ ಜಾನ್ ಮಚ್ಚು ತೆಗೆದುಕೊಂಡು ಪತ್ನಿಯ ಕುತ್ತಿಗೆಗೆ ಹೊಡೆದಿದ್ದಾನೆ, ತೀವ್ರ ರಕ್ತ ಸ್ರಾವವಾಗಿ ಆಕೆ ಮೃತಪಟ್ಟಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
