ಅಕ್ರಮ ಸಂಬಂಧ ವಿಚಾರ ಪತಿ ಹಾಗೂ ಪತ್ನಿ ನಡುವೆ ಜಗಳ ಶುರುವಾಗಿದೆ. ಆಕ್ರೋಶಗೊಂಡ ಪತಿ ಮನೆಗೆ ಬೆಂಕಿ ಹಚ್ಚಿದ್ದಾನೆ. ನೆರವಿಗೆ ಬಂದ ನೆರಮೆಯವರು ಸೇರಿ 10ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಘಾಜಿಯಾಬಾದ್(ಮಾ.11): ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ. ಆದರೆ ಈ ಮಾತು ಈಗಿನ ಕಾಲಕ್ಕೆ ಅನ್ವಯಿಸುವುದು ತೀರಾ ವಿರಳ. ಕಾರಣ ಈಗಿನ ಪತಿ ಪತ್ನಿಯರ ಜಗಳ ಅತೀರೇಖದಲ್ಲಿ ಅಂತ್ಯಗೊಳ್ಳುತ್ತಿದೆ. ಇದೀಗ ಇಲ್ಲೊಬ್ಬ ಭೂಪ ಪತ್ನಿ ಜೊತೆ ಜಗಳವಾಡಿದ್ದಾನೆ. ವಾಗ್ವಾದ ಹೆಚ್ಚಾಗಿ ಆಕ್ರೋಶಗೊಂಡಿದ್ದಾನೆ. ಬಳಿಕ ತನ್ನ ಮನೆಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಈ ಘಟನೆಯಲ್ಲಿ ನೆರವಿಗೆ ಧಾವಿಸಿದ ನೆರಮನೆಯವರು ಸೇರಿ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ.

ತಿಲಕನಗರ ಕಾಲೋನಿಯ 40 ವರ್ಷದ ಸುರೇಶ್ ತನ್ನ ಪತ್ನಿ 36 ವರ್ಷದ ರಿತು ಜೊತೆ ಜಗಳವಾಡಿದ್ದಾನೆ. ಪತಿಯ ಅಕ್ರಮ ಸಂಬಂಧ ಕುರಿತು ಪತ್ನಿ ಪ್ರಶ್ನಿಸಿದ್ದಾಳೆ. ಅದೇ ಏರಿಯಾದಲ್ಲಿರುವ ವಿಧವೆ ಜೊತೆ ತನ್ನ ಪತಿಗೆ ಅಕ್ರಮ ಸಂಬಂಧವಿದೆ ಎಂದು ಪತ್ನಿ ಆರೋಪಿಸಿದ್ದಾಳೆ. ಹಲವು ಬಾರಿ ಈ ಕುರಿತು ಎಚ್ಚರಿಕೆ ನೀಡಿದ್ದಾಳೆ. ಈ ವಿಚಾರದ ಕುರಿತು ಪತಿ ಹಾಗೂ ಪತ್ನಿಗೆ ತೀವ್ರ ಜಗಳವಾಗಿದೆ. ಮೊದಲೇ ಅನುಮಾನ ಇದರ ಜೊತೆಗೆ ವಾಗ್ವಾದಗಳಿಂದ ಸುರೇಶ ಆಕ್ರೋಶಗೊಂಡಿದ್ದಾನೆ. ಮಾತು ಮಾತಿಗೂ ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಸುರೇಶನ ಬೆದರಿಕೆಗೆ ಜಗ್ಗದ ಪತ್ನಿ, ಅಷ್ಟೇ ಖಾರವಾಗಿ ವಾಗ್ವಾದ ಮಾಡಿದ್ದಾರೆ.

ಸೆಮಿಸ್ಟರ್‌ನಲ್ಲಿ ಫೇಲ್‌ ಮಾಡಿದ್ದಕ್ಕೆ ಪ್ರಿನ್ಸಿಪಾಲ್‌ ಮೇಲೆ ಪೆಟ್ರೋಲ್‌ ಸುರಿದ ಬೆಂಕಿ ಹಚ್ಚಿದ ವಿದ್ಯಾರ್ಥಿ!

ಸುರೇಶ ಪಿತ್ತ ನೆತ್ತಿಗೇರಿದೆ. ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಪೈಪ್ ಎಳೆದು ಗ್ಯಾಸ್ ಆನ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಗ್ಯಾಸ್ ಮನೆಯೊಳಗೆ ಹರಡತೊಡಗಿದೆ. ಗಾಬರಿಗೊಂಡ ಪತ್ನಿ ಸಹಾಯಕ್ಕಾಗಿ ಕೂಗಿದ್ದಾಳೆ. ರಿತು ಕೂಗಾಟ ಕೇಳಿಸಿದ ನೆರಮನೆಯವರು ಓಡೋಡಿ ಬಂದಿದ್ದಾರೆ. ಇತ್ತ ಸುರೇಶನ ಆಕ್ರೋಶ ಮಾತ್ರ ತಣ್ಣಗಾಗುವ ಬದಲು ಹೆಚ್ಚಾಗಿದೆ. ತಮ್ಮ ಜಗಳದಲ್ಲಿ ಇದೀಗ ನೆರೆಮನೆಯರು ಬರುವಂತಾಯಿತು ಎಂದು ಆಕ್ರೋಶಗೊಂಡ ಸುರೇಶ ಬೆಂಕಿ ಹಚ್ಚಿದ್ದಾನೆ.

ಗ್ಯಾಸ್ ಹರಡಿದ ಕಾರಣ ಒಂದೇ ಸಮನೆ ಮನೆಗೆ ಬೆಂಕಿ ಹತ್ತಿಕೊಂಡಿದೆ.ಜೊತೆ ಸಣ್ಣ ಸ್ಫೋಟವೂ ನಡೆದಿದೆ. ಇದರ ಪರಿಣಾಮ ಪತ್ನಿ, ಸುರೇಶ ಹಾಗೂ ನೆರಮನೆಯವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಸ್ಸಾಂನ ಗುವಾಹಟಿಯಲ್ಲಿ ಭಾರೀ ಬೆಂಕಿ, 150 ಮನೆಗಳು ಸುಟ್ಟು ಭಸ್ಮ!

ಸುರೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಕ್ರಮ ಸಂಬಂಧ, ಕೌಟುಂಬಿಕ ದೌರ್ಜನ್ಯ ಜೊತೆಗೆ ಪತ್ನಿಯನ್ನು ಹತ್ಯೆಗೆ ಯತ್ನ ಪ್ರಕರಣವೂ ದಾಖಲಾಗಿದೆ. ಇತ್ತ ನೆರವಿಗೆ ಧಾವಿಸಿದ ನೆರೆಮನೆಯವರಿಗೂ ಗಾಯಗಳಾಗಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ನೆರಮನೆಯವರು, ರಿತು ಅವರ ಕೂಗಾಟ ಕೇಳಿ ನೆರವಿಗೆ ತೆರಳಿದ್ದೇವೆ. ಈ ವೇಳೆ ಘಟನೆ ಸಂಬಭವಿಸಿದೆ. ಇದೇ ವೇಳೆ ಪತಿ ಹಾಗೂ ಪತ್ನಿಯರ ನಡುವೆ ಜಗಳದ ನಡುವೆ ಹೋಗಲೇಬಾರದು ಎಂದು ಕಿವಿಮಾತನ್ನು ಹೇಳಿದ್ದಾರೆ.