Diwali: ಪಟಾಕಿಯಿಂದ ಗಾಯಗೊಂಡರೆ ಈ ಮನೆ ಮದ್ದು ತಕ್ಷಣವೇ ಮಾಡಿ
ದೀಪಾವಳಿ ಹಬ್ಬ (Diwali 2021) ಸಾಕಷ್ಟು ಸಂತೋಷ, ಉತ್ಸಾಹ ಮತ್ತು ಸಮೃದ್ಧಿಯನ್ನು ತರುತ್ತದೆ. ಹಬ್ಬದ ಸಂದರ್ಭದಲ್ಲಿ ದೀಪಗಳ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಆದರೆ ಕೆಲವೊಮ್ಮೆ ಮನೆಯ ಸದಸ್ಯ ಪಟಾಕಿ ಹಚ್ಚುವಾಗ (Fire Crackers) ಸುಟ್ಟಾಗ ಈ ಹಬ್ಬದ ಸಂಭ್ರಮ ಕೆಡುತ್ತದೆ. ಆ ಸಮಯದಲ್ಲಿ, ಮೊದಲು ಏನು ಮಾಡಬೇಕೆಂದು ತಿಳಿಯೋದಿಲ್ಲ. ಇಲ್ಲಿವೆ ಮೊದಲು ಮಾಡುವ ಚಿಕಿತ್ಸೆಗಳು.
ದೀಪಾವಳಿ ಸಮಯದಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ದೃಶ್ಯ ಎಂದರೆ ಪಟಾಕಿಯಿಂದ ಉಂಟಾಗುವಂತಹ ಗಾಯ. ಎಷ್ಟು ಜಾಗೃತೆ ವಹಿಸಿದರೂ ಕೆಲವೊಮ್ಮೆ ಅಪಘಾತ ಸಂಭವಿಸುತ್ತದೆ. ಪಟಾಕಿ ಸಿಡಿದ ಕೂಡಲೇ ಜನರು ಆತಂಕಗೊಳ್ಳುತ್ತಾರೆ ಮತ್ತು ಸಂತ್ರಸ್ತನ ಸ್ಥಿತಿ ಹದಗೆಡುತ್ತದೆ. ಆದ್ದರಿಂದ, ಯಾರಾದರೂ ಪಟಾಕಿಗಳಿಂದ ಸುಟ್ಟರೆ ಪ್ರಥಮ ಚಿಕಿತ್ಸೆ (First Aid) ಏನು ಮಾಡಬೇಕೆಂದು ನೀವು ತಿಳಿದುಕೊಳ್ಳಬೇಕು.
ಸುಟ್ಟ ಭಾಗಕ್ಕೆ ತುಳಸಿ ರಸವನ್ನು ಹಚ್ಚಿ
ಪಟಾಕಿಗಳಿಂದ ಸುಟ್ಟಾಗ ತುಳಸಿ ಎಲೆಗಳು (Basil Leaves) ಬಹಳ ಉಪಯೋಗವಾಗಬಹುದು. ಸುಟ್ಟ ತಕ್ಷಣ ಸುಟ್ಟ ಭಾಗದಲ್ಲಿ ತುಳಸಿ ಎಲೆಗಳನ್ನು ಅರೆದು ಪೇಸ್ಟ್ ಅಥವಾ ತುಳಸಿ ಎಲೆಯ ರಸವನ್ನು ಹಚ್ಚಿ. ಇದರಿಂದ ನಿಮ್ಮ ಕಿರಿಕಿರಿ ಕಡಿಮೆಯಾಗುತ್ತದೆ. ನಂತರ ನೀವು ವೈದ್ಯರನ್ನು ನೋಡಬಹುದು. ಸುಟ್ಟ ಭಾಗದಲ್ಲಿ ತುಳಸಿ ಎಲೆಯ ರಸವನ್ನು ಹಚ್ಚುವುದರಿಂದ ಗುರುತುಗಳು ಕೂಡ ಬರುವುದಿಲ್ಲ.
