Asianet Suvarna News Asianet Suvarna News

ಪತ್ನಿ ಹತ್ಯೆ ಮಾಡಿ ತುಂಡುತುಂಡಾಗಿ ಕತ್ತರಿಸಿ ಬೇಯಿಸಿದ!

* ಕ್ಷುಲ್ಲಕ ಜಗಳಕ್ಕೆ ಪತ್ನಿ ಹತ್ಯೆ ಮಾಡಿ ಬೇಯಿಸಿದ
* ಮಗಳು ಅನುಮತಿಯಿಲ್ಲದೆ ಹಣ ತೆಗೆದುಕೊಂಡಿದ್ದಕ್ಕೆ ಪಾಪಿ ತಂದೆಯ ಕೆಲಸ
* ಪತ್ನಿ ಶವ ಕತ್ತರಿಸಿ ಕಾಲುವೆಗೆ ಎಸೆದ 
* ಅನುಮಾನಗೊಂಡ ಅಕ್ಕಪಕ್ಕದವರಿಂದ ಅಧಿಕಾರಿಗಳಿಗೆ ಮಾಹಿತಿ

Man murders wife chops body into several pieces and burns them in tandoor mah
Author
Bengaluru, First Published Jun 22, 2021, 6:31 PM IST
  • Facebook
  • Twitter
  • Whatsapp

ಇಸ್ಲಾಮಾಬಾದ್(ಜೂ.  22)  ಪಾಕಿಸ್ತಾನದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಸುಟ್ಟುಹಾಕಿದ್ದಾನೆ.

ಮಗಳು ತನ್ನ ಅಂಗಡಿಯಿಂದ ತನ್ನ ಅನುಮತಿಯಿಲ್ಲದೆ ಸ್ವಲ್ಪ ಹಣವನ್ನು ತೆಗೆದುಕೊಂಡಿದ್ದಕ್ಕೆ ವ್ಯಕ್ತಿ ಕೆಂಡಾಮಂಡಲವಾಗಿದ್ದ. ಇದೇ ವಿಚಾರಕ್ಕೆ ಸಸಂಬಂಧಿಸಿ ಗಂಡ-ಹೆಂಡತಿ ನಡುವೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿದ್ದು  ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ.

ಆರೋಪಿ ಮುಹಮ್ಮದ್ ಷರೀಫ್ ಕಹ್ರೋರ್ ಪಕ್ಕಾ ತಹಸಿಲ್‌ನ ಚೀಲಾ ವಹಾನ್ ನಿವಾಸಿ. ಷರೀಫ್ ಹತ್ತಿರದ ಪ್ರದೇಶದಲ್ಲಿ  ಅಂಗಡಿ ನಡೆಸುತ್ತಿದ್ದ. ಸುಮಾರು 12 ವರ್ಷಗಳ ಹಿಂದೆ ಇಶ್ರತ್ ಎಂಬ  ಮಹಿಳೆಯನ್ನು ಮದುವೆಯಾಗಿದ್ದ.

ಮೈಸೂರು; ಬೇರೆ ಜಾತಿ ಯುವಕನ ಪ್ರೀತಿಸುತ್ತಿದ್ದ ಮಗಳ ಕೊಚ್ಚಿ ಕೊಂದ ತಂದೆ

ಎರಡು ದಿನಗಳ ಹಿಂದೆ ಷರೀಫ್ ಮಗಳು ಹಲೀಮಾ ಸಾದಿಯಾ ತಿಂಡಿ ತಿನ್ನಲೆಂದು ಅಂಗಡಿಯಿಂದ ಹಣ ತೆಗೆದುಕೊಂಡಿದ್ದಾಳೆ.  ನಂತರ ಇದೇ ವಿಚಾರಕ್ಕೆ ಸಂಬಂಧಿಸಿ ಕುಟುಂಬದಲ್ಲಿ ಗಲಾಟೆ ಆರಂಭವಾಗಿದೆ.

ಜೂನ್ 14 ರಂದು, ಷರೀಫ್ ಅವರ ಮೂವರು ಮಕ್ಕಳು  ಶಾಲೆಯಿಂದ ಮನೆಗೆ ಬಂದಿದ್ದಾರೆ. ಈ ವೇಳೆ ಪತ್ನಿ ಇಶ್ರತ್ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಭಾವಿಸಿ ಮಕ್ಕಳನ್ನು ಇನ್ನೊಂದು ಕಡೆ ಕಳಿಸಿದ್ದಾನೆ.  ಹಾಸಿಗೆಯ ಮೇಲೆ ಕುಳಿತಿದ್ದ ಮಹಿಳೆಯ ಕುತ್ತಿಗೆಯನ್ನು ಚಿಕ್ಕ ಹಿಮ ಪಿಕಾಸಿಯಿಂದ   ಕುತ್ತಿಗೆ ಸೀಳಿದ್ದಾನೆ. ನಂತರ ಹೆಂಡತಿ ಸತ್ತು ಬಿದ್ದಿದ್ದು ಆಕೆಯ ಶವ ಸಾಗಿಸಲು ಹರಸಾಹಸ ಮಾಡಿದ್ದಾನೆ. ಸಾಧ್ಯವಾಗಲ್ಲ ಎಂದು ಗೊತ್ತಾದಾಗ ಕೊಡಲಿಯಿಂದ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಬೇಯಿಸಿದ್ದಾನೆ. ನಂತರ ಹತ್ತಿರದ ಕಾಲುವೆಗೆ ಎಸೆದು ಬಂದಿದ್ದಾನೆ.

ಗಲಾಟೆ ನಡೆದಾಗ ಪಕ್ಕದ ಮನೆಯವರಿಗೆ ಕೇಳಿದೆ. ಅಲ್ಲಿಗೆ ಬಂದ ಅಬ್ದುಲ್ ಅಜೀಜ್ ಮತ್ತು ಹಫೀಜ್ ಮುಹಮ್ಮದ್ ಹನೀಫ್ ಈ ಬಗ್ಗೆ ಪ್ರಶ್ನೆ ಮಾಡಿದಾಗ ಇದು ನನ್ನ ವೈಯಕ್ತಿಕ ವಿಷಯ ನೀವು ಬರಬೇಡಿ ಎಂದು ಹೇಳಿದ್ದಾನೆ. ಪತ್ನಿ ಎಲ್ಲಿ ಎಂದು ಕೇಳಿದಾಗ ತಂದೆ ಮನೆಗೆ ತೆರಳಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಅನುಮಾನಗೊಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios