ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಪತಿ ರೈಲು ಬರೋದನ್ನ ಗಮನಿಸದೆ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಂಜನಗೂಡು ಬಳಿ ನಡೆದಿದೆ.

ನಂಜನಗೂಡು (ಮಾ.5): ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಪತಿ ರೈಲು ಬರೋದನ್ನ ಗಮನಿಸದೆ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಂಜನಗೂಡು ಬಳಿ ನಡೆದಿದೆ. ವಿಡಿಯೋ ಕಾಲ್ ವೇಳೆ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಯುವಕ ಬಿಹಾರ ಮೂಲದ ಮನುಕುಮಾರ್ (27) ಎಂದು ಗುರುತಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Rameshwaram Cafe Blast ಬೆನ್ನಲ್ಲೇ ಸಿಎಂ, ಡಿಸಿಎಂ ಸೇರಿ ರಾಜ್ಯ ಸರ್ಕಾರಕ್ಕೆ ಬಾಂಬ್‌ ಬೆದರಿಕೆ ಮೇಲ್!

ಈತ ದೊಡ್ಡಕವಲಂದೆಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಬೆಳಿಗ್ಗೆ 7:40 ಕ್ಕೆ ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನೋ ವೇಳೆ ಈ ಅವಘಡ‌ ಸಂಭವಿಸಿದೆ. ರೈಲು ಚಾಮರಾಜನಗರ ಕಡೆಯಿಂದ ಮೈಸೂರಿಗೆ ಬರುತ್ತಿತ್ತು. ರೈಲು ಹಳಿ ಪಕ್ಕದಲ್ಲಿ ಕೂತು ಮಾತನಾಡುವಾಗ ಈ ಅವಘಡ ನಡೆದಿದೆ. ಸ್ಥಳಕ್ಕೆ ನಂಜನಗೂಡು ರೈಲ್ವೆ ಸಿಬ್ಬಂದಿ,‌ ಪೊಲೀಸರು ಭೇಟಿ ನೀಡಿ. ನಂಜನಗೂಡು ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಶವ ರವಾನೆ ಮಾಡಲಾಗಿದ್ದು, ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಸಂಚು, ಆರೋಪಿ ಅಜರ್‌ ಬಂಧನ