Bengaluru Crime News: ಪ್ರಶ್ನೆ ಮಾಡಿದ್ದ ತಪ್ಪಿಗೆ ವ್ಯಕ್ತಿ ಆಸ್ಪತ್ರೆ ಸೇರುವಂತಾಗಿದೆ. ಕೊಡಿಗೇಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು (ಅ. 14): ಆತ ತಾವಾಯ್ತು ತಮ್ಮ ಕೆಲಸ ಆಯ್ತು ಅಂತಾ ಚಿಕನ್ ತರೋಕೆ ಹೋಗ್ತಿದ್ದ. ಆದ್ರೆ ಕುಡಿದು ಬಾರ್ ಪಕ್ಕ ನಿಂತವರು ಸುಖಾಸುಮ್ಮನೆ ಬೈಯೋಕೆ ಶುರುಮಾಡಿದ್ರು. ಪ್ರಶ್ನೆ ಮಾಡಿದ್ದಕ್ಕೆ ಚಾಕು ತೆಗೆದು ಚುಚ್ಚೇಬಿಟ್ಟಿದ್ರು ಪ್ರಶ್ನೆ ಮಾಡಿದ್ದ ತಪ್ಪಿಗೆ ವ್ಯಕ್ತಿ ಆಸ್ಪತ್ರೆ ಸೇರುವಂತಾಗಿದೆ. ಕೊಡಿಗೇಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ರೋಹಿತ್, ಗೌಸಿದ್ದಿನ್, ಮಂಜುನಾಥ್ ಮತ್ತು ಭಾಗೇಶ್ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕುಡಿದು ಮನೆ ಸೇರೋದು ಬಿಟ್ಟು ರಸ್ತೆ ರಸ್ತೆಗಳಲ್ಲಿ ಕಿರಿಕ್ ಮಾಡಿ ಕಂಡ ಕಂಡವರ ಜೊತೆಗೆ ಜಗಳಕ್ಕೆ ಇಳಿತಿದ್ರು. ಹೀಗಿದ್ದವರು ಏಕಾಏಕಿ ವ್ಯಕ್ತಿಯೊಬ್ಬನನ್ನ ಚಾಕುವಿನಿಂದ ಚುಚ್ಚಿ ಜೈಲು ಸೇರಿದ್ದಾರೆ.
ಹಲ್ಲೆಗೊಳಗಾದ ಅಶ್ವತ್ಥ್ ಕುಮಾರ್ ಮೂಲತಃ ಹಾಸನದವರು. ಬೆಂಗಳೂರಲ್ಲಿ ಬಂದು ಕೆಲಸ ಮಾಡಿಕೊಂಡಿದ್ದರು. ಅಶ್ವತ್ಥ್ ಅಕ್ಟೋಬರ್ 9ನೇ ತಾರೀಖು ಭಾನುವಾರ ಸಂಜೆ 5.30 ಕ್ಕೆ ಚಿಕನ್ ತರೋಕೆ ಅಂತಾ ಹೋಗಿದ್ದರು. ತಮ್ಮ ಪಾಡಿಗೆ ತಾವು ಹೊರಟಿದ್ದವರಿಗೆ ಹೀಗೆ ಆಗತ್ತೆ ಅಂತಾ ಕನಸಲ್ಲೂ ಅನ್ಕೊಂಡಿರ್ಲಿಲ್ಲ. ದೇವಿನಗರ ಬಸ್ ನಿಲ್ದಾಣ ಹತ್ತಿರದ ಶ್ರೀಜಾ ಬೇಕರಿ ಬಳಿ ಬರ್ತಿದ್ದಂತೆ ಅಲ್ಲೇ ಇದ್ದ ದೇವಿ ಬಾರ್ ಬಳಿ ಕುಡಿದು ಟೈಟಾಗಿದ್ದ ಇಬ್ಬರು ರಸ್ತೆಯಲ್ಲಿ ಓಡಾಡೋರಿಗೆಲ್ಲ ಬೈಯೋಕೆ ಶುರು ಮಾಡಿದ್ರು.
Chikkamagaluru; ದಲಿತ ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ಪ್ರಕರಣ, ಹಲ್ಲೆಯಿಂದ ನಡೀತಾ ಗರ್ಭಪಾತ!?
ಹಾಗೆ ಅಶ್ವತ್ಥ್ ಕುಮಾರ್‌ರನ್ನು ಬೈಯೋಕೆ ಶುರು ಮಾಡಿದ್ದಾರೆ. ಯಾರೋ ರಸ್ತೆಯಲ್ಲಿ ಹೋಗ್ತಿದ್ದವರು ಸುಖಾ ಸುಮ್ಮನೆ ಬೈದರು . ಸಹಜವಾಗಿಯೇ ಅಶ್ವತ್ಥ್ ಕುಮಾರ್ ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ರೊಚ್ಚಿಗೆದ್ದ ಇಬ್ಬರು ಅಶ್ವತ್ಥ್ ಮೇಲೆ ಹಲ್ಲೆ ಮಾಡಿದ್ದಾರೆ. ಫೋನ್ ಮಾಡಿ ಮತ್ತಿಬ್ಬರನ್ನ ಕರೆಸಿಕೊಂಡು ಹಿಗ್ಗಾಮುಗ್ಗಾ ರಸ್ತೆಯಲ್ಲಿಯೇ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ರೋಹಿತ್ ಚಾಕು ತೆಗೆದು ಅಶ್ವತ್ಥ್ ಹೊಟ್ಟೆಗೆ ಚುಚ್ಚಿದ್ದಾನೆ. ಗಾಯಗೊಂಡ ಅಶ್ವತ್ಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದಾರೆ.
ಘಟನೆ ಸಂಬಂಧ ದೂರು ದಾಖಲಾಗ್ತಿದ್ದಂತೆ ಬೇಟೆಗಿಳಿದ ಕೊಡಿಗೆಹಳ್ಳಿ ಪೊಲೀಸರು ರೋಹಿತ್,ಗೌಸಿದ್ದಿನ್,ಮಂಜುನಾಥ್ ಮತ್ತು ಭಾಗೇಶ್ ಸೇರಿದಂತೆ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ . ದೂರು ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಈ ಪ್ರಕರಣ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
