Asianet Suvarna News Asianet Suvarna News

ಕಪ್ಪಗಿದೆ ಎಂದು 18 ತಿಂಗಳ ಮಗಳಿಗೆ ವಿಷ ನೀಡಿ ಕೊಂದ ಕ್ರೂರಿ, ಇವನೆಂಥಾ ತಂದೆ?

ಮಗು ಕಪ್ಪಗಿದೆ ಎಂದು ಪತಿಯ ಕಿರಕುಳ ಆರಂಭಗೊಂಡಿದೆ. ಪತ್ನಿಗೆ ಕಿರುಕುಳದ ಜೊತೆ ತನ್ನ ಮಗಳನ್ನೇ ಹಲವು ಬಾರಿ ಸಾಯಿಸುವ ಪ್ರಯತ್ನ ಮಾಡಿದ್ದಾನೆ. ಕೊನೆಗೆ 18 ತಿಂಗಳ ಪುಟ್ಟ ಕಂದಮ್ಮಗೆ ವಿಷ ನೀಡಿ ಕೊಂದೇ ಬಿಟ್ಟಿದ್ದಾನೆ.
 

Man poisoned little daughter due to dark skin in Vijayawada Andhra Pradesh ckm
Author
First Published Apr 7, 2024, 10:30 PM IST

ವಿಜಯವಾಡ(ಏ.07) ಮುದ್ದಾದ ಪುಟ್ಟ ಕಂದಮ್ಮ. ಜಗತ್ತನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ 18 ತಿಂಗಳ ಹೆಣ್ಣು ಮಗು ತನ್ನ ತಂದೆಯ ಕ್ರೂರಕ್ಕೆ ಬಲಿಯಾಗಿದ್ದಾಳೆ. ಮಗು ಕಪ್ಪಗಿದೆ ಎಂದು ವಿಷ ನೀಡಿ ಸಾಯಿಸಿದ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಮಗುವನ್ನು ಹತ್ಯೆ ಮಾಡಿ, ಪತ್ನಿಗೂ ಕಿರುಕುಳ ನೀಡಿ ವಿಕೃತಿ ಮೆರೆದಿದ್ದಾನೆ. ಯಾರೂ ಕೇಳಿದರೂ ಆರೋಗ್ಯ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಹೇಳಬೇಕೆಂದು ಗದರಿಸಿ ಘಟನೆಯನ್ನೇ ಮುಚ್ಚಿಡುವ ಪ್ರಯತ್ನವನ್ನೂ ಮಾಡಿದ್ದ. ಆದರೆ ಪತ್ನಿಯ ತಾಯಿ ಅನುಮಾನಗೊಂಡ ಕಾರಣ ಘಟನೆ ಬೆಳಕಿಗೆ ಬಂದಿದೆ.

ಪೆಟ್ಟಸನ್ನೆಗಂಡ್ಲ ಗ್ರಾಮದ ಮಹೇಶ್ ಈ ಕ್ರೂರಿ ತಂದೆ. ಒಂದು ವರ್ಷದ ಹಿಂದೆ ಮಹೇಶ್ ಪಕ್ಕದ ಊರಿನ ಶ್ರಾವಣಿಯನ್ನು ಮದುವೆಯಾಗಿದ್ದ. ಇವರಿಗೆ ಮುದ್ದಾದ ಹೆಣ್ಣು ಮಗು ಜನಸಿತ್ತು. ಆದರೆ ಬಣ್ಣ ಕಪ್ಪು ಎಂದು ಮಹೇಶ್ ಹಾಗೂ ಆತನ ಮನೆಯವರು ಕಿರಕುಳ ಆರಂಭಿಸಿದ್ದರು. ಇದೇ ಕಾರಣದಿಂದ ಪತ್ನಿಯನ್ನು ಅನುಮಾನದಿಂದ ಪ್ರಶ್ನಿಸುವ ಖಯಾಲಿ ಕೂಡ ಆರಂಭಗೊಂಡಿತ್ತು.

ಸ್ಕೂಲ್ ಗರ್ಲ್ ರೀತಿ ಪೋಸ್ ನೀಡಿ ಅಪ್ರಾಪ್ತ ಬಾಲಕರ ಜೊತೆ ಸೆಕ್ಸ್, 23ರ ಇನ್ಲುಫೆಯೆನ್ಸರ್ ಅರೆಸ್ಟ್!

