ಅಸ್ಸಾಂನ ಗುವಾಹಟಿಯಲ್ಲಿ ಭಾರೀ ಬೆಂಕಿ, 150 ಮನೆಗಳು ಸುಟ್ಟು ಭಸ್ಮ!


ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಬೆಂಕಿ ಅನಾಹುತಕ್ಕೆ ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ.

Massive Fire Breaks Out In Assams Guwahati Dousing Operation Underway san

ನವದೆಹಲಿ (ಫೆ.24): ಗುವಾಹಟಿಯ ಹಟಿಗಾಂವ್ ಪ್ರದೇಶದ ಅಜಂತಾ ಪಥದಲ್ಲಿ ಗುರುವಾರ ರಾತ್ರಿ ಸಂಭವಿಸಿದ ದೊಡ್ಡ ಬೆಂಕಿಯಲ್ಲಿ 150 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತವಾಗಿವೆ. ಮೂಲಗಳ ಪ್ರಕಾರ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಾಗಿದ್ದರೂ ಬೆಂಕಿ ಅನಾಹುತದಲ್ಲಿ ಲಕ್ಷಾಂತರ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ನಂಬಲಾಗಿದೆ. ಗುರುವಾರ ರಾತ್ರಿ 10.30ರ ಸುಮಾರಿಗೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 150ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ರಿಜು ಅಲಿ ಎಂಬುವವರ ಮನೆಯಿಂದ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಬೆಂಕಿ ಅನಾಹುತಕ್ಕೆ ನಿಖರ ಕಾರಣ ಏನೆನ್ನುವುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 'ಊಟ ಮುಗಿಸಿ ನಾವು ಮಲಗಲು ಹೊರಟಿದ್ದೆವು. ಈ ವೇಳೆ ನಮ್ಮ ಮನೆಯ ಇನ್ನೊಂದು ಕೋಣೆಯಿಂದ ದಟ್ಟವಾದ ಹೊಗೆ ಏರುತ್ತಿರುವುದುನ್ನು ಗಮನಿಸಿದೆವು. ಬಳಿಕ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳು ಎಲ್ಲರನ್ನೂ ಎಚ್ಚರಿಸಿದ್ದಲ್ಲದೆ, ಪೊಲೀಸರು ಹಾಗೂ ಸ್ಥಳೀಯ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದೆವು' ಎಂದು ರಿಜು ಅಲಿ ತಿಳಿಸಿದ್ದಾರೆ.

"ಹಲವಾರು ಎಲ್‌ಪಿಜಿ ಸಿಲಿಂಡರ್‌ಗಳ ಸ್ಫೋಟದಿಂದಾಗಿ ಬೆಂಕಿಯು ವೇಗವಾಗಿ ಹರಡಿತು. ಬೆಂಕಿಯು ಇಡೀ ಪ್ರದೇಶವನ್ನು ಕೆಲವೇ ಸಮಯದಲ್ಲೇ ಆವರಿಸಿತು ಮತ್ತು ಹಲವಾರು ಮನೆಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಿತು. ಬೆಂಕಿ ವೇಗವಾಗಿ ಇಡೀ ಪ್ರದೇಶವನ್ನು ವ್ಯಾಪಿಸಿದ್ದರಿಂದ ನಮಗೆ ಯಾವುದೇ ವಸ್ತುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಬೆಂಕಿಯಿಂದಾಗಿ ನಾವು ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದೇವೆ' ಎಂದು ಅಲಿ ಹೇಳಿದ್ದಾರೆ.

ನನ್ ಹೆಂಡ್ತಿನೂ ಹೀಗೆ ಕೈ ಹಿಡಿದಿಲ್ಲ ಎಂದ ಗಾಯಕ: ಬನ್ನಿ ಕೈ ಹಿಡಿದು ಕಮಲ ಮುಡಿಸುವೆ ಎಂದ ಸಚಿವ

15 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದವು. ಅಗ್ನಿಶಾಮಕ ಸಿಬ್ಬಂದಿ ಮೂರು ಗಂಟೆಗೂ ಹೆಚ್ಚು ಕಾಲ ಹರಸಾಹಸ ಮಾಡಿ ಬೆಂಕಿ ನಂದಿಸಿದರು. “ಘಟನೆಯ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣ ನಾವು ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಭಾರೀ ಶಾಖವು ನಮಗೆ ಕಾರ್ಯಾಚರಣೆಯನ್ನು ಇನ್ನಷ್ಟು ಕಷ್ಟ ಮಾಡಿತು ಮತ್ತು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ನಾವು ಶ್ರಮಿಸಬೇಕಾಯಿತು, ”ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಬಾಲ್ಯ ವಿವಾಹವಾದವರನ್ನು ಬಂಧಿಸಿದ್ದಕ್ಕೆ ಅಸ್ಸಾಂ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ನಾಶವಾದ ಬಹುತೇಕ ಮನೆಗಳು ಹುಲ್ಲಿನ ಮನೆಗಳಾಗಿವೆ. ಎಲ್ಲಾ ಮನೆಗಳು ರಿಜು ಅಲಿ ಅವರಿಗೆ ಸೇರಿದ್ದು, ಬಾಡಿಗೆದಾರರು ಹೆಚ್ಚಾಗಿ ದಿನಗೂಲಿ ಕಾರ್ಮಿಕರಾಗಿದ್ದರು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ, ಇಡೀ ಪ್ರದೇಶವನ್ನು ದಟ್ಟವಾದ ಹೊಗೆ ಆವರಿಸಿತು ಮತ್ತು ಭಯಭೀತರಾದ ಜನರು ಸ್ಥಳದಿಂದ ಓಡಿದ್ದರು. ಎರಡು ಕಾರುಗಳು ಸಹ ಬೆಂಕಿಗೆ ಆಹುತಿಯಾಗಿವೆ. ಈ ನಡುವೆ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಬೆಂಕಿಯಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡ ಕೆಲವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಸ್ಥಳಗಳಿಗೆ ತೆರಳಿದರು ಇನ್ನೂ ಅನೇಕ ವ್ಯಕ್ತಿಗಳು ನಿರಾಶ್ರಿತರಾಗಿ ದಿನಗಳನ್ನು ಕಳೆದರು.

Latest Videos
Follow Us:
Download App:
  • android
  • ios