ತಣ್ಣನೆಯ ನೀರಿನಲ್ಲಿ ಕೈಗಳನ್ನು ಅದ್ದಿ
ಪಟಾಕಿ ಹಚ್ಚುವಾಗ ಉರಿದರೆ ಮೊದಲು ಸುಟ್ಟ ದೇಹದ ಭಾಗದ ಮೇಲೆ ತಣ್ಣೀರು (Chilled Water) ಸುರಿಯಿರಿ. ಕೋಲ್ಡ್ ವಾಟರ್ ಬಳಕೆ ಮಾಡುವುದು ಉತ್ತಮ. ನಿಮ್ಮ ಕೈ ಅಥವಾ ಕಾಲು ಸುಟ್ಟಿದ್ದರೆ, ಸುಟ್ಟ ಭಾಗವನ್ನು ಸ್ವಲ್ಪ ಸಮಯದವರೆಗೆ ತಣ್ಣೀರಿನಲ್ಲಿ ಅದ್ದಿ. ಇಲ್ಲವಾದರೆ ಐಸ್ ಕ್ಯೂಬ್‌ನಿಂದ ಮಸಾಜ್ ಮಾಡಬಹುದು. ನಂತರ ವೈದ್ಯರ ಬಳಿಗೆ ಹೋಗಿ.
ಆಲೂಗಡ್ಡೆ ಮತ್ತು ಕ್ಯಾರೆಟ್ ರಸ ವು ತುಂಬಾ ಪ್ರಯೋಜನಕಾರಿ
ದೇಹದ ಸುಟ್ಟ ಭಾಗದಲ್ಲಿ ಆಲೂಗಡ್ಡೆ ಮತ್ತು ಕ್ಯಾರೆಟ್ ರಸ ಹಚ್ಚುವುದೂ ತುಂಬಾ ಪ್ರಯೋಜನಕಾರಿ. ಸುಟ್ಟ ಭಾಗದಲ್ಲಿ ನೀವು ಕ್ಯಾರೆಟ್ ಮತ್ತು ಆಲೂಗಡ್ಡೆ ಪೇಸ್ಟ್ ಸಹ ಹಚ್ಚಬಹುದು. ಇದರಿಂದ ಕಿರಿಕಿರಿ ಕಡಿಮೆ ಆಗುತ್ತದೆ ಮತ್ತು ಕಲೆಗಳನ್ನು ತಡೆಯುತ್ತದೆ. ಜೊತೆಗೆ ಹೆಚ್ಚು ನೋವು ಸಹ ಉಂಟಾಗುವುದಿಲ್ಲ.
ತೆಂಗಿನ ಎಣ್ಣೆ ತುಂಬಾ ಪರಿಣಾಮಕಾರಿ
ತೆಂಗಿನ ಎಣ್ಣೆಯಲ್ಲಿ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ. ಕೊಬ್ಬರಿ ಎಣ್ಣೆ (Coconut Oil)) ಕೂಡ ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಪಟಾಕಿ ಹಚ್ಚುವಾಗ ಕೈ, ಕಾಲು ಅಥವಾ ದೇಹದ ಯಾವುದೇ ಭಾಗ ಸುಟ್ಟುಕೊಂಡರೆ, ಆ ಭಾಗದಲ್ಲಿ ಕೊಬ್ಬರಿ ಎಣ್ಣೆ ಹಚ್ಚಿ. ತೆಂಗಿನೆಣ್ಣೆಯು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ವೈದ್ಯರನ್ನು ಭೇಟಿ ಮಾಡಿ:
ಪಟಾಕಿ ಕೈಯಲ್ಲಿ ಸುಟ್ಟುಕೊಂಡರೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆದು ಕೊಡುವತ್ತ ಗಮನ ಹರಿಸಿ. ಗಂಭೀರ ಗಾಯವಾದರೆ ತಡ ಮಾಡಲೇ ಬೇಡಿ. ಇದರಿಂದ ತೀವ್ರತೆಯನ್ನು ಬೇಗನೆ ಕಡಿಮೆ ಮಾಡಬಹುದು. ಅಥವಾ ಚಿಕಿತ್ಸೆ ನೀಡುವುದು ಸಹ ಸುಲಭ. ಆದುದರಿಂದ ಬೇಗನೆ ಆಸ್ಪತ್ರೆಗೆ ದಾಖಲಾಗುವಂತೆ ನೋಡಿಕೊಳ್ಳಿ.
(Disclaimer: ಇಲ್ಲಿ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ. ಜೊತೆಗೆ ಪಟಾಕಿ ಸಿಡಿಸುವ ಮುನ್ನವೂ ಹೆಚ್ಚು ಜಾಗರೂಕರಾಗಿರುವುದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಪಟಾಕಿಯಿಂದ ಹಬ್ಬದ ಸಂಭ್ರಮವನ್ನು ಕಳೆದುಕೊಳ್ಳಬೇಡಿ)