ಎಲ್ಲವನ್ನೂ ಸಹಿಸಿಕೊಂಡು ಮಗುವಿನಲ್ಲಿ ನಗು ನೋಡುತ್ತಿದದ್ ತಾಯಿ ಶ್ರಾವಣಿ ದಿನ ದೂಡುತ್ತಿದ್ದಳು. ಇದರ ನಡುವೆ ಶ್ರಾವಣಿಯನ್ನು ಕೋಣೆಯಲ್ಲಿ ಲಾಕ್ ಮಾಡಿ ಮಗುವನ್ನು ಸಾಯಿಸುವ ಪ್ರಯತ್ನವನ್ನೂ ಈತ ಮಾಡಿದ್ದ. ಆದರೆ ಫಲಪ್ರದವಾಗಿರಲಿಲ್ಲ. ಮಗುವನ್ನು ಎಸೆಯುವ ಪ್ರಯತ್ನವನ್ನೂ ಮಾಡಿ ಕೈಬಿಟ್ಟಿದ್ದ. ಆದರೆ ಮಾರ್ಚ್ 31ರಂದು ಶ್ರಾವಣಿ ಕೆಲದಲ್ಲಿ ಮಗ್ನರಾಗಿದ್ದ ವೇಳೆ ಮಗುವಿಗೆ ವಿಷ ಕುಡಿಸಿದ್ದಾನೆ. 

ಶ್ರಾವಣಿ ಕೆಲಸ ಮುಗಿಸಿ ಬರುವಷ್ಟರೊಳಗೆ ಮಗುವಿನ ಮೂಗಿನಲ್ಲಿ ರಕ್ತ ಸೋರಿಕೆಯಾಗುತ್ತಿರುವುದು ಗಮನಿಸಿದ್ದಾಳೆ. ಮುಗು ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ಇತ್ತ ಮಹೇಶ ಮೆಲ್ಲನೆಯಿಂದ ಮೆಯಿಂದ ಕಾಲ್ಕಿತ್ತಿದ್ದ. ತಕ್ಷಣವೇ ಮಗುವನ್ನು ಎತ್ತಿಕೊಂಡು ಹತ್ತಿದರ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದಾರೆ. ಈ ವೇಳೆ ಮಗು ಮೃತಪಟ್ಟಿದೆ. 

ನಾಟಕವಾಡಿದ ಮಹೇಶ ಆಸ್ಪತ್ರೆಗೆ ಆಗಮಿಸಿ ತರಾತುರಿಯಲ್ಲಿ ಮಗುವನ್ನು ಪಡೆದು ಮನೆಗೆ ಮರಳಿ ಅಂತ್ಯಸಂಸ್ಕಾರ ನಡೆಸಿದ್ದಾನೆ. ಇಷ್ಟೇ ಮಗು ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ಹೇಳುವಂತೆ ಗದರಿಸಿದ್ದಾನೆ. ಗಂಡನ ಮಾತಿಗೆ ಬೆದರಿ ಎಲ್ಲವನ್ನೂ ಶ್ರಾವಣಿ ಮುಚ್ಚಿಟ್ಟಿದ್ದಾಳೆ. ಆದರೆ ಶ್ರಾವಣಿ ತಾಯಿ ಅನುಮಾನಗೊಂಡಿದ್ದಾರೆ. ಹೀಗಾಗಿ ಪಂಚಾಯತ್‌ನಲ್ಲಿ ಈ ಕುರಿತ ಮಾಹಿತಿ ನೀಡಿದ್ದಾಳೆ. ಇತ್ತ ಗ್ರಾಮಸ್ಥರು ಆಗಮಿಸಿದ್ದಾರೆ. ಪೊಲೀಸರು ಆಗಮಿಸಿದಾಗ ಶ್ರಾವಣಿ ನಡೆದ ಘಟನೆ ವಿವರಿಸಿದ್ದಾಳೆ.

ಮಹೇಶನ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇತ್ತ ಹೂತಿದ್ದ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಕ್ರೈಂ ಸಿಟಿ ಆಗ್ತಿದೆಯಾ ಕಲಬುರಗಿ? ಹಾಡಹಗಲೇ ಇಬ್ಬರ ಮಹಿಳೆಯ ಬರ್ಬರ ಹತ್ಯೆ!

Follow Us:
Download App:
  • android
  • ios